ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸುವ ಮೂಲಕ ಮತದಾರರಿಗೆ ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳ ಮಾಹಿತಿ ನೀಡಿ

0
63

ಖಾನಾಪುರ: ಕಾಂಗ್ರೆಸ್ ಕಾರ್ಯಕರ್ತರು ಮತದಾರರಿಗೆ ರಾಜ್ಯ ಸರ್ಕಾರದ ಜನಪರ ಯೋಜನೆಗಳ ಮಾಹಿತಿ ನೀಡುವ ಮೂಲಕ ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸಲು ಸನ್ನದ್ಧರಾಗಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಬಿ ಅಂಬೋಜಿ ಕರೆ ನೀಡಿದರು.
ಪಟ್ಟಣದ ಕೆ.ಎಸ್.ಆರ್.ಪಿ ರಸ್ತೆ ಸಮುದಾಯ ಭವನದಲ್ಲಿ ಜರುಗಿದ ತಾಲೂಕಿನ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಎಲ್ಲ ಜಾತಿ, ಜನಾಂಗ, ಪಂಗಡ ಮತ್ತು ಧರ್ಮಗಳ ಜನರಿಗೆ ಸರ್ಕಾರದ ಪ್ರಯೋಜನಗಳು ದೊರೆತಿವೆ. ಬಡವರಿಗೆ, ದೀನ-ದಲಿತರಿಗೆ, ಅಲ್ಪಸಂಖ್ಯಾತರಿಗೆ ಮತ್ತು ನೊಂದವರಿಗೆ ನ್ಯಾಯ ಒದಗಿಸುವ ಕೆಲಸಗಳು ಕಾಂಗ್ರೆಸ್ ಸರ್ಕಾರದಿಂದ ನಡೆದಿದ್ದು, ಸರ್ಕಾರದ ಈ ಕಾರ್ಯಗಳ ಬಗ್ಗೆ ಪ್ರತಿಯೊಬ್ಬ ಕಾರ್ಯಕರ್ತ ಮತದಾರರಗೆ ಮನವರಿಕೆ ಮಾಡಿಕೊಡಬೇಕು ಮತ್ತು ಮುಂಬರುವ ಚುನಾವಣೆಯಲ್ಲೂ ಪಕ್ಷದ ಅಭ್ಯರ್ಥಿ ಗೆಲುವಿಗೆ ಇಂದಿನಿಂದಲೇ ಸನ್ನದ್ಧರಾಗಬೇಕು ಎಂದರು.
ಕೆಪಿಸಿಸಿ ಸದಸ್ಯ ರಫೀಕ್ ಖಾನಾಪುರಿ ಮಾತನಾಡಿದರು. ಸಭೆಯಲ್ಲಿ ಪ್ರಕಾಶ ಬೈಲೂರಕರ, ಲಿಯಾಕಲಿ ಬಿಚ್ಚುನವರ, ಶಿವಾನಂದ ಗೌರಿ, ಕಲ್ಲಪ್ಪ ದೇಶನೂರ, ವಿ.ಎಲ್ ಬಿರ್ಜೆ, ವಿಠ್ಠಲ ತಳವಾರ, ಈಶ್ವರಗೌಡ ಪಾಟೀಲ, ಎಂ.ಎಂ ಸಾಹುಕಾರ ಸೇರಿದಂತೆ ವಿವಿಧ ಗ್ರಾಮಗಳ ಕಾರ್ಯಕರ್ತರು ಇದ್ದರು. ಪ್ರಕಾಶ ಮಾದಾರ ಕಾರ್ಯಕ್ರಮ ನಿರ್ವಹಿಸಿದರು.

loading...