ಗುರು ಶಿಷ್ಯರ ಪರಂಪರೆ ಇಂದಿಗೂ ಪ್ರಸ್ತುತ

0
96

ಕನ್ನಡಮ್ಮ ಸುದ್ದಿ-ಧಾರವಾಡ: ಸಂಗೀತ ಕಲಿಸಿಕೊಡುವಲ್ಲಿ ಮತ್ತು ಕಲಿಯುವಲ್ಲಿ ಗುರು ಶಿಷ್ಯ ಪರಂಪರೆ ಇಂದಿಗೂ ತನ್ನ ಪಾವಿತ್ರತೆಯನ್ನು ಉಳಿಸಿಕೊಂಡು ಬಂದಿದೆ ಎಂದು ಹಿರಿಯ ಸಾಹಿತಿ, ಕವಿ ಆನಂದ ಝುಂಜರವಾಡ ಹೇಳಿದರು.
ಕೆಲಗೇರಿ ರಸ್ತೆಯ “ವೆಂಕಟಾಚಲ” ದಲ್ಲಿ ನಡೆದ ಶ್ರೀಮತಿ ರಾಧಿಕಾ ಕಾಖಂಡಿಕಿ ಅವರ ಶಿಷ್ಯಂದಿರ ಗುರುಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿ, ಗುರು ಅನ್ನುವ ಮೌಲ್ಯ ನಿರಾಕರಣ ಮಾಡಿ ಭಾರತೀಯರಾದ ನಾವು ಇಂದು ಅನೇಕ ಸಂಗತಿಗಳನ್ನು ಕಳೆದುಕೊಂಡಿದ್ದೇವೆ. ಗುರು ಶಿಷ್ಯ ಸಂಬಂಧ ಅನೇಕ ರೀತಿಯಿಂದ ನಡೆದುಕೊಂಡು ಬಂದಿದೆ. ಸಂಗೀತ ಕಲಿಯುವಿಕೆಯಲ್ಲಿ ಈ ಗುರು ಶಿಷ್ಯ ಪರಂಪರೆ ಅತ್ಯಂತ ಗಾಢವಾಗಿದೆ. ನಿಜವಾದ ಗುರುವು ಶಿಷ್ಯನಿಗೆ ಏನನ್ನೂ ಕೊಡಲಾಗುವದಿಲ್ಲ. ಶಿಷ್ಯನ ಹಸಿವು, ತಳಮಳ, ಜ್ಞಾನ ಪಡೆಯಲೇಬೇಕೆಂಬ ಹಂಬಲ, ಸಂಕಟ ಗಮನಿಸಿ ಗುರುವಾದವ ಪ್ರೇರಣಾದಾಯಕನಾಗಿ ನಿಂತು ಶಿಷ್ಯನಿಗೆ ಮಾರ್ಗದರ್ಶನ ಮಾಡುತ್ತಾನೆ ಎಂದರು.
ಸಾಹಿತಿ ಡಾ.ಗಿರಡ್ಡಿ ಗೋವಿಂದರಾಜ, ರಾಘವೇಂದ್ರ ಪಾಟೀಲ, ಮಲ್ಲಿಕಾರ್ಜುನ ಹಿರೇಮಠ, ಡಾ.ರಮಾಕಾಂತ ಜೋಶಿ, ಹರ್ಷ ಡಂಬಳ, ರಾಜಕುಮಾರ ಮಡಿವಾಳರ, ಎನ್ ಬಿ ಗುಂಜೀಕರ, ಎಸ್. ಎಮ್. ದೇಶಪಂಡೆ, ಅನಂತ ಥಿಟೆ ಉಪಸ್ಥಿತರಿದ್ದರು.ರಾಧಿಕಾ ಕಾಖಂಡಿಕಿಯವರು ನಟಕೇದಾರ ಪ್ರಸ್ತುತಪಡಿಸಿ, ಆನಂದಕಂದರ ಭಾವಗೀತೆ, ನಾಟ್ಯಗೀತೆ ಮತ್ತು ಭೈರವಿಯಲ್ಲಿ ಭಜನೆಯೊಂದಿಗೆ ಕಾರ್ಯಕ್ರಮ ಜರುಗಿದವು.

loading...