ರಕ್ತದಾನ ಶಿಬಿರ ಯಶಸ್ವಿ

0
64

ಕನ್ನಡಮ್ಮ ಸುದ್ದಿ-ಧಾರವಾಡ- ಹಿಂದೂಸ್ಥಾನ ಪೆಟ್ರೋಲಿಯಂ ಕಾರ್ಪೋರೇಶನ್ ಲಿ. ಹುಬ್ಬಳ್ಳಿ ರಾಯಾಪೂರ ಡಿಪೋದಲ್ಲಿ ಭಾರತೀಯ ರೆಡ್‍ಕ್ರಾಸ್ ಸೊಸೈಟಿ, ಕ್ಯಾನ್ಸರ್ ಹಾಸ್ಪಿಟಲ್ ನವನಗರ ಇವರ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಕಂಪನಿಯ ಎಲ್ಲ ಅಧಿಕಾರಿ ವರ್ಗ, ಸಿಬ್ಬಂದಿಗಳಲ್ಲದೇ ಇಂಡಿಯನ್ ಆಯಿಲ್ ಕಾರ್ಫೋರೇಶನ್, ಹುಬ್ಬಳ್ಳಿ. ರಾಯಾಪೂರ, ಅಧಿಕಾರಿಗಳ ಸಮ್ಮುಖದೊಂದಿಗೆ ಕಂಪನಿಯಲ್ಲಿರುವ ಡೀಲರ್‍ಗಳು, ಡೆಲಿವರಿ ಬಾಯ್ಸ್ ಹಾಗೂ ಟ್ರಕ್ ಡ್ರೈವರ್, ಗುತ್ತಿಗೆದಾರರು, ಸಹಾಯಕರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡರು. ಡಿಪೋ ಮ್ಯಾನೇಜರ್ ಚಿ.ರಘು, ಡಾ. ವಿ.ಡಿ. ಕರ್ಪೂರಮಠ, ಡಾ. ಉಮೇಶಹಳ್ಳಿಕೇರಿ, ಆರ್.ಬಿ. ಪಾಟೀಲ ಉಪಸ್ಥಿತರಿದ್ದರು.

loading...