ಕಳಸಾ-ಬಂಡೂರಿ: ರಕ್ತ ಚೆಲ್ಲಿಯಾದರೂ ನ್ಯಾಯ ಪಡೆಯುತ್ತೇವೆ

0
43

ಕನ್ನಡಮ್ಮ ಸುದ್ದಿ-ಧಾರವಾಡ: ಮಹಾದಾಯಿ ಕಳಸಾ-ಬಂಡೂರಿ ಯೋಜನೆ ಹೋರಾಟಕ್ಕೆ ರಕ್ತ ಚೆಲ್ಲಿಯಾದರೂ ನ್ಯಾಯ ಪಡೆಯುತ್ತೇವೆ ತಕ್ಷಣ ಪ್ರಧಾನಿ ಮಧ್ಯಸ್ತಿಕೆ ವಹಿಸಿ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯಲಿ ಇಲ್ಲವಾದರೆ ಹಿಂದೆಂದೂ ಕಂಡಿರಿಯದ ಹಿಂಸಾ ಚಳುವಳಿ ಅನಿವಾರ್ಯವಾದಿತು ಎಂದು ಶ್ರೀ ಬಸವರಾಜ ದೇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಹಾದಾಯಿ ಕಳಸಾ-ಬಂಡೂರಿ ಅನುಷ್ಠಾನಕ್ಕಾಗಿ ಇಷ್ಟೊಂದು ಸುದೀರ್ಘ ಚಳುವಳಿ ನಡೆಯುತ್ತಿದ್ದರು ರಾಜ್ಯ ಹಾಗೂ ಅದರಲ್ಲೂ ಕೇಂದ್ರ ಸರ್ಕಾರ ಅತೀ ನಿರ್ಲಕ್ಷವಹಿಸವೆ. ಪ್ರಧಾನಿ ನರೇಂದ್ರ ಮೋದಿ ಇಷ್ಟೊಂದು ಸುದೀರ್ಘ ಚಳುವಳಿಯ ಮಹತ್ವ ತಿಳಿಯದೆ ದೇಶದ ಒಳಗಡೆ ಇಷ್ಟು ಪ್ರಮಾಣದಲ್ಲಿ ಹೋರಾಟ ನಡೆಯುತ್ತಿದಾಗ್ಯೂ ಪರದೇಶಕ್ಕೆ ಹೋಗಿ ಭಾಷಣ ಬಿಗಿಯುವ ಭಾಷಣಕಾರ ನರೇಂದ್ರ ಮೋದಿ ಅವರಿಗೆ ಕರುಣೆ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬರೀ ಪತ್ರ ಬರೆಯುದಲ್ಲಿಯೇ ಕಾಲ ಮುಂದೂಡುತ್ತಿದ್ದು ರಾಜ್ಯ ಹಾಗೂ ಕೇಂದ್ರ ಸರ್ಕಾರ ರೈತರ ಹಿತ ಕಾಪಾಡುವಲ್ಲಿ ವಿಫಲಗೊಂಡಿವೆ.
ಕರ್ನಾಟಕದ ಮುಖ್ಯಮಂತ್ರಿಗಳನ್ನು ಸೇರಿದಂತೆ ಗೋವಾ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಸಭೆ ಕರೆದು ಚರ್ಚಸಿ ಯೋಜನೆ ಅನುಷ್ಠಾನ ಪ್ರಧಾನಿ ಮಾಡಬೇಕು. ಅನುಷ್ಠಾನವಾದರೆ ನಾನು ನನ್ನ ಆರಾಧ್ಯ ದೈವ ಆರಾಧನೆ ಬಿಟ್ಟು ಮೊದಲು ಪ್ರಧಾನಿ ಪ್ರತಿಮೆಯನ್ನು ಮುಖ್ಯಮಂತ್ರಿಗಳ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುತ್ತೇನೆ ಇಲ್ಲವಾದಲ್ಲಿ ನಮ್ಮಂಥ ಸಾಧುಗಳು ರೈತರೊಂದಿಗೆ ಹೋರಾಟಗಾರರೊಂದಿಗೆ ಬಾರಕೋಲು ಹಿಡಿದು ಹೋರಾಟಕ್ಕೆ ಇಳಿಯುವ ಸ್ಥಿತಿ ನಿರ್ಮಾಣವಾದೀತು ಎಂದು ತಿಳಿಸಿದ್ದಾರೆ.

loading...