ವಿದ್ಯಾರ್ಥಿಗಳಿಗೆ ಬೈಸಿಕಲ್ ವಿತರಣೆ

0
93

ಕನ್ನಡಮ್ಮ ಸುದಿ-ನವಲಗುಂದ: ಸ್ಥಳೀಯ ಜಗದ್ಗುರು ಅಜಾತ ನಾಗಲಿಂಗ ಮಹಸ್ವಾಮಿ ವಿದ್ಯಾಪೀಠ ಪ್ರೌಢಶಾಲೆಯಲ್ಲಿ ಸರಕಾರದಿಂದ ಕೊಡಮಾಡಲ್ಪಡುವ ಉಚಿತ ಬೈಸಿಕಲ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಬೈಸಿಕಲ್ ವಿತರಿಸಿ ಮಾತನಾಡಿದ ಶ್ರೀಮಠದ ಪೀಠಾಧೀಶರಾದ ಶ್ರೀ ವೀರೇಂದ್ರ ಮಹಾಸ್ವಾಮಿಗಳು ಇದೊಂದು ಸರಕಾರದ ಒಳ್ಳೆಯ ಯೋಜನೆಯಾಗಿದ್ದು ದೂರದಿಂದ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಮತ್ತು ಪರಿಸರ ಪ್ರೇಮದ ಯೋಜನೆಯಾಗಿದೆ ಎಂದು ತಿಳಿಸಿದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಎಲ್.ಎಚ್.ಕಮ್ಮಾರ ಮಾತನಾಡಿ ವಿದ್ಯಾರ್ಥಿಗಳು ಬೈಸಿಕಲ್‍ಗಳನ್ನು ಅಚ್ಚುಕಟ್ಟಾಗಿಟ್ಟುಕೊಂಡು ಪ್ರತಿದಿನ ಶಾಲೆಗೆ ತರಲು ಸೂಚಿಸಿದರು. ಈ ಸಂದರ್ಭದಲ್ಲಿ ಶಾಲೆಯ ಸರ್ವಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

loading...