ವಿವಾಹಿತ ಮಹಿಳೆ ನಾಪತ್ತೆ: ಪ್ರಕರಣ ದಾಖಲು

0
72

ಕನ್ನಡಮ್ಮ ಸುದ್ದಿ-ಅಂಕೋಲಾ: ಇಲ್ಲಿಯ ಪೊಲೀಸ್ ಠಾಣೆಯಲ್ಲಿ ವಿವಾಹಿತ ಮಹಿಳೆಯೋರ್ವಳು ನಾಪತ್ತೆಯಾಗಿರುವ ಕುರಿತು ದೂರು ದಾಖಲಿಸಿದ್ದಾರೆ.
ತಾಲೂಕಿನ ಅಲಗೇರಿ ಗ್ರಾಮದ ನಿವಾಸಿ ಶಿಲ್ಪಾ ಮಾರುತಿ ನಾಯ್ಕ (25) ಎಂಬಾಕೆಯು ನಾಪತ್ತೆಯಾ ವಿವಾಹಿತೆ. ಈಕೆಯನ್ನು ಅಲಗೇರಿ ಗ್ರಾಮದ ನಿವಾಸಿ ಮಾರುತಿ ಪಾಟು ನಾಯ್ಕ ಎಂಬಾತನೊಂದಿಗೆ ಮೇ.1ರಂದು ಗುರುಹಿರಿಯರ ಸಮಕ್ಷಮ ಮದುವೆ ಮಾಡಿಕೊಡಲಾಗಿತ್ತು. ಜುಲೈ 10ರಂದು ಈಕೆಯು ಅವರ್ಸಾದಲ್ಲಿರುವ ತನ್ನ ತಾಯಿಯ ಮನೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದಳು. ಮಾರನೇ ದಿನ ಬೆಳಿಗ್ಗೆ 10.30 ಗಂಟೆಯ ಸುಮಾರಿಗೆ ತಾಯಿಯ ಮನೆಯಿಂದ ತನ್ನ ಗೆಳತಿಯ ಮನೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದು, ಅಲ್ಲಿಗೆ ಹೋಗದೆ ಹಾಗೂ ಮನೆಗೆ ಹಿಂತಿರುಗಿ ಬಾರದೇ ನಾಪತ್ತೆಯಾಗಿದ್ದಾಳೆ. ಈಕೆಯು ಮನೆಯಿಂದ ಹೋಗುವಾಗ ಮದುವೆಯ ಸಂದರ್ಭದಲ್ಲಿ ಕಟ್ಟಿದ್ದ ಚಿನ್ನದ ತಾಳಿಯ ಸರ, ಕಿವಿಯೋಲೆ ಹಾಗೂ ಬಂಗಾರದ ಹಾರವನ್ನು ಹಾಕಿಕೊಂಡು ಹೋಗಿದ್ದಳು. ಕಳೆದ ಎರಡೂವರೆ ತಿಂಗಳಿಂದ ಅನ್ಯೋನ್ಯತೆಯಿಂದ ಸಂಸಾರವನ್ನು ನಡೆಸುತ್ತಿದ್ದ ಇವಳು ಏಕಾಏಕಿ ತನಗೆ ಹಾಗೂ ಮನೆಯವರಿಗೆ ಮೋಸ ಮಾಡಿ ಇದೀಗ ನಾಪತ್ತೆಯಾಗಿದ್ದಾಳೆ.
ಈಕೆಯನ್ನು ಶೀಘ್ರದಲ್ಲಿ ಹುಡುಕಿ ಕೊಡಬೇಕು ಎಂದು ಪತಿ ಮಾರುತಿ ನಾಯ್ಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿ ಸಿದ್ದಾರೆ. ಅಂಕೋಲಾ ಪೊಲೀಸ್ ಠಾಣೆಯ ಪಿಎಸ್‍ಐ ವೀಣಾ ಹೊನ್ನೆ ಈ ಕುರಿತು ಪ್ರಕರಣವನ್ನು ದಾಖಲಿಸಿಕೊಂಡಿ ದ್ದು, ಮುಂದಿನ ತನಿಖೆಯನ್ನು ನಡೆಸುತ್ತಿದ್ದಾರೆ.

loading...