ಕೇಂದ್ರದ ಅಭಿವೃದ್ಧಿ ಕೆಲಸಗಳನ್ನು ಬಿಜೆಪಿ ಕಾರ್ಯಕರ್ತರು ಜನರಿಗೆ ತಿಳಿಸಿ

0
54

ರಾಯಬಾಗ : ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರ ದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಅವರು ಮಾಡಿದ ಅಭಿವೃದ್ಧಿ ಕೆಲಸಗಳನ್ನು ಬಿಜೆಪಿ ಕಾರ್ಯಕರ್ತರು ಪ್ರತಿಯೊಬ್ಬರಿಗೆ ಹೇಳಬೇಕೆಂದು ಮಾಜಿಸಚಿವ ಹಾಗೂ ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಶಿಕಾಂತ ನಾಯಿಕ ಹೇಳಿದರು.
ಮಂಗಳವಾರ ತಾಲೂಕಿನ ನಿಡಗುಂದಿ ಗ್ರಾಮದ ಶ್ರೀ ಸಿದ್ದೇಶ್ವರ ಮಂದಿರದಲ್ಲಿ ಕುಡಚಿ ಬಿಜೆಪಿ ಮಂಡಲದ ವತಿಯಿಂದ ಪ್ರಧಾನಮಂತ್ರಿ ಉಜ್ವಲ್ ಯೋಜನೆಯಡಿ ನಿಡಗುಂದಿ ಗ್ರಾಮದಲ್ಲಿ ಉಚಿತ ಗ್ಯಾಸ ವಿತರಣೆ ಕಾರ್ಯಕ್ರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿಯವರು ರೈತರಿಗಾಗಿ ಫಸಲಭೀಮಾ ಯೋಜನೆ,ಬಡಕುಟುಂಬಗಳಿಗೆ ಉಜ್ವಲ್ ಯೋಜನೆಯಡಿ ಉಚಿತ ಗ್ಯಾಸ್ ವಿತರಣೆ, ಕಡಿಮೆ ಬಡ್ಡಿಯ ಸಾಲ, ಗೃಹನಿರ್ಮಾಣಸಾಲ ಸೇರಿದಂತೆ ಹತ್ತು ಹಲಾವರು ಜನಪರ ಯೋಜನೆಗಳನ್ನು ಜಾರಿಗೆ ತಂದು ದೇಶದ ನಿಜವಾದ ಜನನಾಯಕರಾಗಿದ್ದಾರೆ, ಕೇವಲ ಮೂರುವರ್ಷದಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ, ಆದರೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ ಸರಕಾರ ರಾಜ್ಯದಲ್ಲಿ ಆಭಾಗ್ಯ ಈ ಭಾಗ್ಯಅಂತ ಹೇಳುತ್ತಾ ಕಾಲಹರಣ ಮಾಡಿ ರಾಜ್ಯದಲ್ಲಿ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬೆಳಗಾವಿ ಮಾಜಿ ಶಾಸಕ ಹಾಗೂ ಬಿಜೆಪಿ ರಾಯಬಾಗ ಮಂಡಲದ ಪ್ರಭಾರಿ ಅಭಯ ಪಾಟೀಲ, ಮಾಜಿಶಾಸಕ ಬಿ.ಸಿ.ಸರಿಕರ. ಕುಡಚಿ ಬಿಜೆಪಿ ಮಂಡಲದ ಅಧ್ಯಕ್ಷ ಬಸವರಾಜ ಸನದಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಅಣ್ಣಾಸಾಬ ಖೇಮಲಾಪೂರೆ, ಬಸಗೌಡ ಆಸಂಗಿ, ಈರನಗೌಡ ಪಾಟೀಲ, ಸದಾಶಿವ ಘೋರ್ಪಡೆ, ಲತಾ ಹುದ್ದಾರ, ಅನ್ನಪೂರ್ಣಾ ಯಡತ್ತಿನ್ನವರ, ರಾಜಶೇಖರ ವಡೆಯರ, ಶೋಭಾ ಕಾಂಬಳೆ, ರಾಜು ಐತವಾಡೆ,ಲಕ್ಷ್ಮಣ ಗವಾನಿ, ಪಾಷಾ ಜಲಾಲಕರ, ಸುರೇಶ ಹೊಸಮನಿ, ಪ್ರಭು ಹಿರೇಕೊಡಿ, ಸುಕುಮಾರ ಖೇಮಲಾಪೂರೆ, ಅಚ್ಯುತ ಗುರುವ, ಮಾರುತಿ ಕಲ್ಯಾಣಕರ, ಯೋಗೆಶ ರೋಡಕರ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

loading...