ಸಾರ್ವಜನಿಕರು ಅಧಿಕ ಪ್ರಮಾಣದಲ್ಲಿ ಸಾರಿಗೆ ಸಂಸ್ಥೆ ವಾಹನ ಬಳಸಿ: ಸಚಿವ ವಿನಯ

0
31

ಕನ್ನಡಮ್ಮ ಸುದ್ದಿ-ಧಾರವಾಡ: ವಾಕರಸಾಸಂ ಪ್ರತಿದಿನ 20 ಲಕ್ಷ ರೂ.ನಷ್ಟ ಅನುಭವಿಸುತ್ತಿದ್ದು ಇದನ್ನು ತಪ್ಪಿಸಲು ಸಾರ್ವಜನಿಕರು ಅಧಿಕ ಪ್ರಮಾಣದಲ್ಲಿ ಸಾರಿಗೆ ಸಂಸ್ಥೆಯ ವಾಹನಗಳನ್ನು ಬಳಸಲು ಮುಂದಾಗಬೇಕು,ಸುರಕ್ಷತೆ ಮತ್ತು ಸಂಚಾರ ದಟ್ಟಣೆ ನಿಯಂತ್ರಣಕ್ಕೂ ಇದು ಸಹಕಾರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು.ನಗರ ಸಾರಿಗೆ ನಿಲ್ದಾಣ (ಸಿಬಿಟಿ) ದಲ್ಲಿ ವಾಕರಸಾಸಂ ಏರ್ಪಡಿಸಿದ್ದ ಬಸ್ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಪ್ರತಿ ತಿಂಗಳು 20 ನೇ ತಾರೀಖಿನಂದು ಬಸ್ ದಿನ ಆಚರಿಸಲು ಮುಂದಾಗಿರುವ ಸಂಸ್ಥೆಯ ಕ್ರಮ ಸ್ವಾಗತಾರ್ಹ. ಸಾರ್ವಜನಿಕರು ಸಾರಿಗೆ ಸಂಸ್ಥೆಯ ಬಸ್‍ಗಳನ್ನು ಹೆಚ್ಚು ಹೆಚ್ಚು ಬಳಕೆ ಮಾಡುವ ಮೂಲಕ ಸಂಚಾರ ದಟ್ಟಣೆ ಮತ್ತು ಪರಿಸರ ಮಾಲಿನ್ಯ ನಿಯಂತ್ರಿಸಲು ಕೊಡುಗೆ ನೀಡಬೇಕು. ಪಾಲಕರು ತಮ್ಮ ಮಕ್ಕಳಿಗೆ ಅನಗತ್ಯವಾಗಿ ದ್ವಿಚಕ್ರವಾಹನಗಳನ್ನು ಕೊಡಿಸುವ ಪ್ರವೃತ್ತಿ ಕೈಬಿಡಬೇಕು ಎಂದರು.
ವಾಕರಸಾಸಂ ಅಧ್ಯಕ್ಷ ಸದಾನಂದ ಡಂಗನವರ ಮಾತನಾಡಿ, ಪರಿಸರ ಸಮತೋಲನ ಇಂದಿನ ಅವಶ್ಯಕತೆಯಾಗಿದೆ.ಶುದ್ಧ ಪರಿಸರ ನಿರ್ವಹಣೆ ಹಾಘೂ ಜಾಗತಿಕ ತಾಪಮಾನ ನಿಯಂತ್ರಣಕ್ಕೆ ಖಾಸಗಿ ವಾಹನಗಳ ಬಳಕೆ ಪ್ರಮಾಣ ಇಳಿಮುಖವಾಗಬೇಕಿದೆ.ಈ ಹಿನ್ನೆಲೆಯಲ್ಲಿ ಜನಜಾಗೃತಿ ಮೂಡಿಸಲು ಸಂಸ್ಥೆ ಪ್ರತಿ ತಿಂಗಳು 20 ನೇ ತಾರೀಖಿನಂದು ಹುಬ್ಬಳ್ಳಿ ಧಾರವಾಡ ಅವಳಿ ನಗರಗಳಲ್ಲಿ ಬಸ್ ದಿನ ಆಚರಿಸುವ ನಿರ್ಣಯ ಕೈಗೊಂಡಿದೆ ಎಂದರು.
ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಜಿ, ಬೈಲೂರಿನ ಶ್ರೀ ನಿಜಗುಣಾನಂದಪ್ರಭುಗಳು, ಶ್ರೀ ಬಸವರಾಜ ದೇವರು, ಫಾದರ್ ಪ್ರಸಾದ್ ಡಿ’ಸೋಜ ಸಾನಿಧ್ಯವಹಿಸಿ ಮಾತನಾಡಿದರು. ನಾಡೋಜ ಡಾ.ಪಾಟೀಲ ಪುಟ್ಟಪ್ಪ, ಸಾಹಿತಿ ಡಾ.ಗಿರಡ್ಡಿ ಗೋವಿಂದರಾಜ, ಡಾ.ಗುರುಲಿಂಗ ಕಾಪಸೆ,ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಆರ್.ಡಿ.ಹುದ್ದಾರ್, ವಾಕರಸಾಸಂ ವ್ಯವಸ್ಥಾಪಕ ನಿರ್ದೇಶಕ ಪಾಂಡುರಂಗ ಬಿ.ನಾಯಕ,ಬಿಆರ್‍ಟಿಎಸ್ ವ್ಯವಸ್ಥಾಪಕ ನಿರ್ದೇಶಕ ಎಂ.ಜಿ.ಹಿರೇಮಠ, ದಾನಪ್ಪ ಕಬ್ಬೇರ,ಇಸ್ಮಾಯಿಲ್ ತಮಟಗಾರ,ಮನೋಜ ಕರ್ಜಗಿ ಉಪಸ್ಥಿತರಿದ್ದರು.

loading...