ಅಂಕೋಲಾದಲ್ಲಿ ವಿಜಯೋತ್ಸವ

0
52

ಕನ್ನಡಮ್ಮ ಸುದ್ದಿ-ಅಂಕೋಲಾ: ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಮನಾಥ ಕೋವಿಂದ ಇವರು ಆಯ್ಕೆಯಾದ ಪ್ರಯುಕ್ತ ಬಿಜೆಪಿ ತಾಲೂಕು ಘಟಕದ ವತಿಯಿಂದ ಇಲ್ಲಿಯ ಜೈಹಿಂದ್ ಹೈಸ್ಕೂಲ್ ಸಮೀಪದ ವೃತ್ತದಲ್ಲಿ ಸಿಡಿಮದ್ದು ಸಿಡಿಸಿ ಮತ್ತು ಸಿಹಿಯನ್ನು ವಿತರಿಸಿ ವಿಜಯೋತ್ಸವವನ್ನು ಆಚರಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಸಮಿತಿಯ ಸದಸ್ಯ ಭಾಸ್ಕರ ನಾರ್ವೇಕರ ಮಾತನಾಡಿ, ದೇಶದ ಪ್ರಥಮ ಪ್ರಜೆಯಾಗಿ ಭಾರತೀಯ ಜನತಾ ಪಕ್ಷದ ದಲಿತ ಸಮುದಾಯದ ಅಭ್ಯರ್ಥಿಯಾಗಿ ಆಯ್ಕೆಯಾಗಿರುವುದು ಸಂತೋಷದ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ಭವ್ಯ ಭಾರತ ನಿರ್ಮಾಣದ ಕನಸು ನನಸಾಗುವುದು ನಿಶ್ಚಿತವಾಗಿದೆ ಎಂದರು.
ಬಿಜೆಪಿ ತಾಲೂಕು ಘಟಕದ ಸಂಜಯ ಎಂ. ನಾಯ್ಕ ಭಾವಿಕೇರಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಈ ಸಂದರ್ಭದಲ್ಲಿ ನಾಗೇಶ ಕಿಣಿ, ಅಮಿತ ಪ್ರಭು, ಗಣಪತಿ ನಾಯ್ಕ ಹನುಮಟ್ಟಾ, ನಾಗರಾಜ ಗಣಪು ಆಗೇರ, ಗೋಪಾಲ ಗಣಪು ಆಗೇರ, ಮಂಜುನಾಥ ಪ್ರಹ್ಲಾದ ಆಗೇರ, ಸಂತೋಷ ನಾರಾಯಣ ಆಗೇರ, ಮಂಜುನಾಥ ಬೀರಪ್ಪ ಆಗೇರ, ಸಂತೋಷ ಆಗೇರ, ಸುಬ್ರಹ್ಮಣ್ಯ ರೇವಣಕರ, ಸುನಿಲ್ ವೆರ್ಣೇಕರ, ಚಂದ್ರಕಾಂತ ನಾಯ್ಕ, ನಾಗೇಶ ಗೌಡ, ಗಣಪತಿ ನಾಯಕ ಶಿಳ್ಯ, ಬೋಳಾ ಗೌಡ ಬೆಳಂಬಾರ, ಗಣೇಶ ನಾಯ್ಕ ಬೊಬ್ರುವಾಡ, ಉದಯ ಪಡ್ತಿ, ವೆಂಕಟೇಶ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

loading...