ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ ಶುಚಿಯಾಗಿಡಲು ಮನವಿ

0
81

ಕನ್ನಡಮ್ಮ ಸುದ್ದಿ-ಬೆಳಗಾವಿ: ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆ ಕೋಣೆ ಹಾಗೂ ಹೆಣ್ಣು ಮಕ್ಕಳ ವಾರ್ಡಗಳಲ್ಲಿ ಸ್ವಚ್ಚತೆ ಮಾಡುವುದರ ಜೊತೆಗೆ ಬದ್ರತೆ ಒದಗಿಸಿ ಎಂದು ಭಾರತೀಯ ಶಹರಾ ಮಹಿಳಾ ಅಭಿವೃದ್ಧಿ ಸಂಘಟನೆಯ ಅಧ್ಯಕ್ಷೆ ಮಿಲನ ರಾಜಪೂತ ಜಿಲ್ಲಾಸ್ಪತ್ರೆಯ ಸಹಾಯಕ ಆಡಳಿತ ಅಧಿಕಾರಿ ವಿ ವಿ. ಹನಮಸೇಠ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಜಿಲ್ಲಾಸ್ಪತ್ರೆಗೆ ಜಿಲ್ಲೆಯ ಎಲ್ಲ ತಾಲೂಕಿನ ಹಳ್ಳಿಗಳಿಂದ ಹೆರಿಗೆಗೆಂದು ಆಗಮಿಸುತ್ತಾರೆ. ಆದರೆ ಹೆರಿಗೆ ವಿಭಾಗದಲ್ಲಿ ಸ್ವಚ್ಚತೆ, ಸಿಸ್ತು ಇಲ್ಲದÀ ಕಾರಣ ಮಹಿಳೆಯರಿಗೆ ತುಂಬಾ ತೊಂದರೆಯಾಗಿದೆ.
ಹಾಗೇಯೆ ಸರಿಯಾದ ಬೆಡ್‍ಗಳು, ಹಾಸಿಗೆಗಳು ದೊರೆಯದೇ ಮಹಿಳೆಯರು ಸ್ವಚ್ಚತೆಯನ್ನು ಕಾಪಾಡಿಕೊಳ್ಳುವುದು ಆಗುತ್ತಿಲ್ಲ. ಈ ರೀತಿಯ ವ್ಯವಸ್ಥೆ ಇರುವುದರಿಂದ ಬಾಣಂತಿ, ಶಿಶು ರೋಗಳಿಗೆ ತುತ್ತಾಗುತ್ತಿದ್ದಾರೆ.
ಅಲ್ಲದೇ ಹೆರಿಗೆ ವಾರ್ಡಗಳಲ್ಲಿ ಪುರುಷರನ್ನು ಬದ್ರತೆಗಾಗಿ ನೇಮಕ ಮಾಡಿದ್ದಾರೆ. ಅವರನ್ನು ಬೇರೆಕಡೆ ನೇಮಿಸಿ, ಅಲ್ಲಿ ಮಹಿಳೆಯರನ್ನು ನೇಮಕ ಮಾಡಿ. ಈಗಿರುವ ಹೆರಿಗೆ ವಾರ್ಡ ಸಂಪೂರ್ಣ ಹಾಳಾಗಿದ್ದು ಅದನ್ನು ನವೀಕರಿಸಿ ಮಹಿಳೆಯರಿಗೆ ಅನುಕೂಲವಾಗುವಂತೆ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಅನುಸೂಯ ಮೈತ್ರಿ, ಶಿವಕ್ಕ ಜಾರಕಿಹೊಳಿ, ಶಾಂತವ್ವ ಶಿಂತ್ರಿ ಯಲ್ಲವ್ವ ಬರಿಗಾಳಿ ಸೇರಿದಂತೆ ಇತರ ಮಹಿಳೆಯರು ಇದ್ದರು.

loading...