ಸರಕಾರಕ್ಕೆ ಕೆಟ್ಟ ಹೆಸರು ತರದಂತೆ ಅಧಿಕಾರಿಗಳು ‌ಕಾರ್ಯನಿರ್ವಹಿಸಿ: ಸಚಿವ ಜಾರಕಿಹೊಳಿ

0
33

ಕನ್ನಡಮ್ಮ ಸುದ್ದಿ

ಬೆಳಗಾವಿ: 10 ರಾಜ್ಯದಲ್ಲಿ ಭೀಕರ ಬರಗಾಲ ಬರುವ ಮುನ್ಸುಚನೆಯಿದ್ದು ಅಧಿಕಾರಿಗಳು ಸರಕಾರಕ್ಕೆ ಕೆಟ್ಟು ಹೆಸರು ತರದಂತೆ ಕೆಲಸ ನಿರ್ವಹಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಅವರು ಗುರುವಾರ ಸವದತ್ತಿ ಯಲ್ಲಮ್ಮನ ಗುಡ್ಡದ ಕಲ್ಯಾಣ ಮಂಟಪದಲ್ಲಿ ಕರೆಯಲಾದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡುತ್ತ, ತಹಶಿಲ್ದಾರರ ಹಾಗೂ ಎಸಿ ಒಬ್ಬರ ಮೇಲೆ ಒಬ್ಬರು ಹಾಕದೆ ಮುಂಬರುಚ ಬರಗಾಲವನ್ನು ಸಮರ್ಥವಾಗಿ ನಿಭಾಯಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಈಗಾಗಲೇ ಕೆರೆ ತುಂಬಿಸುವ ಯೋಜನೆಯನ್ನು ಪೂರ್ಣಗೊಳ್ಳಿಸುತ್ತಿದ್ದಾರೆ. ಆದರೆ ಸವದತ್ತಿ, ಬೈಲಹೊಂಗಲದಲ್ಲಿ ಕೂಡಲೇ ಪ್ರಾರಂಭಿಸುವಂತೆ ಹೇಳಿದರು.
ಈ ಸಂದರ್ಭದಲ್ಲಿ ‌ಸವದತ್ತಿ ಶಾಸಕ ಆನಂದ ಮಾಮನಿ, ಜಿಪಂ ಸದಸ್ಯರು ಸೇರಿದಂತೆ ಮೊದಲಾದವರು ಹಾಜರಿದ್ದರು.

loading...