ಬಿಜೆಪಿಯಿಂದ ದಕ್ಷಿಣ ಕ್ಷೇತ್ರಕ್ಕೆ ಹೊಸ ಅಭ್ಯರ್ಥಿ ! ಹೆಚ್ಚಾಗಿದ್ದಾರೆ ಆಕಾಂಕ್ಷಿ ಅಭ್ಯರ್ಥಿಗಳು – ಯುಪಿ ಮಾದರಿಯಲ್ಲಿ ಚುನಾವಣೆ

0
64

ಕನ್ನಡಮ್ಮ ವಿಶೇಷ
ಬೆಳಗಾವಿ:12  ಮುಂಬರುವ 2018ರ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಆಕಾಂಕ್ಷಿ ಅಭ್ಯರ್ಥಿಗಳು ಹೆಚ್ಚಾಗಿದ್ದಾರುವುದರಿಂದ ನಗರದ ಉತ್ತರ ಮತ್ತು ದಕ್ಷಿಣ ಎರಡು ಕ್ಷೇತ್ರದಲ್ಲಿಯೂ ಹೊಸ ಮುಖದ ಅಭ್ಯರ್ಥಿಗೆ ಪಕ್ಷ ಮಣೆಹಾಕಲಿದೆ.
ಬೆಳಗಾವಿ ಉತ್ತರ ಕ್ಷೇತ್ರ ಬಿಟ್ಟರೇ ದಕ್ಷಿಣ ಭಾಗದಲ್ಲಿ ಬಿಜೆಪಿ ಭದ್ರಕೋಟೆಯಲ್ಲಿ ಹಿಂದಿನ ವಿಧಾನ ಸಭಾ ಚುನಾವಣೆಯಲ್ಲಿ ಮಾಜಿ ಶಾಸಕ ಅಭಯ ಪಾಟೀಲ ಆಯ್ಕೆಯಾಗಿದ್ದರು. ಲೋಕ ಸಭೆಯ ಚುನಾವಣೆಯಲ್ಲಿ ಸುಮಾರು 94 ಸಾವಿರ ಮತಗಳು ಬಂದಿದ್ದವು. ಆದರೆ ಎಂಇಎಸ್‍ನ ಸಂಭಾಜಿ ಪಾಟೀಲ ಎದುರು ಅಭಯ ಪಾಟೀಲರು 48 ಸಾವಿರ ಮತಗಳಿಸಿ ಸೋಲು ಅನುಭವಿಸಿದ್ದರು.
ಕಳೆದ ವಿಧಾನ ಸಭೆಗೂ ಮುಂಚೆ ಶಾಸಕರಾಗಿ ಆಯ್ಕೆಯಾಗಿದ್ದ ಅಭಯ ಪಾಟೀಲರು ದಕ್ಷಿಣ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿರುವುದು ಇತಿಹಾಸವಾಗಿದೆ. ಆದರೆ ಕೆಲವೊಂದು ವಿಷಯದಲ್ಲಿ ಅಭಯ ಪಾಟೀಲರು ದಕ್ಷಿಣ ಮತಕ್ಷೇತ್ರದ ಜನರೊಂದಿಗೆ ಮಾಡಿಕೊಂಡ ವೈಮನಸ್ಸಿನಿಂದ ಜನರು ಇವರನ್ನು ವಿರೋಧಿಸಿದರು ಎನ್ನಲಾಗುತ್ತಿದೆ.
ಅಲ್ಲದೆ ಅಭಯ ಪಾಟೀಲರ ಮೇಲೆ ಅಕ್ರಮ ಆಸ್ತಿಗಳನ್ನು ಸಂಪಾದಿಸಿದ್ದಾರೆ ಎಂದು ಸಮಾಜಿಕ ಹೋರಾಟಗಾರ ಸುಜೀತ ಮುಳಗುಂದ ಹಾಗೂ ಕಿರಣ ಗಾವಡೆ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಇಂಥದರಲ್ಲಿ ಮಾಜಿ ಶಾಸಕ ತಮ್ಮ ಅಧಿಕಾರದ ಅವಧಿಯಲ್ಲಿ ನಗರವನ್ನು ಸಾಕಷ್ಟು ಅಭಿವೃದ್ಧಿ ಪಡೆಸಿದ್ದರೂ. ಮತ್ತೇ ಬಿಜೆಪಿಯಿಂದ ಟಿಕೆಟ್ ನೀಡಿದರೇ ಬಿಲ್ಡರ್ ಹಾಗೂ ರಿಯಲ್ ಎಸ್ಟೇಟ್‍ನವರಿಗೆ ತೊಂದರೆ ನೀಡಲಿದ್ದಾರೆ ಎಂಬ ಆರೋಪಗಳಿವೆ.
ಮೊದಲು ಬಾಗೇವಾಡಿ ವಿಧಾನ ಸಭೆ ಚುನಾವಣೆಯಲ್ಲಿ ಸೋತ ಅವರು  ನಂತರದ ವಿಧಾನ ಸಭೆ ಚುನಾವಣೆಯಲ್ಲಿ ಗೆದ್ದರು ತದ ನಂತರ ಬಾಗೇವಾಡಿ ಪುನರಚನೆಯಾಗಿ ಗ್ರಾಮೀಣ ಕ್ಷೇತ್ರವಾದ ಮೇಲೆ ದಕ್ಷಿಣ ಕ್ಷೇತ್ರದಿಂದ ನಿಂತು ಗೆಲವು ಸಾಧಿಸಿದ್ದರು. ನಂತರ ವಿಧಾನ ಸಭೆಯ ಚುನಾವೇಸಂಭಾಜಿ ಪಾಟೀಲರ ಎದುರು ಸೋತರು. ಅಭಯ ಪಾಟೀಲರು ಸೋತು – ಗೆದ್ದು- ಗೆದ್ದು – ಸೋತ್ತಿದ್ದಾರೆ.
ಬಿಜೆಪಿ ವಕ್ತಾರ ಕಾರ್ಯಕ್ರಮದಲ್ಲಿ ಅಭಯ ಪಾಟೀಲರ ಬಗ್ಗೆ ಪಕ್ಷದ ವರಿಷ್ಠರಿಂದ ಸರಿಯಾದ ಅಭಿಪ್ರಾಯ ಬಂದಿಲ್ಲವೆಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ. ಎಂಇಎಸ್ ಮುಖಂಡ ಕಿರಣ ಠಾಕೂರ ಅಭಯ ಪಾಟೀಲರ ಬಿನ್ನಾಭಿಪ್ರಾಯದಿಂದ ಈ ಹಿಂದೆ ಅಭಯ ಪಾಟೀಲರು ಎಂಇಎಸ್ ಮತಗಳನ್ನು ಸೇಳೆಯುವ ನಿಟ್ಟಿನಲ್ಲಿ ಪರೋಕ್ಷವಾಗಿ ಎಂಇಎಸ್‍ನವರಿಗೆ ಸಹಾಯ ಮಾಡಿದ್ದರು ಎನ್ನುವ ಆರೋಪಗಳು ಪಕ್ಷದಲ್ಲಿ ಕೇಳಿಬರುತ್ತಿವೆ.
ಒಂದು ವೇಳೆ ದಕ್ಷಿಣ ಕ್ಷೇತ್ರದಿಂದ ಅಭಯ ಪಾಟೀಲರಿಗೆ ಬಿಜೆಪಿಯಿಂದ ಟಿಕೆಟ್ ನೀಡಿದರೇ ಎಂಇಎಸ್‍ನಿಂದ ಅಭ್ಯರ್ಥಿಗಳನ್ನು ನಿಲ್ಲಿಸುವುದಾಗಿ ಕಿರಣ ಠಾಕೂರ ಬಿಜೆಪಿ ರಾಷ್ಟ್ರೀಯ ಮುಖಂಡ ಸುರೇಶ ಪ್ರಭು, ನೀತಿನ ಗಡ್ಕರಿ, ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಪಢ್ನವಿಸ್, ಗೋವಾ ಮುಖ್ಯಮಂತ್ರಿ ಮನೋಹರ ಪರಿಕರ ಅವರಿಗೆ ದೂರು ನೀಡಿ ಅಭಯ ಪಾಟೀಲರಿಗೆ ಟಿಕೆಟ್ ನೀಡಬಾರದೆಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ಪಕ್ಷದಿಂದ ಸಂಸದರಾಗಿದ್ದ ಅಮರಸಿಂಹ ಪಾಟೀಲ ಬಿಜೆಪಿಗೆ ಸೇರ್ಪಡೆಗೊಂಡು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸುವ ಮನಸ್ಸುಮಾಡಿದ್ದಾರೆ. ಅಲ್ಲದೆ ಕಾಂಗ್ರೆಸ್ ಪಕ್ಷದಲ್ಲಿ ಸಂಸದರಾಗಿ ಅಲ್ಲಿ ಯಾವುದೇ ಸ್ಥಾನ ಮಾನ ಸಿಗದ ಹಿನ್ನಲೆಯಲ್ಲಿ ಕಾಂಗ್ರೆಸ್ ತೋರೆದು ಬಿಜೆಪಿಗೆ ಬಂದು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಹಿರಿಯರಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ಬೆಂಬಲಿಗರಾದ ಗೂಳಪ್ಪ ಹೊಸಮನಿ ಅವರು ಕೆಜೆಪಿ ಪಕ್ಷ ಸೇರಿಕೊಂಡು ಯಡಿಯೂರಪ್ಪನವರೊಂದಿಗೆ ಮತ್ತೇ ಬಿಜೆಪಿ ಸೇರಿಕೊಂಡು ಗ್ರಾಮೀಣ ಭಾಗದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಅಲ್ಲದೆ ಸಮಾಜ ಸೇವೆ ಹಾಗೂ ಪಕ್ಷದ ದುಡಿಮೆಯಲ್ಲಿ ಗುರುತಿಸಿಕೊಂಡಿರುವ ಇವರು ಸಹ ದಕ್ಷಿಣ ಮತಕ್ಷೇತ್ರದಿಂದ ಸ್ಪರ್ಧಿಸಲು ಇಂಗಿತ ವ್ಯಕ್ತಪಡೆಸುತ್ತಿದ್ದಾರೆ.
ಆರ್‍ಎಸ್‍ಎಸ್‍ನ ಸಂಘ ಪರಿವಾರದವರೊಂದಿಗೆ ಆತ್ಮೀಯತೆಯಿಂದರುವ ರಿಯಲ್ ಎಸ್ಟೆಟ್ ಉದ್ಯಮಿ, ನೇಕಾರ ಸಮಾಜದ ಪಿ.ಡಿ.ದೋಥ್ರೆ ದಕ್ಷಿಣ ಮತಕ್ಷೇತ್ರದಿಂದ ನಿಲ್ಲುವ ಪ್ರಯತ್ನ ನಡೆಸಿದ್ದರೇ, ಇತ್ತ ಬಿಜೆಪಿಯ ಹಳೆಯ ಕಾರ್ಯಕರ್ತ ಆರ್.ಎಸ್.ಮುತಾಲಿಕ ಈ ಹಿಂದೆ ವಿಧಾನ ಪರಿಷತ್ ಚುನಾವಣೆಗೆ ನಿಂತು ಸೋಲು ಅನುಭವಿಸಿದ್ದರು. ನಂತರದಲ್ಲಿ ದಕ್ಷಿಣ ಕ್ಷೇತ್ರದಲ್ಲಿ ಬ್ರಾಹ್ಮಣ ಸಮಾವೇಶ ನಡೆಸಿ ತಮ್ಮ ಶಕ್ತಿಯನ್ನು ಪ್ರದರ್ಶಿಸಿರುವ ಅವರು ಸಹಿತ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.ದಕ್ಷಿಣ ಕ್ಷೇತ್ರದಲ್ಲಿ ಡಾ.ದೊಡಮನಿ ಆಸ್ಪತ್ರೆಯ ತೆರಿಯುವ ಮೂಲಕ ಜನರಿಗೆ ಹತ್ತಿರವಾಗಿದ್ದಾರೆ. ಸಮಾಜ ಸೇವೆ ಬಿಜೆಪಿ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಅವರು ಸಹ ದಕ್ಷಿಣ ಕ್ಷೇತ್ರದ ಆಕಾಂಕ್ಷಿಯಾಗಿದ್ದಾರೆ.
ಸಂಘ ಪರಿವಾರದೊಂದಿಗೆ ಆತ್ಮೀಯ ಹಾಗೂ ಮಾಜಿ ಶಾಸಕ ಅಭಯ ಪಾಟೀಲರ ಬೆಂಬಲಿಗರಾಗಿದ್ದ ದೀಪಕ ಜಮಖಂಡಿ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಮಹಾನಗರ ಪಾಲಿಕೆಯಲ್ಲಿ ವಿರೋಧ ಪಕ್ಷದ ಸ್ಥಾನದಲ್ಲಿರುವ ದೀಪಕ ಜಮಖಂಡಿ ಜನರ ವಿಶ್ವಾಸಗಳಿಸಿಕೊಂಡಿದ್ದಾರೆ. ಇವರು ಸಹ ಆಕಾಂಕ್ಷಿಯಾಗಿದ್ದಾರೆ.
ಉತ್ತರ ಪ್ರದೇಶದ ಚುನಾವಣೆಯನ್ನು ಬಿಜೆಪಿ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಪ್ರಧಾನಿ ಮೋದಿ, ರಾಷ್ಟ್ರೀಯ ಅಧ್ಯಕ್ಷ ಅಮಿತ ಶಾ ಕರ್ನಾಟದಲ್ಲಿಯೂ ಅದೇ ಮಾದರಿಯಲ್ಲಿ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದ್ದಾರೆ ಎನ್ನಲಾಗುತ್ತಿದೆ. ಭ್ರಷ್ಟರನ್ನು ಹಳಬರನ್ನು ದೂರವಿಟ್ಟು ಈ ಬಾರಿ ಹೊಸ ಮುಖಗಳಿಗೆ ಪಕ್ಷದಿಂದ ಟಿಕೆಟ್ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

 

loading...