ರ್ಉತ್ತಮ ವಾತಾವರಣ ನಿರ್ಮಿಸುವಲ್ಲಿ ಗ್ರಾಮ ವಿಕಾಸ ಸಮಿತಿಯ ಪಾತ್ರ ಮಹತ್ವ: ಸಿಇಒ ರಾಮಚಂದ್ರನ್.

0
77

ಕನ್ನಡಮ್ಮ ಸುದ್ದಿ

ಬೆಳಗಾವಿ: ಸರ್ಕಾರಿ ಸೌಲಭ್ಯಗಳನ್ನು ಅದರಲ್ಲೂ ವಿಶೇಷವಾಗಿ ಮಹಿಳೆ ಮತ್ತು ಮಕ್ಕಳಿಗೆ ತಲುಪಿಸಿ ಅಂಗನವಾಡಿ ವ್ಯಾಪ್ತಿಯಲ್ಲಿ ಉತ್ತಮ ವಾತಾವರಣ ನಿರ್ಮಿಸುವಲ್ಲಿ ಗ್ರಾಮ ವಿಕಾಸ ಸಮಿತಿಯ ಜವಾಬ್ದಾರಿಯು ಮಹತ್ವದಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್.ಆರ್ ಅವರು ಹೇಳಿದರು.

ಸೋಮವಾರ ಜಿಪಂ ಸಭಾಭವನದಲ್ಲಿ ನಡೆದ ಬಾಲವಿಕಾಸ ಸಮಿತಿಯ ಸದಸ್ಯರಿಗೆ ಆಯೋಜಿಸಿದ್ದ, ಪುನಶ್ಚೇತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜನನಿ ಸುರಕ್ಷಾ ಯೋಜನೆ ಸೆರಿದಂತೆ ಅನೇಕ ಯೋಜನೆಯಗಳನ್ನು ಗರ್ಬಿಣಿಯರ ಸುರಕ್ಷತ ಹೆರಿಗೆಗಾಗಿ ಸರ್ಕಾರ ಜಾರಿಗೊಳಿಸಿದೆ. ಸದೃಢ ಮಗು ಹಾಗೂ ಸಮೃದ ಶಿಕ್ಷಣಕ್ಕಾಗಿ ಅಂಗನವಾಡಿ ಹಂತದಿಂದಲೇ ಮಕ್ಕಳಿಗೆ ಶೈಕ್ಷಣಿಕ ವಾತಾವರಣವನ್ನು ಒದಗಿಸಲು ಕ್ರಮಕೈಗೊಳ್ಳಲಾಗಿದೆ. ಗ್ರಾಮೀಣ ಭಾಗದಲ್ಲಿ ಶೌಚಾಲಯದ ಜಾಗೃತಿಯ ಜೋತೆಗೆ ಅದರ ಬಳಕೆಯ ಬಗ್ಗೆ ಅರಿವು ಮೂಡಿಸುವ ಕಾರ್ಯವಾಗಬೇಕಾಗಿದೆ. ಪ್ರತಿ ಅಂಗನವಾಡಿಯೂ ಶೌಚಾಲಯವನ್ನು ಹೊಂದಬೇಕೆಂದು ಅವರು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳಾದ ಡಾ|| ಅಪ್ಪಾಸಾಹೇಬ ನರಟ್ಟಿ, ಅವರು ಮಾತನಾಡಿ, ಜಿಲ್ಲೆಯಲ್ಲಿ ಅಪೌಷ್ಠಿಕತೆಯುಳ್ಳು ಮಕ್ಕಳ ಸಂಖ್ಯೆ ಹೆಚ್ಚಾಗಿದ್ದು, ಅವುಗಳನ್ನು ಪೌಷ್ಠಿಕತೆ ಪುನವರ್ಸತಿ ಕೇಂದ್ರಕ್ಕೆ ಸೇರಿಸಿ, ಆರೋಗ್ಯ ವೃದ್ಧಿಗಾಗಿ ಕ್ರಮಕೈಗೊಳ್ಳಲಾಗಿದೆ. ಈ ದಿಸೆಯಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಹೆಚ್ಚಿನ ಕಾಳಜಿ ವಹಿಸಿ ಕೆಲಸ ಮಾಡಬೇಕೆಂದು ಹೇಳಿದರು. ಆರೋಗ್ಯ ಇಲಾಖೆಯ ಡಾ|| ಗಡಾದ ಅವರು ಮಾತನಾಡಿ ಲಸಿಕಾ ಕಾರ್ಯಕ್ರಮ, ಇಂದ್ರಧನುಷ್ ಸೇರಿದಂತೆ ವಿವಿಧ ಆರೋಗ್ಯ ಕಾರ್ಯಕ್ರಮಗಳ ಕುರಿತು ಸಮಿತಿಯ ಸದಸ್ಯರಿಗೆ ಮಾಹಿತಿ ನೀಡಿದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಎಂ. ಮುನಿರಾಜು, ಪ್ರಭಾರ ಕಾರ್ಯಕ್ರಮ ಅಧಿಕಾರಿ ಎಸ್.ಎಸ್. ಮರಿಕಟ್ಟಿ ಪುನಶ್ಚೇತನ ಕಾರ್ಯಕ್ರಮದಲ್ಲಿ 115 ಗ್ರಾಮಗಳ ಬಾಲವಿಕಾಸ ಸಮಿತಿಯ ಸದಸ್ಯರು ಪಾಲ್ಗೊಂಡು ಬಾಲವಿಕಾಸ ಸಮಿತಿಯ ಕರ್ತವ್ಯ ಮತ್ತು ಜವಾಬ್ದಾರಿಗಳ ಬಗ್ಗೆ ತರಬೇತಿ ಪಡೆದÀರು.

loading...