ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಅಭಿಯಾನ

0
62

ಕನ್ನಡಮ್ಮ ಸುದ್ದಿ-ಅಂಕೋಲಾ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಇಲ್ಲಿಯ ಪುಂಡಲೀಕ ಬೇಣದ ಶಿರಡಿ ಸಾಯಿ ಮಂದಿರದ ಆವರಣದಲ್ಲಿ ಭಾನುವಾರ ಬೆಳಿಗ್ಗೆ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಅಭಿಯಾನದ ಅಂಗವಾಗಿ ಸ್ವಚ್ಛತಾ ಕಾರ್ಯ ನಡೆಯಿತು.ಯೋಜನೆಯ ಸದಸ್ಯರು ಮತ್ತು ದೇವಸ್ಥಾನದ ಭಕ್ತರು , ಸಾರ್ವಜನಿಕರು ದೇವಸ್ಥಾನದ ಸುತ್ತ ಮುತ್ತ ಇರುವ ಹುಲ್ಲು ಕಸ ಕಡ್ಡಿಗಳನ್ನೆಲ್ಲ ತೆಗೆದು ಸ್ವಚ್ಛತಾ ಕಾರ್ಯ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಯೋಜನಾಧಿಕಾರಿ ಶೇಖರ ನಾಯ್ಕ, ಧಾರ್ಮಿಕ ಕೇಂದ್ರಗಳಲ್ಲಿ ಶ್ರದ್ಧೆ, ಭಕ್ತಿ ಮೂಡಿ ಬರಬೇಕಾದರೆ ಅಲ್ಲಿ ಸ್ವಚ್ಛತೆಗೆ ಆದ್ಯತೆ ಇರಬೇಕು ಎಂಬ ಪರಿಕಲ್ಪನೆಯಡಿ ಡಾ. ವಿರೇಂದ್ರ ಹೆಗ್ಗಡೆ ಯವರು ರಾಜ್ಯಾದ್ಯಂತ ಧಾರ್ಮಿಕ ಕೇಂದ್ರಗಳ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಇಂದು ಕಾರವಾರ-ಅಂಕೋಲಾದ 22 ಕಡೆ ಈ ಕಾರ್ಯ ಜರುಗುತ್ತಿದೆ ಎಂದರು.ದೇವಸ್ಥಾನ ಆಡಳಿತ ಮಂಡಳಿಯ ಎಂ.ಎನ್.ನಾಯ್ಕ, ಮಂಜುನಾಥ ನಾಯಕ, ಪುರಸಭೆ ಸದಸ್ಯೆ ಲಕ್ಷ್ಮೀ ನಾಯ್ಕ, ಜನಜಾಗೃತಿ ಸಮಿತಿ ಸದಸ್ಯ ವಿಠ್ಠಲದಾಸ ಕಾಮತ್, ಪ್ರಮುಖ ಅರುಣ ಶೆಡಗೇರಿ ಮುಂತಾದವರು ಇದ್ದರು. ಮೇಲ್ವಿಚಾರಕ ಈಶ್ವರ ದೇಸಾಯಿ ಕಾರ್ಯಕ್ರಮ ನಿರ್ವಹಿಸಿದರು.

loading...