ಸಂಗೀತ ಶ್ರವಣಕ್ಕೆ ಉತ್ತಮವಾದುದು: ಹಂಪಿಹೊಳಿ

0
103

ಕುಮಟಾ: ಒಳ್ಳೆಯದನ್ನು ಶ್ರವಣ ಮಾಡುವದರಿಂದ ಸುಸಂಸ್ಕøತ ಸಮಾಜ ನಿರ್ಮಾಣವಾಗುತ್ತದೆ ಎಂದು ನಿವೃತ್ತ ಪ್ರಾಂಶುಪಾಲ ಡಾ. ವಿ ಕೆ ಹಂಪಿಹೊಳಿ ಅಭಿಪ್ರಾಯಪಟ್ಟರು.
ಅವರು ರವಿವಾರ ತಾಲೂಕಿನ ಕೇಳಗಿನ ಕೂಜಳ್ಳಿಯ ಶ್ರೀ ಶಾಂತಿಕಾ ಪರಮೇಶ್ವರಿ ಸಭಾಭವನದಲ್ಲಿ ಗಮದರ್ವ ಕಲಾ ಕೇಂದ್ರ, ಪಂ ಷಡಕ್ಷರಿ ಗವಾಯಿ ಅಕಾಡೆಮಿ ಹಾಗೂ ಕೂಜಳ್ಳಿಯ ಸ್ವರ ಸಂಗಮ ಇವುಗಳ ಆಶ್ರಯದಲ್ಲಿ ಧಾರವಾಡದ ಕಿರಾಣಾ ಸಂಗೀತ ಅಕಾಡೆಮಿ ಇವರಿಂದ ಅಖಿಲ ಭಾರತ ಯಾನ ಸಮಗೀತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವೇದ ಮತ್ತು ಸಂಗೀತ ಶೃವಣಕ್ಕೆ ಯೋಗ್ಯವಾದ್ದು. ಶ್ರೇಷ್ಢ ಸಂಗೀತ ಕಲಾವಿದ ಮಾಧವ ಗುಡಿ ಕುಟುಂಬದವರು ಕೂಜಳ್ಳಿಯಂತಹ ಗ್ರಾಮದಲ್ಲಿ ಸಂಗೀತ ಸೇವೆ ಕೈಗೊಂಡಿರುವುದು ಶ್ಲಾಘನೀಯವಾಗಿದೆ ಎಂದರು.
ಡಾ ಅನುಪಮಾ ಗುಡಿ ಮಂಗಲವಡೆ ಮಾತನಾಡಿ, ತಂದೆಯಾದ ಮಾಧವ ಗುಡಿ ಅವರು ಗುರುಕುಲದ ಆಶಯ ಹೊಂದಿದ್ದರು. ಇವರ ಕನಸಿನನ್ನು ಪೂರೈಸುವದಕ್ಕಾಗಿ ಅಖಿಲ ಭಾರತ ಯಾನ ಸಂಗೀತ ಕಾರ್ಯಕ್ರಮವನ್ನು ನಡೆಸುತ್ತಾ ಬರುತ್ತಿದ್ದೇವೆ ಎಂದರು.
ಬೆಳಗಾವಿಯ ಕಲ್ಯಾಣ್ ದೇಶಪಾಂಡೆ, ನಿವೃತ್ತ ಶಿಕ್ಷಕ ಕೆ ವಿ ಭಟ್ ,ಪತ್ರಕರ್ತ ಸುಬ್ರಾಯ ಜಿ ಭಟ್. ಉದ್ಯಮಿ ಎಸ್ ಎಂ ಹೆಗಡೆ ಹಾಗೂ ಮೊದಲಾದವರು ಉಪಸ್ಥಿತರಿದ್ದರು.
ಗಂಧರ್ವ ಕಲಾಕೇಂದ್ರದ ಕಾರ್ಯದರ್ಶಿ ವಾಸುದೇವ ತಾಮನ್ಕರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಟಿ ಎನ್ ಭಟ್ ನಿರೂಪಿಸಿದರು. ಶಿಕ್ಷಕ ರಾಜು ಲಮಾಣಿ ವಂದಿಸಿದರು. ಗೌರೀಶ ಯಾಜಿ ಸಹಕರಿಸಿದರು.
ಧನುಷ್ ಶಾನಭಾಗ ಬಾನ್ಸುರಿ ವಾದನಕ್ಕೆ ಗುರುರಾಜ ಹೆಗಡೆ ತಬಲಾ ಸಾಥ್ ನೀಡಿದರರು. ಬೆಳಗಾವಿ ಪಂ.ಕಲ್ಯಾಣ್ ದೇಶಪಾಂಡೆ ಮತ್ತು ಅಂಗದ ದೇಸಾಯಿ ತಬಲಾ ಜುಗಲ್ಬಂಧಿಗೆ ಬೆಲಗಾವಿ ಯೋಗೇಶ ರಾಮದಾಸ ಸಂವಾದಿನಿ ನುಡಿಸಿದರು. ಮಾಧವ ಗುಡಿ ಪುತ್ರಿಯರಾದ ಡಾ ಅನುಪಮಾ ಗುಡಿ, ಭಾರ್ಗವಿ ಗುಡಿ ಮತ್ತು ಗಾಯತ್ರಿ ಗುಡಿ ಇವರ ಗಾಯನ ತಿಗಲ್ಬಂಧಿಗೆ ಪ್ರೊ ಎನ್ ಜಿ ಅನಂತಮೂರ್ತಿ ತಬಲಾ, ಗೌರೀಶ ಯಾಜಿ ಸಂವಾದಿನಿ ಸಾಥ್ ನೀಡಿದರು.

loading...