ಆಧ್ಯಾತ್ಮ ಆತ್ಮದ ಉನ್ನತಿ, ಸಾಧನೆಗೆ ರಾಜಮಾರ್ಗ : ಮಹಾಂತದೇವರು

0
64

ಗದಗ 13: ಆಧ್ಯಾತ್ಮ ಆತ್ಮದ ಉನ್ನತಿ, ಆಧ್ಯಾತ್ಮಿಕತೆ ಉನ್ನತ ಸಾಧನೆಗೆ ರಾಜಮಾರ್ಗವಾಗಿದ್ದು ಸರ್ವರೂ ಆಧ್ಯಾತ್ಮಿಕ ಮನೋಭಾವನೆಯನ್ನು ಬೆಳಸಿಕೊಳ್ಳಬೇಕೆಂದು ದೆಹಲಿಯ ತೋಂಟದಾರ್ಯ ಶಾಖಾ ಮಠದ ಪೂಜ್ಯ ಮಹಾಂತದೇವರು ಅಭಿಪ್ರಾಯಪಟ್ಟರು.
ಅವರು ಮಂಗಳವಾರ ಗದುಗಿನ ಗಂಗಾಪೂರಪೇಟೆಯ ಶ್ರೀದುರ್ಗಾದೇವಿ ದೇವಸ್ಥಾನದ ಸಮುದಾಯ ಭವನದಲ್ಲಿ ದೇವಸ್ಥಾನದ ಕಮೀಟಿಯು ಗೌರವ ಡಾಕ್ಟರೇಟ್ ಪ್ರಶಸ್ತಿ ಪುರಸ್ಕøತರಾದ ಗದುಗಿನ ಆಧ್ಯಾತ್ಮ ವಿದ್ಯಾಶ್ರಮದ ಪೂಜ್ಯ ಡಾ.ನೀಲಮ್ಮತಾಯಿ ಅಸುಂಡಿ ಹಾಗೂ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕøತರಾದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನಂ. 14ರ ಶಿಕ್ಷಕಿ ಶ್ರೀಮತಿ ಪಿ.ಎಂ.ಭಾಂಡಗೆ ಅವರಿಗೆ ಎರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಆಧ್ಯಾತ್ಮಿಕತೆಯು ಮನಶುದ್ಧಿ, ಆತ್ಮಶುದ್ಧಿ, ಅರಿವು, ಸದ್ಭಾವನೆ ಮೂಡಿಸುವ ಮೂಲಕ ಕಾಯಕ ಹಾಗೂ ಧಾರ್ಮಿಕ ಕಾರ್ಯಚಟುವಟಿಕೆಗಳಿಗೆ ಪ್ರೇರಣೆ ನೀಡುವ ಅದ್ಭುತ ಶಕ್ತಿಯನ್ನು ಹೊಂದಿದೆ. ಧರ್ಮ ಮತ್ತು ಆಧ್ಯಾತ್ಮಿಕತೆ ಹೆಚ್ಚಿನ ಒತ್ತು ನೀಡಿರುವ ಭಾರತೀಯ ಸಂಸ್ಕøತಿಯು ಆಧ್ಯಾತ್ಮಿಕ ಸಾಧನೆಯಿಂದ ಗುಣಾತ್ಮಕ ಪ್ರಗತಿಯನ್ನೂ ಹೊಂದಿದೆ ಎಂದರು.
ವೇದಿಕೆಯ ಮೇಲೆ ದೇವಸ್ಥಾನದ ಕಮೀಟಿಯ ಉಪಾಧ್ಯಕ್ಷ ಬಸವರಾಜ ಬೆಳಧಡಿ, ಭಾನುಮತಿಭೇನ್ ಪಟೇಲ್ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ವಿದ್ಯಾರ್ಥಿನಿಯರಿಂದ ಪ್ರಾರ್ಥನೆಯಾಯಿತು. ಕಮೀಟಿಯ ಕಾರ್ಯದರ್ಶಿ ಶೇಖಣ್ಣ ಕವಳಿಕಾಯಿ ನಿರೂಪಿಸಿದರು ಕೊನೆಗೆ ಸಿದ್ದಣ್ಣ ಪಲ್ಲೇದ ವಂದಿಸಿದರು.
ಸಮಾರಂಭದಲ್ಲಿ ಧೂಳೇಂದ್ರ ಅರಗಂಜಿ, ಯಲ್ಲಪ್ಪ ಬಾರಕೇರ, ವೆಂಕಪ್ಪ ರೆಡ್ಡಿ, ಬಸವರಾಜ ಇಕ್ಕಲಗುತ್ತಿ, ಶ್ರೀನಿವಾಸ ವಲ್ಲೂರ, ರಮೇಶ ತೋಟದ, ಸೋಮು ಚವಡಿ ಶಿಕ್ಷಕಿಯರಾದ ಬಿ.ವ್ಹಿ.ಸುಜಾತಾ, ಗಾಣಿಗೇರ, ದಾಸರ, ನಂದರಗಿ, ಕುರ್ತಕೋಟಿ ಸೇರಿದಂತೆ ದೇವಸ್ಥಾನ ಕಮೀಟಿಯ ಪದಾಧಿಕಾರಿಗಳು, ಸದಸ್ಯರು ಗಣ್ಯರು ಪಾಲ್ಗೋಂಡಿದ್ದರು.

loading...