ಜ್ಞಾನ ದೇಗುಲದ ಪುಸ್ತಕಗಳು ಜಗತ್ತನ್ನು ಆಳುತ್ತವೆ:ತೋಂಟದ ಶ್ರೀಗಳುಜ್ಞಾನ

0
101

ಗದಗ: ಪುಸ್ತಕಗಳು ಜ್ಞಾನದ ದೇಗುಲಗಳಾಗಿವೆ. ಅರಿವು ವೈಚಾರಿಕೆಯ ಜ್ಞಾನವನ್ನು ಪ್ರಸಾರಗೊಳಿಸುವ ಪುಸ್ತಕಗಳು ಜಗತ್ತನ್ನು ಆಳುತ್ತವೆ ಎಂದು ಪುಸ್ತಕದ ಸ್ವಾಮೀಜಿ ಎಂದೇ ಖ್ಯಾತರಾಗಿರುವ ಗದುಗಿನ ಜ.ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು. ನಗರದಲ್ಲಿ ನಿವೃತ್ತ ಪ್ರಾಚಾರ್ಯ ಎ.ವ್ಹಿ.ಬಳ್ಳೂಳ್ಳಿ ಅವರು ರಚಿಸಿದ ಬಂದಿಹೆನು ಬಾಗಿಲಿಗೆ ಕವನ ಸಂಕಲನ ಹಾಗೂ ನೊಂದ ತಾಯಿಯ ಗೋಳು ನಾಟಕ ಪುಸ್ತಕಗಳ ಬಿಡುಗಡೆ ಮತ್ತು ಶತಾಯುಷಿ (102) ಶ್ರೀಮತಿ ಗಂಗವ್ವ ವಿರುಪಾಕ್ಷಪ್ಪ ಬಳ್ಳೊಳ್ಳಿ ಅವರಿಗೆ ಅಭಿನಂದನಾ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ದಯಪಾಲಿಸಿದರು. ಧಾರ್ಮಿಕ, ಸಾಹಿತ್ಯಿಕ, ವೈಚಾರಿಕ, ಐತಿಹಾಸಿಕ ಗ್ರಂಥಗಳು ಸಮಾಜವನ್ನು ಸನ್ಮಾರ್ಗಕ್ಕೆ ಸಾಗಿಸಿವೆ. ಜನತೆಯನ್ನು ಜಾಗೃತಗೊಳಿಸಿವೆ.  ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ಬರೆಯುವ ಮೂಲಕ ಜಗತ್ತಿಗೆ ಒಳ್ಳೆಯ ಸಂದೇಶ- ನ್ಯಾಯ ನೀಡಿದ್ದಾರೆ ಅದೇ ರೀತಿ ರಾಮಾಯಣ ಮಹಾಭಾರತ ಸೇರಿದಂತೆ ಸಾವಿರಾರು ಐತಿಹಾಸಿಕ ಜನಪ್ರಿಯ ಪುಸ್ತಕಗಳು ಜ್ಞಾನ ದೇಗುಲಗಳಾಗಿವೆ ಎಂದು ಬಣ್ಣಿಸಿದರು. ಶಿಕ್ಷಣ ಕ್ಷೇತ್ರದಲ್ಲಿ ಅತ್ಯಂತ ದಕ್ಷತೆಯಿಂದ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಪ್ರಾ.ಎ.ವ್ಹಿ.ಬಳ್ಳೂಳ್ಳಿ ಅವರು ವೃತ್ತಿಯಿಂದ ಉಪನ್ಯಾಸಕರಾದರೂ ಪ್ರವೃತ್ತಿಯಿಂದ ಪ್ರಬುದ್ಧ ಸಾಹಿತಿಗಳಾಗಿದ್ದಾರೆ ಅವರು ಬರೆದ ಕವನ ಸಂಕಲನ ಹಾಗೂ ನಾಟಕದ ಪುಸ್ತಕದ ಮೂಲಕ ಅವರೊಬ್ಬ ಉತ್ತಮ ಸಾಹಿತಿ ಎಂಬುದನ್ನು ಸಾಬೀತುಗೊಳಿಸಿದ್ದಾರೆ ಬರಲಿರುವ ದಿನಗಳಲ್ಲಿ ಇವರಿಂದ ವೈಚಾರಿಕ ಸಾಹಿತ್ಯದ ಪುಸ್ತಕಗಳು ಲೋಕಾರ್ಪಣೆಗೊಳ್ಳಲಿ ಎಂದರು. ಶತಾಯುಷಿ ಗಂಗವ್ವ ಬಳ್ಳೂಳ್ಳಿ ಅವರು ಆದರ್ಶ ಗೃಹಿಣಿಯಾಗಿ, ಸಮಾಜದಲ್ಲಿ ಆದರ್ಶ ಮಹಿಳೆಯಾಗಿ ಕುಟುಂಬ ಮತ್ತು ಸಮಾಜಕ್ಕೆ ಸೂಕ್ತ ಮಾರ್ಗದರ್ಶನ ಮಾಡುತ್ತಿರುವ ಕಾರ್ಯ ಅಭಿನಂದನೀಯ 102 ವಯಸ್ಸಿನ ಇಂತಹ ತಲೆಮಾರಿನ ಜನರು ಪೂಜ್ಯನೀಯರು ಅವರಿಂದ ಸಮಾಜಕ್ಕೆ ಇನ್ನೂ ಹೆಚ್ಚಿನ ಸೇವೆ ಸಲ್ಲುವಂತಾಗಲಿ ಎಂದರು. ಅತಿಥಿಗಳಾಗಿ ಗದಗ ಜಿಲ್ಲಾ ಪಂಚಾಯತ್ ಅಧ್ಯಕ್ಷ ವಾಸಣ್ಣ ಕುರಡಗಿ, ಗದಗ ಎಪಿಎಂಸಿ ಅಧ್ಯಕ್ಷ ಶೇಖಣ್ಣ ಬಡ್ನಿ, ಗದಗ-ಬೆಟಗೇರಿ ನಗರಸಭೆಯ ಅಧ್ಯಕ್ಷ ಬಿ.ಬಿ.ಅಸೂಟಿ, ನಿವೃತ್ತ ಅಧಿಕಾರಿಗಳಾದ ಬಿಸ್ನಳ್ಳಿ, ಜಿ.ಆರ್.ಕೆಂಚರಡ್ಡಿ, ಯುವ ಧುರೀಣ ಸಚಿನ್ ಡಿ.ಪಾಟೀಲ, ಎನ್.ಎಚ್.ನಾಗನೂರ, ನಗರಸಭೆಯ ಸದಸ್ಯ ಅನಿಲ ಗರಗ, ಯುವ ಕಾಂಗ್ರೇಸ್ ಧುರೀಣ ಅಶೋಕ ಮಂದಾಲಿ ಆಗಮಿಸಿದ್ದರು.

loading...