ಮಳೆಯಾಗಿ ಹಾನಿಯಾದ ಮನೆಗಳಿಗೆ ತಹಶೀಲ್ದಾರ ಭೇಟಿ

0
56

ರಾಮದುರ್ಗ: ತಾಲೂಕಿನಲ್ಲಿ ನಿರಂತರ ಮಳೆಯಾಗಿ ಹಾನಿಯಾದ ಮನೆಗಳಿಗೆ ತಹಶೀಲ್ದಾರ ವಿ ಆರ್. ಕಟ್ಟಿ ಬೇಟಿ ಹಾಗೂ ಪುರಸಭೆಯ ಅಧ್ಯಕ್ಷ ರಾಜು ಮಾನೆ ನೀಡಿ ಪರೀಶಿಲನೆ ನಡೆಸಿದರು.
ಪಟ್ಟಣದ ಪುರಸಭೆಯ ವ್ಯಾಪ್ತಿಯಲ್ಲಿ ಮಳೆಯಿಂದಾಗಿ ಕೆಲವಡೆ ಮನೆಗಳು ಕುಸಿದು ಬಿದ್ದ ಕಾರಣ ಸ್ಥಳಕ್ಕೆ ಬೇಟಿ ನೀಡಿ ಮಾತನಾಡಿದ ಅವರು ತಾಲೂಕಿನಲ್ಲಿ ಮಳೆಯು ಬಾರಿ ಪ್ರಮಾಣದಲ್ಲಿ ಬಿದ ಪರಿಣಾವಾಗಿ ರಾಮದುರ್ಗ ನಗರದಲ್ಲಿ 17, ಬಟಕುರ್ಕಿ 5, ಮೂಳ್ಳೂರ 4, ಕಿತ್ತೂರ 1, ಪಡಕೋಟಿ ಗಲ್ಲಿ 2, ಶ್ರೀಪತಿನಗರ 4 ಗೋನಗನೂರ 3 ಒಟ್ಟು 36 ಮನೆಗಳು ಬಿದ್ದಿದ್ದು ಸುಮಾರು 8 ಲಕ್ಷ ಹಾನಿಯಾಗಿದೆ, ವೆಂಕಟಾಪೂರ ಗ್ರಾಮದಲ್ಲಿ 15 ಚಿಲ ಈರುಳ್ಳಿ ಮಳೆಗೆ ಕೊಚ್ಚೊಕಂಡು ಹೋಗಿವೆ ಎಂದು ತಿಳಿದುಬಂದಿದೆ, ಹಾನಿಗೊಳಗಾದ ಮನೆಗಳ ಮಾಹಿತಿಯನ್ನು ತಗೆದುಕೊಂಡು ಅವರಿಗೆ ಪರಿಹಾರ ವಿತರಣೆ ಮಾಡಬೇಕೆಂದು ಕಂದಾಯ ನಿರಿಕ್ಷಕರಿಗೆ ತಿಳಿಸದ್ದಾರೆ. ಇನ್ನು ಹೆಚ್ಚಿ ಮಳೆಯಾಗುವ ಮುನ್ನೂಚನೆ ಇದೆ ಆದ್ದರಿಂದ ಸಾರ್ವಜನಿರಕು ಜಾಗ್ರತರಾಗಿರಬೇಕೆಂದು ಹೇಳಿದರು.
ಪುರಸಭೆಯ ಅಧ್ಯಕ್ಷ ರಾಜು ಮಾನೆ ಮಾತನಾಡಿ ಬಾರಿ ಪ್ರಮಾಣದಲ್ಲಿ ಮಳೆಯಾದ ಕಾರಣ ಪಟ್ಟಣದಲ್ಲಿ ಹಲವಡೆ ನೀರು ತುಂಬಿಕೊಂಡಿದೆ, ಹಾಗೂ ರಸ್ತೆಗಳ ಕಾಮಗಾರಿ ಪ್ರಾರಂಭವಾಗಿದ್ದರಿಂದ ಅಲ್ಲ ಅಲ್ಲಿ ರಸ್ತೆಗಳು ಕೊಚ್ಚಿಹೋಗಿವೆ ಅವುಗಳನ್ನು ಸರಿ ಮಾಡಲಾಗುವದು ಎಂದು ಹೇಳಿದರು.
ರಾಮದುರ್ಗತಲೂಕಿನಲ್ಲಿ ಮಳೇಯ ಪ್ರಮಾಣ, ರಾಮದುರ್ಗ 82,ಕೆ ಚಂದರಗಿ 27,ಕಟಕೋಳ 30, ಹುಲಕುಂದ 20, ಮುದಕವಿ 50.8 ಮಿಲಿಮೀಟರ ಲೇಯಾಗಿದೆ ಎಂದು ತಿಳಿದು ಬದಿದೆ,
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಶಬ್ಬಿರ್ ಪಠಾಣ, ರಪೀಕ್ ಬೆಣ್ಣಿ, ಪುರಸಭೆ, ಕಂದಾಯ ಇಲಾಖೆಯ ಇತರ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

loading...