ರೇಶನ್ ಕಾರ್ಡ್‍ಗಾಗಿ ಯುವಕನ ವಿನೂತನ ಪ್ರತಿಭಟನೆ

0
46

ಕನ್ನಡಮ್ಮ ಸುದ್ದಿ-ಬೆಳಗಾವಿ: ಹೆಂಡತಿ ಮಕ್ಕಳಿಲ್ಲದ ವ್ಯಕ್ತಿಗೆ ರೇಷನ್ ಕಾರ್ಡ್ ನಿರಾಕರಣೆ ಮಾಡಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಪಂಚಾಯತ್ ಎದುರು ರಸ್ತೆ ಮೇಲೆ ಮಲಗಿ ಯುವಕನೊಬ್ಬ ವಿನೂತನ ಪ್ರತಿಭಟನೆ ಮಾಡಿದ ಘಟನೆ ಮಂಗಳವಾರ ನಡೆದಿದೆ.

ಸುಧೀರ ಅನಂತರಾವ್ ಪಾಟೀಲ್ ಎಂಬಾತ ಅರ್ಜಿ ಸಲ್ಲಿಸಿ ಸುಮಾರು 10 ವರ್ಷಗಳಾದರೂ ಒಬ್ಬನೇ ಎಂಬ ಕಾರಣಕ್ಕೆ ಪಡಿತರ ಚೀಟಿ ವಿತರಿಸಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದು ಇಲಾಖೆ ಅಧಿಕಾರಿಗಳನ್ನು ದೂರಿ, 10 ವರ್ಷದಿಂದ ಪಡಿತರ ಚೀಟಿ ನೀಡದಿರುವ ಆಹಾರ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾನೆ.

ಜಿಲ್ಲಾ ಪಂಚಾಯತಿ ಕಚೇರಿ ಎದರು ರಸ್ತೆಯಲ್ಲಿ, ಊಟದ ತಟ್ಟೆ, ಬ್ಯಾಗ್ ಇಟ್ಟುಕೊಂಡು ಮಲಗಿ ಪ್ರತಿಭಟನೆ ಮಾಡಿದ್ದು, ಆಹಾರ ಮತ್ತು ಸರಬುರಾಜು ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯತನವನ್ನು ಸಾರ್ವಜನಿಕವಾಗಿ ಬಹಿರಂಗಗೊಳ್ಳಿಸಿದ್ದಾನೆ.

loading...