ಸತೀಶ ಗೋಸಾವಿಯವರಿಗೆ ಬಿಳ್ಕೋಡುಗೆ

0
25

ದಾಂಡೇಲಿ: ದಾಂಡೇಲಿ ನಗರಸಭೆಯಲ್ಲಿ ವ್ಯವಸ್ಥಾಪಕರಾಗಿ ಸೇವಾ ನಿವೃತ್ತಿಗೊಂಡ ಸತೀಶ ಜಿ ಗೋಸಾವಿಯವನ್ನು ನಗರಸಭೆ ನೌಕರರ ಸಂಘದ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.
ಕಾರ್ಯಕ್ರಮದಲ್ಲಿ ದಾಂಡೇಲಿ ಪ್ರೆಸ್‌ ಕ್ಲಬ್‌ ಕಾರ್ಯದರ್ಶಿ ಯು.ಎಸ್‌. ಪಾಟೀಲ, ಎಸ್ಕಾರ್ಡ ಅಧ್ಯಕ್ಷ ಐ.ಪಿ. ಘಟಕಾಂಬಳೆ, ಒಡನಾಡಿಯ ಅಧ್ಯಕ್ಷ ಬಿ.ಎನ್‌. ವಾಸರೆ, ನಗರಸಭೆ ಪ್ರತಿಪಕ್ಷ ನಾಯಕ ರಿಯಾಜ ಶೇಖ, ನಗರಸಭಾ ಸದಸ್ಯ ಅಷ್ಪಾಕ ಶೇಖ ಮುಂತಾದವರು ಮಾತನಾಡಿ, ಸತೀಶ ಗೋಸಾವಿಯವರ ಪ್ರಾಮಾಣಿಕ ಹಾಗೂ ಸಾರ್ಥಕ ಸೇವೆಯನ್ನು ಸ್ಮರಿಸಿದರು. ಸರಕಾರಿ ಕೆಲಸಗಳ ಜೊತೆಗೆ ಅವರೊಬ್ಬ ಕಲಾವಿದರಾಗಿದ್ದರು. ಸಾಂಸ್ಕೃತಿಕ ವ್ಯಕ್ತಿಯಾಗಿಯೂ ಗುರುತಿಸಿಕೊಂಡಿದ್ದರು, ನಗರಸಭೆಯ ಹಲವಾರು ಕೆಲಸಗಳನ್ನು ಜವಾಬ್ದಾರಿಯಿಂದ ನಿರ್ವಹಿಸಿದ್ದರು ಎಂದರು.
ಸನ್ಮಾನ ಸ್ವಿಕರಿಸಿ ಮಾತನಾಡಿದ ಸತೀಶ ಗೋವಿಯವರು ತಮ್ಮ ಸೇವಾ ಅವಧಿಯಲ್ಲಿ ಸಹಕರಿಸಿದವರನ್ನು ಸ್ಮರಿಸಿದರು. ನಗರಸಭಾ ಅಧ್ಯಕ್ಷ ನಾಗೇಶ ಸಾಳುಂಕೆಯವರು ಸತೀಶ ಗೋಸಾವಿ ಯವರ ಕಾರ್ಯಕ್ಷಮತೆಯನ್ನು ಪ್ರಶಂಸಿದರು.
ಇದೇ ಸಂದರ್ಭದಲ್ಲಿ ನಿವೃತ್ತರಾದ ಮತ್ತೋರ್ವ ಸಿಬ್ಬಂದಿ ಎಸ್‌.ಬಿ. ಗುಬ್ಬಿಯವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ವೇದಿಕೆಯಲ್ಲಿ ನಗರಸಭೆ ಉಪಾದ್ಯಕ್ಷ ಮಹಮ್ಮದ್‌ಗೌಸ್‌ ಪಣಿಬಂದ್‌, ಪೌರಾಯುಕ್ತ ಆರ್‌.ವಿ. ಜತ್ತಣ್ಣ, ಸಹಾಯಕ ಅಭಿಯಂತರ ಉದಯ ಛಬ್ಬಿ ಉಪಸ್ಥಿತರಿದ್ದರು.

loading...