ಆಹಾರ-ನೀರಿನ ದುರ್ಬಳಕೆ ನಿಲ್ಲಿಸಿ ಅರಣ್ಯ ಸಂವರ್ಧನೆಗೆ ನೆರವಾಗಿ

0
83

ಗದಗ: ಕಾಡು ಮತ್ತು ಕಾಡುಪ್ರಾಣಿಗಳ ಸಂರಕ್ಷಣೆಗೆ ಯಾರೂ ಕಾಡಿಗೆ ಹೋಗಬೇಕಿಲ್ಲ. ತಾವು ಬಳಸುವ ಆಹಾರ ಮತ್ತು £ೀರನ್ನು ದುರ್ಬಳಕೆಯನ್ನು ಮಾಡುವದನ್ನು £ಲ್ಲಿಸುವದರಿಂದ್ಯ ಅರಣ್ಯ ಪ್ರದೇಶ ಮತ್ತು ಅಲ್ಲಿನ ಜೀವಿಗಳ ಸಂರಕ್ಷಣೆ ಜೊತೆಗೆ ಸಂವರ್ಧನೆಯಲ್ಲಿ ಮಹತ್ತರ ಪಾತ್ರ ವಹಿಸಬಹುದಾಗಿದೆ ಎಂದು ಧಾರವಾಡ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ವಿ.ಮಂಜುನಾಥ ನುಡಿದರು.
ಗದಗ ಬಿಂಕದಕಟ್ಟಿ ಮೃಗಾಲಯದಲ್ಲಿನ ಉದ್ಯಾನವನದಲ್ಲಿ ರವಿವಾರ ಜರುಗಿದ 63ನೇ ವನ್ಯ ಜೀವಿ ಸಪ್ತಾಹದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಓರ್ವ ಮಾನವ ಜೀವಿ ದಿನಕ್ಕೆ 7 ಗ್ಯಾಸ ಸಿಲಿಂಡರ್ ಪ್ರಮಾಣದ ಆಮ್ಲಜನಕ ಸೇವಿಸುತ್ತಿದ್ದು ಇಷ್ಟು ಪ್ರಮಾಣದ ಉತ್ಪಾದನೆಗೆ 7 ಮರಗಳು ಬೇಕು. ಆದರೆ ಇಂದು 7 ಮರಗಳಿಗೆ ಸೇರಿ ಒಂದು ಮರವಿರುವುದು ಪರಿಸ್ಥಿತಿಯನ್ನು ತುಂಬಾ ಗಂಭೀರವಾಗಿಸಿದೆ.
ಮಾನವ ಆರೋಗ್ಯದ ಸಮಸ್ಯೆಗಳನ್ನು ಅದು ಹೆಚ್ಚಿಸಿದೆ. ಭಾರದಲ್ಲಿ ಸ್ವಾತಂತ್ರ್ಯ ಪೂರ್ವ 35 ಕೋಟಿಯಷ್ಟಿದ್ದ ಜನಸಂಖ್ಯೆ ಇಂದು 125 ಕೋಟಿಯನ್ನು ದಾಟಿದೆ. ಅದೇ ಪ್ರಮಾಣದಲ್ಲಿ ಭೂಮಿ ಅಥವಾ ಅರಣ್ಯ ಹೆಚ್ಚಳವಾಗಿಲ್ಲ ಬದಲಾಗಿ ಇರುವ ಅರಣ್ಯ ಕರಗಿದೆ. ಅಹಾರ ಉತ್ಪಾದನೆಗೆ ಭೂಮಿ ಹೆಚ್ಚಿಸಲು ಅರಣ್ಯಪ್ರದೇಶ ಬಲಿಯಾಗುತ್ತಿದೆ. ಮಾನವನ ಜೀವಜಲ £ೀರು ಉತ್ಪಾದನೆಗೆ ಅರಣ್ಯವೇ ಗರ್ಭಗುಡಿಯಾಗಿದೆ. ಮರಗಳಿಲ್ಲದೇ ನಮ್ಮ ಜೀವನವಿಲ್ಲ. ಆದುದರಿಂದ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ಮತ್ತು ಸಂವರ್ಧಣೆ ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದರು.
ಗದಗ ಜಿ.ಪಂ. ಸಿಇಓ ಮಂಜುನಾಥ ಚವ್ಹಾಣ, ಗದಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ ಕ್ಷೀರಸಾಗರ, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಪ್ರಭ, ವಲಯ ಅರಣ್ಯಾಧಿಕಾರಿ ಮಹಾಂತೇಶ ಪೆಟ್ಲೂರ ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿ, ವಿವಿಧ ಶಾಲಾ ಶಿಕ್ಷಕ ವೃಂದದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆರ್.ಎಂ.ಪತ್ತಾರ ಸ್ವಾಗತಿಸಿದರು. ಗೀತಾಂಜಲಿ ಗೌಡರ ಪರಿಸರ ಗೀತೆ ಪ್ರಸ್ತುತಿಸಿದರು.

loading...