ಯುವ ಪೀಳಿಗೆÀಗೆ ಹಿರಿಯರ ಮಾರ್ಗದರ್ಶನ ಅವಶ್ಯಕ 

0
70

ಗದಗ: ಉತ್ತಮ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಯುವಪೀಳಿಗೆಗೆ ಹಿರಿಯರ ಮಾರ್ಗದರ್ಶನ ಅವಶ್ಯಕವಾಗಿದೆ ಎಂದು ಜಿ.ಪಂ. ಅಧ್ಯಕ್ಷ ವಾಸಣ್ಣ ಕುರಡಗಿ ನುಡಿದರು.  ಗದಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ಹಿರಿಯ ನಾಗರಿಕರ  ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ “ವಿಶ್ವ ಹಿರಿಯ ನಾಗರಿಕರ ದಿನಾಚರಣೆ”  ಯನ್ನು  ಉದ್ಘಾಟಿಸಿ ಮಾತನಾಡಿದರು.  ನಾವು ಹಿರಿಯರನ್ನು ಹೇಗೆ ಗೌರವಿಸುತ್ತೇವೆಯೋ ಹಾಗೆಯೇ ಸಮಾಜ ಹಾಗೂ  ನಮ್ಮ ಮಕ್ಕಳು ನಮ್ಮನ್ನು ಗೌರವಿಸುತ್ತಾರೆ.     ಇತ್ತೀಚೆಗೆ ನಗರಪ್ರದೇಶಗಳಲ್ಲಿ ಹಗಲು ವೃದ್ಧಾಶ್ರಮಗಳು ಹೆಚ್ಚು ಕಂಡುಬರುತ್ತಿರುವುದು ಆರೋಗ್ಯಕರ ಬೆಳವಣಿಗೆ ಅಲ್ಲ. ಗ್ರಾಮಿಣ ಭಾಗದ ಹಿರಿಯ ನಾಗರಿಕರಿಗೆ ಪಿಂಚಣಿ  ಸೇರಿದಂತೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಕುರಿತು ಹೆಚ್ಚಿನ ಜಾಗೃತಿ ದೊರೆಯುವಂತೆ ಮಾಡಬೇಕು.  ಗದಗ ಜಿಲ್ಲಾಡಳಿತದಲ್ಲಿ  ಹಿರಿಯ ನಾಗರಿಕರ ಕುಂದುಕೊರತೆಗಳಿಗೆ  ಸೂಕ್ತವಾಗಿ ಸ್ಪಂದಿಸುತ್ತಿದೆ ಎಂದು ವಾಸಣ್ಣ ಕುರಡಗಿ ತಿಳಿಸಿದರು. ಗದಗ  ಜಿಲ್ಲಾಧಿಕಾರಿ ಮನೋಜ್ ಜೈನ್ ಅವರು ಮಾತನಾಡಿ  ಭಾರತೀಯ ಸಂಸ್ಕøತಿ ರೀತ್ಯ   ಹಿರಿಯರು ಇರುವ ಮನೆಯಲ್ಲಿ  ಶಾಂತಿ ಮತ್ತು ನೆಮ್ಮದಿ ಸಾಧ್ಯ. ಎಷ್ಟೇ ಸಾಧನೆ ಮಾಡಿದರೂ ಕೂಡ ಗುರು  ಹಿರಿಯರಿಗೆ ಗೌರವಿಸುವ ಸಂಸ್ಕಾರ ನಾವು  ಬೆಳೆಸಿಕೊಳ್ಳಬೇಕು. ನಮ್ಮ ಮಕ್ಕಳಿಗೂ ಅಂತಹ ಸಂಸ್ಕಾರ £ೀಡಬೇಕು ಎಂದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಚವ್ಹಾಣ ಅವರು ಮಾತನಾಡಿ  ಇಂದಿನ ದಿನಮಾನಗಳಲ್ಲಿ ಅವಿಭಕ್ತ ಕುಟುಂಬಗಳೂ ಕಣ್ಮರೆಯಾಗುತ್ತಿದ್ದು ಇದರಿಂದ  ಮಕ್ಕಳು ಹಿರಿಯರ ಮಾರ್ಗದರ್ಶನದಿಂದ ವಂಚಿತರಾಗುತ್ತಿದ್ದಾರೆ. ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಸಿ ಹಿರಿಯರಿಗೆ ಗೌರವ ನೀಡುವಂತಹ  ಮನೋಭಾವ ಬೆಳೆಸಬೇಕು ಎಂದರು.          ಜಿಲ್ಲಾ ಕಾನೂನು ಪ್ರಾಧಿಕಾರದ  ಸದಸ್ಯ ಕಾರ್ಯದರ್ಶಿ ಶ್ರೀಮತಿ ರೇಣುಕಾ ಕುಲಕರ್ಣಿ ಮಾತನಾಡಿ ಭಾರತೀಯ ಸಂಸ್ಕøತಿಯಲ್ಲಿ    ತಾಯಿಯೆಂದರೆ ವಾತ್ಸಲ್ಯ  ಬದಲಾವಣೆ ಜಗದ £ಯಮವಾದಾಗ್ಯೂ ಮೂಲ ಸಂಸ್ಕøತಿ ಸಂಪ್ರದಾಯ ಬದಲಾಗಬಾರದು. ಸುಭದ್ರ ರಾಷ್ಟ್ರ £ರ್ಮಾಣಕ್ಕೆ ಹಿರಿಯರ ಮಾರ್ಗದರ್ಶನ ಅವಶ್ಯಕವಾಗಿದೆ. ವೃದ್ಧರ ಕಷ್ಟಗಳಿಗೆ ಸ್ಪಂದಿಸುವ ಮನಸ್ಥಿತಿ ನಮ್ಮದಾಗಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಹಿರಿಯರಿಗಾಗಿ ಜಾರಿಗೆ ಬಂದಿರುವ ಸೌಲಭ್ಯಗಳು ಸದುಪಯೋಗವಾಗಬೇಕು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ  ಡಾ. ವೀರಪ್ಪ ಸಂಕನೂರ, ರೇವಣಸಿದ್ಧಪ್ಪ ಘಳಗಿ, ಡಾ. ವಾಮನಮೂರ್ತಿ ಕುಲಕರ್ಣಿ, ರೇವಪ್ಪ ದೊಡ್ಡಮನಿ, ಶ್ರೀಮತಿ ಅನುಸೂಯಾ ಹೊಸೂರಮಠ, ಕೊತ್ತಲ ಮಹಾದೆವಪ್ಪ, ಗೈಬುಸಾಬ ಬಳಗಟ್ಟಿ, ಬಿ.ಟಿ.ಚುಂಚಾಳ, ತುಳಸಮ್ಮ ಕೆಲೂರ, ಬಸವರಾಜ ಹಡಗಲಿ, ಶಿವಪ್ಪ ಬೆನಕಣ್ಣವರ ಅವರನ್ನು ಸನ್ಮಾನಿಸಿ ಹಿರಿಯ ನಾಗರಿಕರಿಗಾಗಿ ಏರ್ಪಡಿಸಲಾದ ಸಾಂಸ್ಕøತಿಕ ಹಾಗೂ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.          ಗದಗ ಜಿ.ಪಂ. ಸದಸ್ಯೆ ಲಲಿತಾ ಹುಣಸೀಕಟ್ಟಿ ಶಕುಂತಲಾ ಚವ್ಹಾಣ, ಜಿಲ್ಲಾ ಕಾನೂನು ಸಲಹೆಗಾರ ಜಿ.ಎಸ್. ಪಲ್ಲೇದ,  ಹಿರಿಯರ ನಾಗರಿಕರ ಸಂಘದ ಅಧ್ಯಕ್ಷ ನೀಲಗೂರ ಮಠ, ಚೇಗರೆಡ್ಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ£ರ್ದೇಶಕ  ರಾಮಕೃಷ್ಣಪ್ಪ ಪಡಗಣ್ಣವರ, ಹಿರಿಯ ನಾಗರಿಕರು ಉಪಸ್ಥಿತರಿದ್ದರು.

loading...