ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಧನಿಗೂಡಿಸುತ್ತೇನೆ: ಶಾಸಕ ಪಾಟೀಲ

0
43

ಕನ್ನಡಮ್ಮ ಸುದ್ದಿ-ಸಂಕೇಶ್ವರ 14: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ದನಿಯೆತ್ತಿದ ಮಾಜಿ ಸಚಿವ ಉಮೇಶ ಕತ್ತಿ ಈಗಲೂ ಹೋರಾಟ ಮುಂದುವರೆಸಿದರೆ ನಾನು ಅವರ ಹೋರಾಟಕ್ಕೆ ಧನಿಗೂಡಿಸಿ ರಾಜ್ಯ ಸರಕಾರವೇ ಇಲ್ಲಿ ಬಂದು ನೆಲೆಸುವಂತೆ ಮಾಡುತ್ತೇನೆ ಎಂದು ದೇವರಹಿಪ್ಪರಗಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು.
ನಗರದ ಗಾಂಧಿ ಚೌಕ್ ಆವರಣದಲ್ಲಿ ಉತ್ತರ ಕರ್ನಾಟಕದ ಜನರಿಗೆ ಉತ್ತರ ಕೊಡಿ ಅಭಿಯಾನ ಉದ್ದೇಶಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಬೆಳಗಾವಿಯಲ್ಲಿ ಕುಮಾರಸ್ವಾಮಿ ಅಧಿವೇಶನ ನಡೆಸಿ ಸುವರ್ಣ ವಿಧಾನಸೌಧ ನಿರ್ಮಿಸಲು ಮುಂದಾದರು. ಮಾಜಿ ಪ್ರಧಾನಿ ದೇವೆಗೌಡ ಆಲಮಟ್ಟಿ ಜಲಾಶಯ ನಿರ್ಮಿಸಲು ಮುಂದಾಗಿ ನೀರಾವರಿ ಸೌಭಾಗ್ಯ ತಂದರು. ಉತ್ತರ ಕರ್ನಾಟಕಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ಸರಕಾರಗಳ ಕೊಡುಗೆ ಏನು ಎಂದು ಪ್ರಶ್ನಿಸಿದರು.

ಸುವರ್ಣ ವಿಧಾನಸೌಧ ಉದ್ಘಾಟನೆ ದಿನವೇ ಉತ್ತರ ಕರ್ನಾಟಕದ ಪ್ರತ್ಯೇಕತೆ ಕುರಿತು ಧನಿಯೆತ್ತುವ ಮೂಲಕ ರಾಜ್ಯದ ಗಮನವನ್ನು ಉತ್ತರ ಕರ್ನಾಟಕದತ್ತ ಸೆಳೆದಿದ್ದರು. ಆದರೆ ಅವರ ಉದ್ದೇಶ ಉತ್ತರ ಕರ್ನಾಟಕದ ಉದ್ದೇಶವಾಗಿರುವ ಕುರಿತು ಸ್ಪಷ್ಟನೆ ನೀಡಿದ್ದಾರೆ. ಅವರು ತಮ್ಮಲ್ಲಿರುವ ಉದ್ದೇಶ ಈಡೇರುವವರೆಗೂ ಹೋರಾಟ ನಿಲ್ಲಿಸಬಾರದು. ಬಿಜೆಪಿ ಹಾಗೂ ಕಾಂಗ್ರೆಸ್ ಉತ್ತರ ಕರ್ನಾಟಕದ ಕಡೆಗೆ ಗಮನಹರಿಸುತ್ತಿಲ್ಲ. ಉತ್ತರ ಕರ್ನಾಟಕದ ಅಭಿವೃದ್ಧಿ ಪ್ರಾದೇಶಿಕ ಪಕ್ಷಗಳಿಂದ ಸಾಧ್ಯ ಎಂದರು.
ನಿಡಸೋಸಿ ಶ್ರೀಮಠಕ್ಕೆ ತೆರಳಿ ದರ್ಶನ ಪಡೆದು ಸಂಕೇಶ್ವರ ನಗರದ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ನಡೆಸಲಾಯಿತು. ಈ ಸಂದರ್ಭದಲ್ಲಿ ಎಂ.ಬಿ. ಪಾಟೀಲ, ಬಸವರಾಜ ಪಾಟೀಲ, ಪ್ರಕಾಶ ಮೈಲಾಕೆ, ಸದಾನಂದ ಕಬ್ಬೂರಿ ಹಾಗೂ ಮಹಿಳಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ಬಿ.ಎಸ್. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

 

loading...