ಪರಿವರ್ತನಾ ರ್ಯಾಲಿ, ಸಮಾವೇಶಕ್ಕೆ ಸಕಲ ಸಿದ್ಧತೆ: ಶಂಕರಗೌಡ

0
53

ಕನ್ನಡಮ್ಮ ಸುದ್ದಿ-ಬೆಳಗಾವಿ: ಭಾರತೀಯ ಜನತಾ ಪಾರ್ಟಿ ವತಿಯಿಂದ ನಗರದ ಶಹಾಪುರದಲ್ಲಿ ನವೆಂಬರ್ 20 ರಂದು ಹಮ್ಮಿಕೊಂಡ ಪರಿವರ್ತನಾ ರ್ಯಾಲಿಗೆ ಹಾಗೂ ಸಮಾವೇಶಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಕಿಸಾನ ಮೋರ್ಚಾ ಉಪಾಧ್ಯಕ್ಷ ಶಂಕರಗೌಡ ಪಾಟೀಲ ಹೇಳಿದರು.
ರವಿವಾರ ಸಮಾವೇಶದ ಸಿದ್ದತೆ ವೀಕ್ಷಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಸಮಾವೇಶಕ್ಕೆ ಸುಮಾರು 25000ಕ್ಕಿಂತ ಹೆಚ್ಚು ಜನ ಸೇರುವ ಸಾಧ್ಯತೆ ಇದೆ. ಪೊಲೀಸ್ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಬಿಗಿ ಪೊಲೀಸ್ ಬಂದೋಬಸ್ತ್, ಸಂಚಾರ ವ್ಯವಸ್ಥೆ ಬಗ್ಗೆ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ ಎಂದರು.
ಜಿಲ್ಲೆಯ ಬಿಜೆಪಿ ಮುಖಂಡರಾದ ಪ್ರಭಾಕರ ಕೋರೆ, ಸುರೇಶ ಅಂಗಡಿ, ಅಭಯ ಪಾಟೀಲ, ಪಿ.ಡಿ.ಧೊತ್ರೆ, ಶಶಿ ಪಾಟೀಲ, ರಾಜು ಟೋಪಣ್ಣವರ ಸೇರಿದಂತೆ ಜಿಲ್ಲೆಯ ಬಿಜೆಪಿ ಮುಖಂಡರು, ಕಾರ್ಯಕರ್ತರ ಸಹಕಾರದಿಂದ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯ ಸರಕಾರದ ವೈಫಲ್ಯಗಳು ಹಾಗೂ ಬಿಜೆಪಿ ಅಧಿಕಾರದಲ್ಲಿನ ಮಾಡಿರುವ ಸಾಧನೆಗಳ ಕುರಿತು ಜನರಿಗೆ ಮನವರಿಕೆ ಮಾಡಲಾಗುವುದು ಎಂದು ಹೇಳಿದರು.
ಈ ಕಾರ್ಯಕ್ರಮಕ್ಕೆ ಛತ್ತಿಸಗಡ್ ಮುಖ್ಯಮಂತ್ರಿ ರಮಣಸಿಂಗ್, ಅನಂತಕುಮಾರ ಹೆಗಡೆ, ಅನಂತಕುಮಾರ, ಬಿ.ಎಸ್.ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಸೇರಿದಂತೆ ರಾಜ್ಯದ ಘಣ್ಯರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಪರಿವರ್ತನಾ ಯಾತ್ರೆಯು ಹಲಗಾ ಕ್ರಾಸ್‍ಗೆ ನ.20 ರಂದು 2.30ಕ್ಕೆ ಆಗಮಿಸಲಿದೆ. ಶಿವಾಜಿ ಉದ್ಯಾನವನಕ್ಕೆ ಬರುತ್ತದೆ ನಂತರ ಅಲ್ಲಿಂದ ಮುಖ್ಯ ವೇದಿಕೆ ವರೆಗೆ ಕುಂಬಮೇಳದೊಂದಿಗೆ ಹೊರಡಲಿದೆ. ನಂತರ ಮಧ್ಯಾಹ್ನ 3 ಗಂಟೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

loading...