ಇಂದಿರಾ ಗಾಂಧಿ ಬಡವರಿಗಾಗಿ ಶ್ರಮಿಸಿದ್ದರು

0
106

ಕನ್ನಡಮ್ಮ ಸುದ್ದಿ-ಜಮಖಂಡಿ: ಪ್ರಿಯದರ್ಶಿನಿ ಭಾರತ ರತ್ನ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರು ಗರಿಬಿ ಹಠಾವೋ ಯೋಜನೆ ಜಾರಿಗೆ ತಂದ ಪರಿಣಾಮ ಇಂದಿರಾ ಅಂದರೆ ಭಾರತ ಅಂದರೆ ಇಂದಿರಾ ಎನ್ನುವ ಮಟ್ಟಿಗೆ ಇಂದಿರಾ ಗಾಂಧಿ ಅವರ ಜನಪ್ರಿಯತೆ ಹೆಚ್ಚಿಸಿತ್ತು ಎಂದು ಹಿರಿಯ ನ್ಯಾಯವಾದಿ ನಗರ ಕಾಂಗ್ರೆಸ್ ಎನ್.ಎಸ್ ದೆವರವರ ಇಂದಿಲ್ಲಿ ಹೇಳಿದರು.
ಅವರು ನಗರದ ಬಸವ ಭವನದಲ್ಲಿ ಜರುಗಿದ ಇಂದಿರಾ ಗಾಂಧಿ ಅವರ ಜನ್ಮ ಶತಮಾನೋತ್ಸವ ಸಮಾರಂಭದ ವಿಶೇಷ ಉಪನ್ಯಾಸಕರಾಗಿ ಮೇಲಿನಂತೆ ಮಾತನಾಡಿದರು. ತಮ್ಮ ಜೀವನ ಉದ್ದಕ್ಕೂ ಬಡವರಿಗಾಗಿ ಹೋರಾಟ ಮಾಡಿದ್ದು. 14 ರಾಷ್ಟ್ರೀಕೃತ ಬ್ಯಾಂಕ್‍ಗಳನ್ನು ರಾಷ್ಟ್ರೀಕರಣ ಗೊಳಿಸಿದ ಕೀರ್ತಿ ಇಂದಿರಾ ಗಾಂಧಿ ಅವರಿಗೆ ಸಲ್ಲುತ್ತದೆ. ಅಂದಿನ ವಿತ್ತ ಸಚಿವ ಜನಾರ್ಧನ ಪೂಜಾರಿ ಸಾಲ ಮೇಳವನ್ನು ಪ್ರಾರಂಭಿಸಿದ್ದು ಇಂದಿರಾ ಗಾಂಧಿ ಅವರ ಕಾಲದಲ್ಲಿ ಎಂದು ದೆವರವರ ವಕೀಲರು ಹೇಳಿದರು.

ಸಮಾರಂಭದ ಅಧ್ಯಕ್ಷತೆ ಬಾಗಲಕೋಟ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಯ್.ಬಿ ಸೌದಾಗರ ವಹಿಸಿದ್ದರು. ಜಮಖಂಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವರ್ಧಮಾನ ನ್ಯಾಮಗೌಡ ಸ್ವಾಗತಿಸಿದರು. ಕಾರ್ಯಕ್ರಮವನ್ನು ನ್ಯಾಯವಾದಿ ರವಿ ಯಡಹಳ್ಳಿ ನಿರೂಪಿಸಿದರು.
ವೇದಿಕೆಯ ಮೇಲೆ ಜವಳಿ ನಿಗಮದ ಉಪಾಧ್ಯಕ್ಷ ನಜೀರ ಕಂಗನೋಳ್ಳಿ, ಸಾವಳಗಿ ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಕಲ್ಲಪ್ಪ ಗಿರಡ್ಡಿ, ನಗರಸಭಾ ಅಧ್ಯಕ್ಷ ರಾಜು ಪಿಸಾಳ, ಮಾಜಿ ಜಿಪಂ ಉಪಾಧ್ಯಕ್ಷ ಈಶ್ವರ ಕರಿಬಸನ್ನವರ, ಮಾಜಿ ಜಿಪಂ ಸದಸ್ಯ ಅರ್ಜುನ ದಳವಾಯಿ, ರೇಷ್ಮಾ ಖಾದ್ರಿ, ಸುರೇಖಾ ನಾಡಗೀರ, ನಗರಸಭಾ ಸದಸ್ಯ ಶಫಿ ಯಲಗಾರ, ಆನಂದ ನ್ಯಾಮಗೌಡ, ಬಸವರಾಜ ನ್ಯಾಮಗೌಡ, ಅನ್ವರ ಮೋಮಿನ, ಸುಭಾಷ ಪಾಟೊಲಿ, ಶ್ರೀಮಂತ ಚೇರಿ, ಸುಭಾಷ ಸಾಹುಕಾರ, ಸಿ.ಎಂ ಆಸಂಗಿ ನಿಜಾಮ ಖಲಿಫ, ಫಕೀರಸಾಬ ಬಾಗವಾನ, ಮುಂತಾದವರು ಭಾಗವಹಿಸಿದ್ದರು.

loading...