ದೈಹಿಕ ಹಾಗೂ ಮಾನಸಿಕ ವೃದ್ಧಿಗೆ ಕ್ರೀಡೆ ಸಹಕಾರಿ: ಪವಾರ್

0
58

 

ದಾಂಡೇಲಿ: ದೈಹಿಕ ಹಾಗೂ ಮಾನಸಿಕ ವೃದ್ಧಿಗೆ ಕ್ರೀಡೆ ಸಹಕಾರಿ. ಈ ದಿಸೆಯಲ್ಲಿ ಕ್ರೀಡೆಗೆ ವಿಶೇಷವಾದ ಪ್ರಾಧನ್ಯತೆಯನ್ನು ಕೊಡಬೇಕಾದ ಅವಶ್ಯಕತೆಯಿದೆ. ಪರಸ್ಪರ ಸಾಮಾರಸ್ಯವನ್ನು ಪಸರಿಸುವಲ್ಲಿ ಕ್ರೀಡೆ ಪರಿಣಾಮಕಾರಿಯಾದ ಪಾತ್ರವನ್ನು ನಿರ್ವಹಿಸುತ್ತದೆ ಎಂದು ನಗರದ ಪೊಲೀಸ್ ಡಿವೈಎಸ್ಪಿ ಡಿ.ಎಸ್.ಪವಾರ್ ಅವರು ಹೇಳಿದರು.
ಅವರು ನಗರದ ವಾಜ್ ಮೋಟಾರ್ಸ್ ಮತ್ತು ವೆಸ್ಟರ್ನ್ ವಿಂಗ್ ಅಡ್ವೆಂಚರ್ಸ್ ಆಶ್ರಯದಲ್ಲಿ ಸ್ಥಳೀಯ ಸುಭಾಸನಗದಲ್ಲಿರುವ ಒಳ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಮುಕ್ತ ಡಬಲ್ಸ್ ಶಟ್ಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡುತ್ತಿದ್ದರು. ದಾಂಡೇಲಿಯಲ್ಲಿ ಜಿಲ್ಲಾ ಮಟ್ಟದ ಪಂದ್ಯಾವಳಿಯನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ಪಂದ್ಯಾವಳಿಗೆ ಶುಭ ಕೋರಿದರು. ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಉದ್ಯಮಿ ಹಾಗೂ ದಾಂಡೇಲಿ ಬ್ಯಾಡ್ಮಿಂಟನ್ ಅಸೋಶಿಯೇಶನ್ ಅಧ್ಯಕ್ಷ ಎಸ್.ಪ್ರಕಾಶ ಶೆಟ್ಟಿಯವರು ನಗರದಲ್ಲಿ ಶಟ್ಲ್ ಕ್ರೀಡೆ ಬೆಳೆಯುತ್ತಿದೆ. ನಗರದ ಮಕ್ಕಳು ರಾಜ್ಯಮಟ್ಟದವರೆಗೆ ತಮ್ಮ ಸಾಧನೆಯನ್ನು ಪಸರಿಸಿದ್ದಾರೆ. ಎಲ್ಲರು ಒಂದಾಗಿ ಕ್ರೀಡೆಗೆ ಸಹಕಾರವನ್ನು ನೀಡಬೇಕೆಂದು ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಸಿಪಿಐ ವೀರಣ್ಣ ಹಳ್ಳಿ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಪಂದ್ಯಾವಳಿಯ ಸಂಘಟಕರುಗಳಾದ ಡಾ: ಸಲ್ಮಾನ್, ಡಾ: ವಸೀಕ್, ಸಚ್ಚಿನ್ ವಾಜ್, ಮಿಥುನ್ ನಾಯಕ ಉಪಸ್ಥಿತರಿದ್ದರು.

loading...