ಕಳೆದ ಕಡತಗಳನ್ನು ನುಂಗಿದ ಸಭೆ-ಕಮಲದ ಆಕ್ಷೇಪಕ್ಕೆ ಕೈ ಜೋಡಿಸಿದ ಕೈಪಕ್ಷ

0
50

ಗದಗ, ನ. 21 : ಗದಗ-ಬೆಟಗೇರಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಕಡತಗಳ ಕಣ್ಮರೆಯಾದ ವಿಷಯ ತೀವ್ರ ಚರ್ಚೆಗೆ ಗ್ರಾಸವಾಗಿ ವಿರೋಧ ಪಕ್ಷ ಬಿಜೆಪಿಯ ಸದಸ್ಯರ ತೀವ್ರ ಆಕ್ಷೇಪಕ್ಕೆ ಆಡಳಿತ ಕೈ ಪಕ್ಷದ ಸದಸ್ಯರೂ ಕೈಜೋಡಿಸಿದ್ದರ ಪರಿಣಾಮವಾಗಿ ಸಭೆಯನ್ನು ಅನಿವಾರ್ಯವಾಗಿ ಮುಂದೂಡುವ ಪ್ರಸಂಗ ಜರುಗಿತು. ಸಭೆ ಆರಂಭಗೊಂಡು ಮೊದಲ ವಿಷಯ ಚರ್ಚೆಗೆ ಕೈಗೆತ್ತಿಕೊಳ್ಳುತ್ತಿದ್ದಂತೆಯೇ ಎದ್ದುನಿಂತ ವಿರೋಧ ಪಕ್ಷದ ಮಾಧವ ಗಣಾಚಾರಿ ಅವರು ಕಳೆದ ಒಂದು ತಿಂಗಳಿಂದಲೂ ಕಚೇರಿಯ ಕಡತಗಳನ್ನು ಹಾಗೂ ಹಿಂದಿನ ಸಭೆಯ ನಡಾವಳಿ, ಠರಾವುಗಳನ್ನು ಪರಿಶೀಲಿಸಲು ನಗರಾಧ್ಯಕ್ಷ, ಪೌರಾಯುಕ್ತ, ವ್ಯವಸ್ಥಾಪಕ ಹಾಗೂ ಸಿಬ್ಬಂದಿ ವರ್ಗದವರನ್ನು ಅಂಗಲಾಚಿ ಕೇಳಿಕೊಂಡರೂ ಕಡತಗಳನ್ನು ಪೂರೈಸದಿರುವದು ಭಾರೀ ಭೃಷ್ಠಾಚಾರ ನಡೆದಿರಬಹುದಾದ ಶಂಕೆ ವ್ಯಕ್ತವಾಗಿದೆ. ಚರ್ಚೆಗೆ ಬಾರದ ಹಲವಾರು ವಿಷಯಗಳನ್ನು ಇತರೆ ವಿಷಯಕ್ಕೆ ಸೇರಿಸಿಕೊಂಡು ಠರಾವು ಬರೆಯಲಾಗಿದೆ ಇದರಿಂದಾಗಿ ಸಾರ್ವಜನಿಕ ಕೋಟ್ಯಾಂತರ ರೂ.ಗಳ ಆಸ್ತಿ ಪರಭಾರೆಯಾಗಿದೆ ಎಂದು ಆರೋಪಿಸಿದರು.

loading...