ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ: ಸಿಎಂ

0
46

ಕುಮಟಾ: ಬಿಜೆಪಿ ಆಡಳಿತ ನಡೆಸುವಾಗ ಮೂರು ಮಂದಿ ಮುಖ್ಯಮಂತ್ರಿಗಳಾದರು. ರಾಜ್ಯವನ್ನು ಲೂಟಿ ಮಾಡಿದ್ದರಿಂದಲೇ ಸಿಎಂ ಯಡಿಯೂರಪ್ಪ ಸೇರಿದಂತೆ ಸಚಿವರು, ಶಾಸಕರು ಜೈಲು ಪಾಲಾದರು. ಇಂಥವರು ಈಗ ನಮ್ಮ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಅವರು ಬುಧವಾರ ಪಟ್ಟಣದ ಮಣಕಿ ಮೈದಾನದಲ್ಲಿ ವಿವಿಧ ಇಲಾಖೆಗಳ ಒಟ್ಟು 205 ಕೋಟಿ ರೂಗಳ 46 ಕಾಮಗಾರಿಗಳಿಗೆ ಚಾಲನೆ ಮತ್ತು ಪೂರ್ಣಗೊಂಡ 14 ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿ, ಯಡಿಯೂರಪ್ಪ ಮ್ಯಾಂಗನೀಸ್‌ ಅಕ್ರಮವೆಸಗಿ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ಜೈಲಿಗೆ ಹೋದರು. 5 ವರ್ಷದ ಅಧಿಕಾರಾವಧಿಯಲ್ಲಿ ಬಿಜೆಪಿ ಸಚಿವರು ಜೈಲು ಕಂಬಿಯ ಹಿಂದೆ ಹೋದವರ ಸಂಖ್ಯೆಯೇ ಹೆಚ್ಚಿದೆ. ಆಡಳಿತ ನಡೆಸುವ ಸಂದರ್ಭದಲ್ಲಿ ದಲಿತರ ಮನೆಗೆ ಭೇಟಿ ನೀಡದೇ ಇದ್ದ ಬಿಜೆಪಿ ನಾಯಕರು ಈಗ ಅವರ ಮನೆಗಳಿಗೆ ಹೋಗಿ ಊಟ ಮಾಡುವ ಮೂಲಕ ಮೊಸಳೆ ಕಣ್ಣೀರು ಸುರಿಸಿ ರಾಜಕೀಯ ಮಾಡುತ್ತಿದ್ದಾರೆ. ಅಧಿಕಾರವಿದ್ದಾಗ ಜನರು ಜನಪ್ರತಿನಿಧಿಗಳಿಗೆ ಅಧಿಕಾರ ನೀಡುವುದು ಅಧಿಕಾರ ಚಲಾಯಿಸಲಿಲ್ಲ. ಜನ ಸೇವೆ ಮಾಡಲು ಎಂಬುದನ್ನು ಪ್ರತಿಯೊಬ್ಬ ಜನಪ್ರತಿನಿಧಿ ಅರ್ಥ ಮಾಡಿಕೊಳ್ಳಬೇಕು. ನುಡಿದಂತೆ ನಡೆದ ಸರ್ಕಾರವೆಂದರೆ ನಮ್ಮ ಸರ್ಕಾರ ಮಾತ್ರ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಅರ್ಧ ಗಂಟೆಯಲ್ಲಿ ಬಡವರಪರವಾದ ಹಲವು ಭಾಗ್ಯ ಯೋಜನೆಗಳನ್ನು ಜಾರಿಗೆ ತಂದಿz್ದೇನೆ. ರಾಜ್ಯದಲ್ಲಿ ಕಾಂಗ್ರೆಸ್‌ ಪರ ಅಲೆ ಎದ್ದಿದೆ.
ಕಾರ್ಯಕ್ರಮದಲ್ಲಿ. ಲೋಕೋಪಯೋಗಿ ಹಾಗೂ ಬಂದರು ಇಲಾಖೆ ಸಚಿವ ಚಿವ ಎಚ್‌ ಸಿ ಮಹಾದೇವಪ್ಪ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ವಿ ಎಲ್‌ ನಾಯ್ಕ, ಜಗದೀಪ ತೆಂಗೇರಿ, ಜಿಪಂ ಸದಸ್ಯ ರತ್ನಾಕರ ನಾಯ್ಕ, ಪುರಸಭೆ ಅಧ್ಯಕ್ಷ ಮಧುಸೂಧನ ಶೇಟ್‌, ಉಪಾಧ್ಯಕ್ಷ ಮೋಹಿನಿ ಗೌಡ, ಕಾಂಗ್ರೆಸ್‌ ಮುಖಂಡರಾದ ರವಿಕುಮಾರ ಮೋಹನ ಶೆಟ್ಟಿ, ತಾರಾ ಗೌಡ, ಸುರೇಖಾ ವಾರೇಕರ್‌, ಸಚೀನ ನಾಯ್ಕ, ಗಣಪತಿ ಶೆಟ್ಟಿ, ಅಮರನಾಥ ಶೆಟ್ಟಿ, ರವಿ ಗೌಡ ಹಟ್ಟಿಕೇರಿ, ಗ್ರಾಪಂ ಅಧ್ಯಕ್ಷರಾದ ಮಹೇಶ ನಾಯ್ಕ, ಕೃಷ್ಣ ಗೌಡ, ಹನೀಪ್‌ ಸಾಬ್‌, ಕೃಷ್ಣಾನಂದ ವೆರ್ಣೇಕರ್‌, ಅರುಣ ಗೌಡ, ರಾಘವೇಂದ್ರ ಪಟಗಾರ, ರಾಮ ಪಟಗಾರ, ಕಲ್ಪನಾ ಗೌಡ, ಸುಮಿತ್ರಾ ಗೌಡ, ಅನಿತಾ ಮಾಪಾರಿ, ವಿನಾಯಕ ಶೇಟ್‌ ಹಾಗೂ ಮೊದಲಾದವರು ಉಪಸ್ಥಿತರಿದ್ದರು. ಗಿಬ್‌ ಪ್ರೌಢಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಜಿಪಂ ಸಿಇಒ ಚಂದ್ರಶೇಖರ ನಾಯಕ ಸ್ವಾಗತಿಸಿದರು. ಶಿಕ್ಷಕ ಮಂಜುನಾಥ ನಾಯ್ಕ ನಿರೂಪಿಸಿದರು. ಅಪರ ಜಿಲ್ಲಾಧಿಕಾರಿ ಎಚ್‌ ಪ್ರಸನ್ನ ವಂದಿಸಿದರು.

loading...