ಕ್ಷುಲ್ಲಕ ಕಾರಣಕ್ಕೆ ಜಗಳ: ಮಗ ತಾಯಿ ತಲೆಗೆ ಕೊಡಲಿಯಿಂದ ಹಲ್ಲೆ

0
42

ಕನ್ನಡಮ್ಮ ಸುದ್ದಿ-ಬೆಳಗಾವಿ: ಕ್ಷುಲ್ಲಕ ಕಾರಣಕ್ಕೆ ಮಗ ತಾಯಿ ಮಧ್ಯ ಜಗಳ ನಡೆದು ಕೊಡಲಿಯಿಂದ ತಾಯಿಗೆ ಹೊಡೆದ ಪರಿಣಾಮ ಗಂಭೀರಗಾಯವಾಗಿ ಜಿಲ್ಲಾಸ್ಪತ್ರೆಗೆ ದಾಖಲಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಹುಕ್ಕೇರಿ ತಾಲೂಕಿನ ಕಮತನೂರು ಗ್ರಾಮದ ಜ್ಯೋತಿ ಮಾಳಿ (38) ಗಂಭೀರಗಾಯ ಗೊಂಡ ಮಹಿಳೆ. ಬೆಳಿಗ್ಗೆ ಮನೆಯಲ್ಲಿ ತಾಯಿ ಮಗನ ಮಧ್ಯ ಮಾತಿನ ಚಕಮಕಿ ನಡೆದಿದೆ ಆಕ್ರೋಶಗೊಂಡ ಮಗ ಮನೆಯಲ್ಲಿದ್ದ ಕೊಡಲಿಯನ್ನು ತೆಗೆದುಕೊಂಡು ತಾಯಿಯ ತಲೆಗೆ ಬಲವಾಗಿ ಹೊಡೆದು ಪರಾರಿಯಾಗಿದ್ದಾನೆ. ತಕ್ಷಣ ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿಕಿತ್ಸೆ ಚಾಲ್ತಿಯಲ್ಲಿದೆ. ಈ ಕುರಿತು ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...