ಟ್ರ್ಯಾಕ್ಟರ್‍ಗೆ ಬಸ್ ಡಿಕ್ಕಿ: ಓರ್ವ ಮೃತ, ಮೂವರಿಗೆ ಗಂಭೀರ ಗಾಯ

0
41

ಕನ್ನಡಮ್ಮ ಸುದ್ದಿ-ಬೆಳಗಾವಿ: ಬೆಳಗಾವಿಯಿಂದ ಕೊಲ್ಲಾಪುರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಹೊರವಲಯದ ಮುಕ್ತಿಮಠ ಹತ್ತಿರ  ಕಬ್ಬಿನ ಟ್ರ್ಯಾಕ್ಟರ್‍ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಬಸ್ ಕಿನ್ನರ ಮೃತ ಹೊಂದಿ ಮೂವರು ಪ್ರಯಾಣಿಕರಿಗೆ ಗಂಭೀರಗಾಯವಾದ ಘಟನೆ ಶುಕ್ರವಾರ ಬೆಳಗಿನ ಜಾವ ನಡೆದಿದೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕೋಡಿಪೂರ ಗ್ರಾಮದ ಸಿದ್ದರಾಮ ರಾಜನ್ನ (25) ಮೃತ ವ್ಯಕ್ತಿ. ಚಂದ್ರಕಾಂತ ನರೇಂದ್ರಕುಮಾರ ಪಾಂಡೆ, ಏಕನಾಥ ವಿಶ್ವನಾಥ ಸಳಕೆ, ಜೆಮ್ಸ್ ಡೆವಿಡ್ ಗಂಭೀರ ಗಾಯಗೊಂಡವರು. ಇತರ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಬೆಳಗಿನ ಜಾವ ಬೆಳಗಾವಿಯಿಂದ ಕೊಲ್ಲಾಪುರಕ್ಕೆ ಖಾಸಗಿ ಬಸ್ ವೇಗವಾಗಿ ಚಲಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕಬ್ಬಿನ ಟ್ರ್ಯಾಕ್ಟರ್‍ಗೆ ಡಿಕ್ಕಿ ಹೊಡೆದು ಅಪಘಾತ ಸಂಬವಿಸಿದೆ. ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

loading...