ಸಿ.ಎಂ ಸಿದ್ದರಾಮಯ್ಯ ಕುಷ್ಟಗಿಗೆ: ಬಿಗಿ ಬಂದೋಬಸ್ತ್

0
66

ಕುಷ್ಟಗಿ: ಪಟ್ಟಣದ ರಾಯಚೂರು ರಸ್ತೆಯಲ್ಲಿರುವ ಟಿಎಪಿಸಿಎಂಎಸ್ ಬಯಲು ಜಾಗೆಯಲ್ಲಿ ಹಮ್ಮಿಕೊಂಡಿರುವ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಸಾಧನಾ ಸಮಾವೇಶಕ್ಕೆ ಸಿ.ಎಂ. ಸಿದ್ರಾಮಯ್ಯನವರು ಹಾಗೂ ಪಕ್ಷದ ಮುಖಂಡರು ಸೇರಿದಂತೆ ಸಚಿವರು ಆಗಮಿಸಲಿದ್ದು, ಯಾವುದೇ ಕಾರಣಕ್ಕೂ ತೊಂದರೆಯಾಗದಂತೆ ಪೊಲೀಸ್ ಬಿಗಿಬಂದೋಬಸ್ತ್ ನೀಡಲಾಗುತ್ತಿದ್ದು ಸಿ.ಪಿ.ಐ. ಸುರೇಶ ತಳವಾರ, ಪಿ.ಎಸ್.ಐ. ವಿಶ್ವನಾಥ ಹಿರೇಗೌಡರ ನೇತೃತ್ವದಲ್ಲಿ 01 ಡಿ.ಎಸ್.ಪಿ., 07 ಸಿ.ಪಿ.ಐ., 20 ಪಿ.ಎಸ್.ಐ., 29 ಎ.ಎಸ್.ಐ., 67 ಮುಖ್ಯ ಪೇದೆಗಳು, 100 ಪೊಲೀಸ್ ಸಿಬ್ಬಂದಿ, 24 ಮಹಿಳಾ ಪೊಲೀಸ್ ಸಿಬ್ಬಂದಿ, 150 ಗ್ರಹ ರಕ್ಷಕ ಸಿಬ್ಬಂದಿ, 03 ಡಿ.ಆರ್. ವ್ಯಾನ್, 01 ಕೆ.ಎಸ್.ಆರ್.ಪಿ. ವ್ಯಾನ್ ಸೇರಿದಂತೆ ಸಮಾವೇಶದಲ್ಲಿ ಯಾವುದೇ ರೀತಿಯ ಅವಗಡ ಸಂಭವಿಸದಂತೆ ಎಲ್ಲಾ ರೀತಿಯ ಭದ್ರತಾ ಕ್ರಮಗಳನ್ನು ಕೈಗೊಂಡು ಸುಮಾರು ಹತ್ತು ತಂಡಗಳನ್ನು ರಚನೆ ಮಾಡಿ ಪ್ರತಿಯೊಂದು ತಂಡಕ್ಕೂ ಕೂಡಾ ಜವಾಬ್ದಾರಿ ವಹಿಸಿಕೊಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರಾರಾಜಿಸುತ್ತಿರುವ ಬ್ಯಾನರಗಳು : ಮುಖ್ಯಮಂತ್ರಿ ಆಗಮನದ ಹಿನ್ನೇಲೆಯಲ್ಲಿ ಪಟ್ಟಣದಲ್ಲಿ ಕಟೌಟ್ ಬ್ಯಾನರ್‍ಗಳು ರಾರಾಜಿಸುತ್ತಿದ್ದು ಅಕ್ಕಮಪ್ಪದಲ್ಲಿ ಬರುವ ವಾಹನಗಳೇ ಗೋಚರವಾಗದಷ್ಟು ಬ್ಯಾನರ್ ಹಾವಳಿ ಯದ್ದು ಕಾಣುತ್ತಿದೆ. ಪಟ್ಟಣದಲ್ಲೆಡೆ ಮುಖ್ಯಮಂತ್ರಿಗಳಿಗೆ ಸ್ವಾಗತಿಸುವ ಕಟೌಟ್‍ಗಳನ್ನು ಹಾಕಲಾಗಿದ್ದು, ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿದಂತೆ ಅಭಿಮಾನಿಗಳು ಶುಭಾಷಯ ಕೋರಿರುತ್ತಾರೆ. ಜೊತೆಗೆ ಪಟ್ಟಣ ವ್ಯಾಪ್ತಿ ಸೇರಿದಂತೆ ಗ್ರಾಮೀಣ ಭಾಗದ ಜನರು ಈ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.
ಪಾರ್ಕಿಂಗ್ ವ್ಯವಸ್ಥೆ: ಕಾರ್ಯಕ್ರಮಕ್ಕೆ ಆಗಮಿಸುವ ಮುಖಂಡರುಗಳಿಗೆ ಮತ್ತು ಕಾರ್ಯಕರ್ತರಿಗೆ ಟ್ರಾಪಿಕ್ ಜಾಮ್ ಆಗದಂತೆ ಮುಂಜಾಗ್ರತೆ ಕ್ರಮವಾಗಿ ತಾವರಗೇರಿ ಕಡೆಯಿಂದ ಬರುವಂತಹ ವಾಹನಗಳನ್ನು ಕಂದಕೂರು ರಸ್ತೆ ಪಕ್ಕದಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಇನ್ನೂ ಗಜೇಂದ್ರಗಡ, ಹನಮಸಾಗರ, ಕ್ಯಾದಿಗುಪ್ಪ ಕಡೆಯಿಂದ ಬರುವಂತಹ ವಾಹನಗಳಿಗೆ ಕಾರ್ಯಕ್ರಮದ ವೇದಿಕೆಯ ಹಿಂಬಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಮತ್ತು ಕಾರ್ಯಕ್ರಮಕ್ಕೆ ಸೂಕ್ತ ಬಿಗಿ ಬಂದೋಬಸ್ತ್ ಒದಗಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪು ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಭದ್ತತೆ ಕಾರ್ಯಗಳನ್ನು ಕೈಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಪೊಲೀಸ್ ಇಲಾಖೆ ಸನ್ನದ್ದವಾಗಿದೆಂದು ಸಿ.ಪಿ.ಐ. ಸುರೇಶ ತಳವಾರ ಮತ್ತು ಪಿ.ಎಸ್.ಐ. ವಿಶ್ವನಾಥ ಹಿರೇಗೌಡರ ಪತ್ರಿಕೆಗೆ ಖಚಿತ ಮಾಹಿತಿ ನೀಡಿದ್ದಾರೆ.

loading...