ಯಡಿಯೂರಪ್ಪ ಚಕ್ ಮೂಲಕ ಲಂಚ ತೆಗೆದುಕೊಂಡು ಜೈಲಿಗೆ ಹೋಗಿದ್ದಾರೆ: ಸಿ.ಎಂ.ಸಿದ್ದರಾಮಯ್ಯ

0
42

ಕೊಪ್ಪಳ : ಇಂದಿರಾಗಾಂಧಿ ಜೈಲಿಗೆ ಹೋಗಿದ್ದು , ಯಡಿಯೂರಪ್ಪ ಜೈಲಿಗೆ ಹೋಗಿದ್ದು ಬೇರೆ ಬೇರೆ. ಇಂದಿರಾಗಾಂಧಿ ಲಂಚ ತೆಗೆದುಕೊಂಡು ಜೈಲಿಗೆ ಹೋಗಿಲ್ಲ.
ಯಡಿಯೂರಪ್ಪ ಚಕ್ ಮೂಲಕ ಲಂಚ ತೆಗೆದುಕೊಂಡು ಜೈಲಿಗೆ ಹೋಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕುಷ್ಟಗಿಯಲ್ಲಿ ಹಮ್ಮಿಕೊಂಡಿರುವ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಹೆಲಿಪ್ಯಾಡನಲ್ಲಿ ಮಾಧ್ತಮದವರೊಂದಿಗೆ ಮಾತನಾಡಿದರು
ಬಿಜೆಪಿಯವರಿಗೆ ಸರ್ಕಾರದ ಬಗ್ಗೆ ಮಾತನಾಡಲು ಇವರಿಗೇನು ನೈತಿಕತೆಹೋಗಿಲ್ಲ
ಕರಾವಳಿ ಭಾಗ ಶಾಂತವಾಗಿದೆ, ಆದರೂ ಸಳ್ಲು ವಂದತಿಗಳನ್ನು ಹಬ್ಬಿಸುವ ಮೂಲಕ ಬಿಜೆಪಿಯವರು ಕೋಮು ಗಲಾಟೆಯಲ್ಲಿ ಮತದಾರರನ್ನು ಧ್ರುವೀಕರಣ ಮಾಡುವ ಹುನ್ನಾರ ಮಾಡುತ್ತಿದ್ದಾರೆ, ಕೋಮುಭಾವನೆಗಳನ್ನು ಕೇರಳಿಸುವ ಮೂಲಕ ಅಧಿಕಾರಕ್ಕೆ ಬರಲು ಹವಣಿಸುತ್ತಿದೆ, ಮೊದಲು ಇವರುಗಳ ಮೇಲೆ ಇರುವ ಕೇಸ್ ಗಳಿಂದ ಹೊರಬರಲಿ ಎಂದರು.
ಲಿಂಗಾಯತ ಪ್ರತ್ಯೇಕ ಧರ್ಮ ಬೇಡಿಕೆ ಕೇಂದ್ರಕ್ಕೆ ಶಿಫಾರಸ್ಸು ಲಿಂಗಾಯತ ಧರ್ಮ ಸ್ಥಾಪನೆ ಶಿಫಾರಸ್ಸು ಮಾಡಿಲ್ಲ,ಈಗ ಶೀಘ್ರವಾಗಿ ಕೇಂದ್ರಕ್ಕೆ ಕಳುಹಿಸಲಾಗುವುದು .
ಒಂದಾಗಿ ಬರುತ್ತೇವೆ ಎಂದರೂ ಬರಲಿಲ್ಲ. ಹೀಗಾಗಿ ಬಂದಿರುವ ಮನವಿಗಳನ್ನಾಧರಿಸಿ ಕಳುಹಿಸಲಾಗುವುದು ಎಂದರು.
ಮೆಕ್ಕೆಜೋಳ ಬೆಂಬಲಬೆಲೆ ಕೇಂದ್ರ ಪ್ರಾರಂಭಿಸಲಾಗುವುದು.
ಕೇಂದ್ರ ಅನುಮತಿ ನೀಡದಿದ್ದರು ರೈತರ ಹಿತದೃಷ್ಟಿಯಿಂದ ಪ್ರಾರಂಭಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಕುಷ್ಟಗಿ ಮಾಜಿ ಶಾಸಕ ಅಮರೇಗೌಡ ಬಯ್ಯಾಪೂರ, ಉಪಸ್ಥಿತರಿದ್ದರು

 

loading...