ಗುಜರಾತ್‌‌-ಹಿಮಾಚಲ ಪ್ರದೇಶ ಫಲಿತಾಂಶ: ರಾಹುಲ್‌‌ ಪ್ರತಿಕ್ರಿಯೆ ಏನು.?  

0
39

 

ನವದೆಹಲಿ: ರಾಹುಲ್‌‌ ಗಾಂಧಿ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಗೊಂಡ ಬಳಿಕ ಹಿಮಾಚಲ ಪ್ರದೇಶ ಹಾಗೂ ಗುಜರಾತ್‌ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಫಲಿತಾಂಶಕ್ಕೆ ಸಂಬಂಧಿಸಿದಂತೆ ರಾಹುಲ್‌‌ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.ಗುಜರಾತ್‌‌ ಚುನಾವಣಾ ಫಲಿತಾಂಶ ನನಗೆ ನಿರಾಶೆ ತಂದಿಲ್ಲ. ಫಲಿತಾಂಶದಿಂದ ನಾನು ತೃಪ್ತಿಯಾಗಿರುವೆ ಎಂದು ಅವರು ಹೇಳಿದ್ದಾರೆ. ಫಲಿತಾಂಶ ಹೊರಬೀಳುತ್ತಿದ್ದಂತೆ ಎಐಸಿಸಿ ಕೇಂದ್ರ ಕಚೇರಿ ಎದುರು ಮಾಧ್ಯಮದವರೊಂದಿಗೆ ಮಾತನಾಡಿರುವ ರಾಹುಲ್‌ ಗಾಂಧಿ, ಫಲಿತಾಂಶ ನನಗೆ ಯಾವುದೇ ನಿರಾಶೆಯನ್ನುಂಟು ಮಾಡಿಲ್ಲ ಎಂದಿದ್ದಾರೆ.
2 ಹಂತಗಳಲ್ಲಿ ನಡೆದ ಗುಜರಾತ್‌‌ ಚುನಾವಣೆ ವೇಳೆ ರಾಹುಲ್‌ ಗಾಂಧಿ ಭರ್ಜರಿ ಪ್ರಚಾರ ಕೈಗೊಂಡಿದ್ದರು. ಆದರೆ ರಾಹುಲ್‌‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌‌ ಬಹುಮತ ಗಳಿಸಲು ವಿಫಲಗೊಂಡಿದ್ದರೂ ಈ ಹಿಂದಿನ ಚುನಾಚಣೆಗಿಂತಲೂ ಅಧಿಕ ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ.

 

loading...