ವಿದ್ಯಾರ್ಥಿಗಳು ಭವಿಷ್ಯದ ಬಲಿಷ್ಟ ಭಾರತ ನಿರ್ಮಾಣದ ರೂವಾರಿಗಳು: ಡಾ. ಗಣೇಶ

0
98

ದಾಂಡೇಲಿ : ಭವಿಷ್ಯದ ಬಲಿಷ್ಟ ಭಾರತ ನಿರ್ಮಾಣದ ರೂವಾರಿಗಳಾಗಿರುವ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವವಿರಬೇಕು. ಸವಾಲುಗಳಿಗೆ ಎದೆಯೊಡ್ಡುವ ಚಾಕಚಾಕ್ಯತೆಯನ್ನು ವಿದ್ಯಾರ್ಥಿಗಳು ಕರಗತ ಮಾಡಿಕೊಳ್ಳಬೇಕು. ಕೈಲಾಗದು ಎಂಬ ಮನೋಭಾವ ಬಿಟ್ಟು ಏನನ್ನು ಸಾಧಿಸಬಲ್ಲೆ ಎಂಬ ಗುರಿ ಇರಬೇಕು ಎಂದು ಭಾರತದ ಶ್ರೇಷ್ಠ ಭಾಷಾ ವಿಜ್ಞಾನಿಗ, ಅಂತರಾಷ್ಟ್ರೀಯ ಖ್ಯಾತಿಯ ಸಂಸ್ಕøತಿ ಚಿಂತಕ ಪದ್ಮಶ್ರೀ ಡಾ. ಗಣೇಶ ಎನ್. ದೇವಿಯವರು ನುಡಿದರು.
ಅವರು ನಗರದ ರಂಗನಾಥ ಅಡಿಟೋರಿಯಂನಲ್ಲಿ ಸೋವiವಾರಂದು ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಬಂಗೂರನಗರ ಪದವಿ ಮಹಾ ವಿದ್ಯಾಲಯಗಳ ಸಂಯಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾದ ‘ಆಂತರಿಕ ಗುಣಮಟ್ಟ ಭರವಸಾ ಕೋಶ’ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕೋಶ ಉದ್ಘಾಟಿಸಿ ಮಾತನಾಡಿದರು.
ತಂದೆ-ತಾಯಿಯ ಮಾತನ್ನು ಕೇಳುವ ಗುಣ, ತಮ್ಮ ಅಣ್ಣನ ಮಾತನ್ನು, ತಂಗಿ ಅಕ್ಕನ ಮಾತನ್ನು ಹಿರಿಯರಿಗೆ ಗೌರವಿಸುವದನ್ನು ಕಲಿತರೆ ಆತಂರಿಕ ಗುಣಮಟ್ಟ ಎಲ್ಲರಲ್ಲಿ ಸ್ವಾಭಾವಿಕವಾಗಿ ಹೆಚ್ಚುತ್ತದೆ ಎಂದ ಅವರು ನುಡಿದರು.
ಅಭ್ಯಾಸದಿಂದ ಪದವಿಯನ್ನು ಪಡೆದು ಹೊರ ಜಗತ್ತಿಗೆ ಬಂದ ಮೇಲೆ ವಿದ್ಯಾರ್ಥಿಗಳು ದೇಶದಲ್ಲಿ ವಿಷ ಬೀಜ ಬಿತ್ತುವಂತವರ ಕೈಜೋಡಿಸದೆ, ದೇಶದ ಅಭಿಮಾನದೊಂದಿಗೆ ಉತ್ತಮ ಮಾನವರಾಗ ಬಾಳಲು ಕಲಿಯುವದು ಅತಿ ಅವಶ್ಯವಾಗಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಡಾ. ಸುರೇಖಾ ದೇವಿ ನೆರೆದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿ ಹೆಚ್ಚಾಗಬೇಕಾಗಿದೆ ಕಠಿಣ ಪರಿಶ್ರಮ ಮಹತ್ತರವಾದ ಗುರಿ ಸಮರ್ಪಣೆ ಅತಿ ಮುಖ್ಯವೆಂದು ಡಾ. ಸುರೇಖಾ ದೇವಿ ನುಡಿದರು.
ದಾಂಡೇಲಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರವಿ ಗೌತಮ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಾ. ಪ್ರಾಂಶುಪಾಲ ಶೋಭಾ ಶರ್ಮಾ ಸ್ವಾಗತಿಸಿದರು. ಆತಂರಿಕ ಗುಣಮಟ್ಟ ಭರವಸಾ ಕೋಶದ ಸಂಯೋಜಕ ಡಾ. ಬಿ.ಎಲ್. ಅಕ್ಕಿ ಕೋಶದ ಕಾರ್ಯದ ರೂಪರೇಶಗಳನ್ನು ವಿವರಿಸಿದರು. ಪ್ರೊ ಎಸ್.ವಿ ಚಿಂತಣ ಅತಿಥಿಗಳನ್ನು ಪರಿಚಯಿಸಿದರು. ಪ್ರಾಂಶುಪಾಲ ಡಾ. ಎಂ.ಡಿ ಒಕ್ಕುಂದ ಪ್ರಾಸ್ತಾವಿಕವಾಗಿ ಮಾತನ್ನಾಡಿದರು. ಡಾ. ವಿನಯಾ ನಾಯ್ಕ ನಿರೂಪಿಸಿದರು. ವೇದಿಕೆಯಲ್ಲಿ ಡಾ. ಜಂಗೂಬಾಯಿ, ಡಿಪ್ಯೂಟಿ ಜನರಲ್ ಮ್ಯಾನೇಜರ್ ಕೆ.ಜಿ ಗಿರಿರಾಜ, ಡಾ. ಆರ್.ಜಿ ಹೆಗಡೆ ಉಪಸ್ಥಿತರಿದ್ದರು.

loading...