ಮೊಬೈಲ್‌ ಬಳಕೆಯಿಂದ ಸಾಂಸ್ಕೃತಿಕ ಕಲೆಗಳು ನಶಿಸಿಹೋಗುತ್ತಿವೆ: ಸುಮನಾ

0
61

ಕನ್ನಡಮ್ಮ ಸುದ್ದಿ-ಸಿದ್ದಾಪುರ: ಶುಭ ಮಂಗಳಕಲಾ ಸಾಹಿತ್ಯ ವೇದಿಕೆಯಿಂದ ಸಾಂಸ್ಕೃತಿಕ ಚಟುವಟಿಕೆಗಳ ಆಯ್ಕೆ ಕಾರ್ಯಕ್ರಮ ರಾಘವೇಂದ್ರ ಮಠದಲ್ಲಿ ನಡೆಯಿತು.
ಪಟ್ಟಣ ಪಂಚಾಯತಿ ಅಧ್ಯಕ್ಷೆ ಸುಮನಾ ಕಾಮತ್‌ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅತೀಹೆಚ್ಚು ಮೋಬೈಲ್‌ ಬಳಕೆಯಿಂದ ಸಾಂಸ್ಕೃತಿಕ ಕಲೆಗಳು ನಶಿಸಿಹೋಗುತ್ತಿವೆ. ಸಾಂಸ್ಕೃತಿಕವಾಗಿ ಸಂಪದ್ಬರಿತ ನಾಡಿನಲ್ಲಿ ಕಲೆಯನ್ನು ಉಳಿಸುವ ಹೊಣೆ ಎಲ್ಲರ ಮೇಲಿದೆ. ಶುಭ ಮಂಗಳಕಲಾ ಸಾಹಿತ್ಯ ವೇದಿಕೆ ಸಂಸ್ಕೃತಿ ಮತ್ತು ಜಾನಪದ ಕಲೆಯನ್ನು ಉಳಿಸುವ ಬೆಳೆಸುವ ಕಾರ್ಯ ಮಾಡುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರಾಜೇಂದ್ರ ಕಿಂದ್ರಿ ಮಾತನಾಡಿ ಕಲೆ ಸಾಹಿತ್ಯಲ್ಲಿರುವ ಅಭಿರುಚಿ ಕಡಿಮೆಯಾಗುತ್ತಿರುವುದು ಖೇದಕರ ಸಂಗತಿ ಕಲೆ ಸಾಹಿತ್ಯವನ್ನು ಪ್ರೋತ್ಸಾಹಿಸು, ಹಾಗೂ ಭಾಗವಹಿಸುವವರ ಸಂಖ್ಯೆ ಹೆಚ್ಚಾದಾಗ ಪೂರ್ವಿಕರಿಂದ ಉಡುಗೊರೆಯಾಗಿ ಪಡೆದ ಕಲೆಯನ್ನು ಉಳಿಸಲು ಸಾಧ್ಯ. ಈ ಕಾರ್ಯಕ್ಕೆ ವೇದಿಕೆ ಉತ್ತಮ ಹೆಜ್ಜೆ ಇಟ್ಟಿದೆ ಎಂದರು. ಶುಭ ಮಂಗಳಕಲಾ ಸಾಹಿತ್ಯ ವೇದಿಕೆಯ ಅಧ್ಯಕ್ಷ ರಾಘವೇಂದ್ರ ಹಿತ್ಲಕೊಪ್ಪ ಅಧ್ಯಕ್ಷತೆ ವಹಿಸಿದ್ದರು. ನಿರ್ಣಾಯಕ ಅಶ್ರಫ್‌ ಜೋಗ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಿದ್ದಾಪುರ ಪಟ್ಟಣ. ಕಾನಗೋಡ. ಶಿರಳಗಿ ವ್ಯಾಪ್ತಿಯ ಶಾಲಾ ಕಾಲೇಜ ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು. ಜಾನಪದ ಗೀತೆ,ಭಾವಗೀತೆ,ಭಕ್ತಿ ಗೀತೆ, ಚಲನಚಿತ್ರ ಗೀತೆ, ಜಾನಪದ ನೃತ್ಯ, ಕೋಲಾಟ, ಭರತನಾಟ್ಯ, ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದವು.
ವೆಂಕಟೇಶ ಕೊಂಡ್ಲಿ ಪ್ರಾರ್ಥಿಸಿದರು.ಪ್ರಶಾಂತ ಶೇಟ್‌ ಸ್ವಾಗತಿಸಿದರು. ಟಿ.ಕೆ.ಎಂ ಆಜಾದ ಕಾರ್ಯಕ್ರಮ ನಿರ್ವಹಿಸಿದರು.

loading...