ದಾಖಲೆಗೆ ಸಿದ್ದವಾಗುತ್ತಿದೆ ಸಿದ್ದರಾಮೇಶ್ವರ ಸಂಕಲ್ಪ ಯಾತ್ರೆ

0
63

[vc_video link=”https://youtu.be/1hK-o8anZYc”]
ಕನ್ನಡಮ್ಮ ಸುದ್ದಿ
ಬೆಳಗಾವಿ : ಜನವರಿ 12,13,14 ರಂದು ಮೂರು ದಿನಗಳ ಕಾಲ ರಾಯಬಾಗ ತಾಲೂಕಿನ ಮುಗಳಖೋಡ ಮಠದಲ್ಲಿ ಅನುಭವ ಮಂಟಪ ಉದ್ಘಾಟನೆಯು ಹಾಗೂ ಸಿದ್ದರಾಮೇಶ್ವರ ಸಂಕಲ್ಪ ಯಾತ್ರೆ ಜರುಗುತ್ತಿರುವುದು ಜಗತ್ತಿಗೆ ಸಾಕ್ಷಿಯಾಗಲ್ಲಿದೆ ಎಂದು ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಅವರು ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜ.12 ರಂದು ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ 10ಸಾವಿರ ಯುವಕರಿಂದ ಸ್ವಾಮಿ ವಿವೇಕಾನಂದರ ವೇಷಭೂಷಣದಲ್ಲಿ ದಾಖಲೆ ಬರೆಯಲ್ಲಿದ್ದಾರೆ. 770 ಗಣಗಳ ಪೂಜೆಯೊಂದಿಗೆ 125 ಕೆ.ಜಿ.ರಕ್ತದಾನ ನಡೆಯಲ್ಲಿದೆ ಎಂದರು.
ಮೂರು ದಿನಗಳ ಕಾಲ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಪ್ರಧಾನಿ ಸೇರಿದಂತೆ ಐದು ರಾಜ್ಯಗಳ ಸಿಎಂ, ಕೇಂದ್ರ ಸಚಿವರು ಸೇರಿದಂತೆ ಹತ್ತು ಲಕ್ಷಕ್ಕೂ ಅಧಿಕ ಜನಸ್ಥೋಮ ಭಾಗವಹಿಸಲ್ಲಿದ್ದಾರೆ ಎಂದರು.
ಶಾಸಕ ಪಿ.ರಾಜೀವ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

loading...