ಜಾತಿ,ಲಿಂಗ ಪದ್ಧತಿಗಳೆರಡು ಅಸಮಾನತೆಯ ಸಂಕೇತಗಳಾಗಿವೆ: ಫರ್ನಾಕರ್‌

0
98

ಕನ್ನಡಮ್ಮ ಸುದ್ದಿ-ಸಿದ್ದಾಪುರ: ಎನ್‌.ಎಸ್‌.ಎಸ್‌. ಘಟಕ ಮತ್ತು ಇತಿಹಾಸ ಸಂಘ, ಜಂಟಿಯಾಗಿ ಏರ್ಪಡಿಸಿದ ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆಯವರು ಜನ್ಮ ದಿನದ ಕಾರ್ಯಕ್ರಮ ಎಂ.ಜಿ.ಸಿ ಕಾಲೇಜಿನಲ್ಲಿ ನಡೆಯಿತು. ಶ್ರೇಣೀಕೃತ ಸನಾತನ ವ್ಯವಸ್ಥೆಯಲ್ಲಿ ಜಾತಿ ಮತ್ತು ಲಿಂಗ ಪದ್ಧತಿಗಳೆರಡು ಅಸಮಾನತೆ ಮತ್ತು ಶೋಷಣೆಯ ಸಂಕೇತಗಳಾಗಿವೆ. ಇವುಗಳ ವಿರುದ್ಧ ಹೋರಾಡಿದ ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆಯವರು ಸ್ತ್ರೀ ವಿಮೊಚನೆಗೆ ಮೊದಲಿಗರಾಗಿದ್ದಾರೆ. ಶಿಕ್ಷಣದಿಂದ ಮಾತ್ರ ಎಲ್ಲಾ ಸಂಕೋಲೆಯಿಂದ ಹೊರಬರಲು ಸಾಧ್ಯ. ಸತ್ಯ ಶೋಧಕ ಸಮಾಜದ ಮೂಲಕ ಸ್ವಾಭಿಮಾನದ ಚಿಂತನೆಯ ಜ್ಯೋತಿಯನ್ನು ಬೆಳಗಿಸಿದವರು ಸಾವಿತ್ರಿಬಾಯಿ ಫುಲೆಯವರು ಇವರು ಹುಟ್ಟಿದ ದಿನವನ್ನು ಆಚರಿಸುತ್ತಿರುವುದು ಶ್ಲಾಘÀನೀಯ.” ಎಂದು ಇತಿಹಾಸ ಪ್ರಾಧ್ಯಾಪಕ ಪ್ರೊ. ಡಿ.ಐ ಫರ್ನಾಕರ್‌ರವರು ಹೇಳಿದರು.
ಅಧ್ಯಕ್ಷತೆ ವಹಿಸಿದ ಪ್ರೊ.ಜಯಂತಿ ಶ್ಯಾನಭಾಗ ಮಾತನಾಡಿ “ಮಹಿಳೆಯರು ಶಿಕ್ಷಣವಂತರಾಗಿ ತಮ್ಮ ಹಕ್ಕುಗಳನ್ನು ಪಡೆಯಲು ಜಾಗೃತವಾಗಿ ಮುನ್ನುಗ್ಗಬೇಕು. ಸಾವಿತ್ರಿಬಾಯಿ ಫುಲೆ ಅಂದು ಶಾಲೆ ತೆರೆದಿದ್ದು ಇಂದು ಹಲವು ಹೆಣ್ಣು ಮಕ್ಕಳು ಶಾಲೆ ಮೆಟ್ಟಿಲು ತುಳಿಯಲು ಸಹಕಾರಿಯಾಯಿತು. ಈಗಲೂ ಲಿಂಗ ಅಸಮಾನತೆ, ಅನಕ್ಷರತೆ ಜೀವಂತ ಇರುವುದನ್ನು ನೋಡಿದ್ದೇವೆ. ಆ ಕಾಲದಲ್ಲಿ ಶೋಷಣೆಯ ವಿರುದ್ಧ ಹೋರಾಡಲು ಫುಲೆ ದಂಪತಿಗಳು ಪರಿಶ್ರಮ ಪಟ್ಟರು ಎನ್ನುವುದು ಅರ್ಥವಾಗುತ್ತದೆ ಎಂದರು.
ಸಾವಿತ್ರಿಬಾಯಿ ಫುಲೆಯವರ ಬದುಕು ಮತ್ತು ಚಿಂತನೆಯನ್ನು ವಿದ್ಯಾರ್ಥಿನಿ ಮಧುರಾ ಮಡಗಾಂವ್ಕರ್‌À ವಿವರಿಸಿದರೆ, ಸಾವಿತ್ರಿಬಾಯಿ ಫುಲೆಯವರು ಸಾಧನೆಗಳನ್ನು, ಇಂದು ಅವರ ಆಲೋಚನೆಯ ಅಗತ್ಯತೆಯ ಕುರಿತು ವಿದ್ಯಾರ್ಥಿನಿ ಭಾಗ್ಯಶ್ತ್ರೀ ದೊಡ್ಮನೆ ಮಾತನಾಡಿದರು. ಎನ್‌ ಎನ್‌ ಎಸ್‌ ಕಾರ್ಯಕ್ರಮಾಧಿಕಾರಿ ವಿಠ್ಠಲ್‌ ಭಂಡಾರಿಯವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಕಿರಣ್‌ ವಂದಿಸಿದರು. ಯಶಸ್ವಿನಿ ಕಾರ್ಯಕ್ರಮವನ್ನು ನಿರೂಪಿಸಿದಳು.

loading...