ಕ್ರೀಡೆ ದೈಹಿಕ ಸಾಮರ್ಥ್ಯ ಹೆಚ್ಚಸುತ್ತದೆ: ಕುಲಕರ್ಣಿ

0
72

ಕನ್ನಡಮ್ಮ ಸುದ್ದಿ-ಚನ್ನಮ್ಮ ಕಿತ್ತೂರ: ವಿದ್ಯಾರ್ಥಿಗಳು ಮಾನಸಿಕವಾಗಿ ಪ್ರಬಲರಾಗಬೇಕಾದರೆ ದೈಹಿಕವಾಗಿ ಬಲಾಢ್ಯರಾಗಿರಬೇಕು. ಆಟ-ಮೇಲಾಟ ಮತ್ತು ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವ ಕ್ರೀಡೆಗಳಲ್ಲಿ ತೊಡಗಿಕೊಳ್ಳಬೇಕು ಎಂದು ಬೈಲೂರಿನ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಶಾಖೆ ಪ್ರಬಂಧಕ ಎಲ್‌.ವಿ. ಕುಲಕರ್ಣಿ ಹೇಳಿದರು.
ಸಮಿಪದ ಬೈಲೂರು ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ವಾ಼಼ರ್ಷೀಕ ಕ್ರೀಡಾಕೂಟದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಸೋಲು ಮತ್ತು ಗೆಲುವನ್ನು ನಮ್ಮ ಜೀವನದಲ್ಲಿ ಸಮಾನವಾಗಿ ಸ್ವೀಕರಿಸಬೇಕು, ಗೆದ್ದಾಗ ಸಹಜ ಖುಷಿ ಪಡಬೇಕು ಸೋತಾಗ ತಾಳ್ಮೆ ಕಳೆದುಕೊಳ್ಳದೆ ಮತ್ತೆ ಪುನ: ಪ್ರಯತ್ನಿಸಿ ಗೆಲುವನ್ನು ನಿಮ್ಮದಾಗಿಸಿಕೊಳ್ಳಬೇಕೆಂದು ಎಂದರು.
ಶಾಲೆಗೆ ಆಟದ ಮೈದಾನಕ್ಕೆ ಗ್ರಾಮ ಪಂಚಾಯತ ವತಿಯಿಂದ ಎನ್‌.ಜಿ.ಓ ಅನುಧಾನದಲ್ಲಿ 4 ಲಕ್ಷ ರೂ. ನೀಡಲಾಯಿತ್ತು. ಎಸ್‌,ಡಿ,ಎಮ್‌,ಸಿ ಅಧ್ಯಕ್ಷ ಹಣಮಂತ ಗುಂಡಗಾವಿ, ಸದಸ್ಯ ಆರೂಢ ಬಾಗೇವಾಡಿ, ಮಯುರ ಗಿರಿಯಾಲ, ಕೆ ವಿ ಜಿ ಬ್ಯಾಂಕ ಪರಿಶೀಲನಾಧಿಕಾರಿ ಎನ್‌, ಎಸ್‌,ಪಾಟೀಲ, ಎಸ್‌.ಎಸ್‌. ರೊಟ್ಟಿ, ಎಮ್‌.ಸಿ.ಕಾಳದ, ಬಿ.ಆರ್‌.ನಾರಾಯಣಕರ, ಮಹೇಶ್ವರ ಹೊಂಗಲ, ಇ.ಎಸ್‌.ದಾಸಪ್ಪನವರ, ಪಿ.ಬಿ.ಲದ್ದಿಮಠ, ಎಸ,ಎನ್‌, ಕರಪುರ, ಬಸಮ್ಮ ಕರಡಿಗುದ್ಧಿ, ಬಸವರಾಜ ಲದ್ಧಿಮಠ, ಸುವರ್ಣಾ ಅಂಗಡಿ ನಿರೂಪಿಸಿದರು. ನಂದಾ ಬಟ್ಟ ಸ್ವಾಗತಿಸಿದರು. ಎಮ್‌,ಎಸ್‌,ವಡಗೇರಿ ವಂದಿಸಿದರು.

loading...