ಜನಪದ ಸಾಂಸ್ಕೃತಿಕ ವೈಭವ ಕಾರ್ಯಕ್ರಮ

0
120

ಸಿದ್ದಾಪುರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರ ಹಾಗೂ ಬಂಕೇಶ್ವರ ಗೆಳೆಯರ ಬಳಗ ಹೊಸೂರ, ಶ್ರೀ ಈಶ್ವರ ಕಲಾ ಸಂಘ (ರಿ) ಕಡಕೇರಿ ಇವರ ಸಹಯೋಗದಲ್ಲಿ ಭೂತೇಶ್ವರ ದೇವರ ಸಂಕ್ರಾಂತಿ ದೀಪೋತ್ಸವದ ನಿಮಿತ್ತ ಜನಪದ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಿತು.
ಈಶ್ವರ ಕಲಾ ಸಂಘ (ರಿ) ಕಡಕೇರಿ ಇವರು ನಡೆಸಿಕೊಟ್ಟ ಕಾರ್ಯಕ್ರಮನ್ನು ಪ.ಪಂ ಸ್ಥಾಯಿಸಮಿತಿ ಅಧ್ಯಕ್ಷ ಮಾರುತಿ ನಾಯ್ಕ ಉದ್ಘಾಟಿಸಿ ಮಾತನಾಡಿ ಇಂದಿನ ಕಂಪ್ಯೂಟರ್‌, ಮೋಬೈಲ್‌ ಯುಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಕಡಿಮೆಯಾಗುತ್ತಿವೆ. ವೀರಗಾಸೆ ನೃತ್ಯ, ಜಾನಪದ ನೃತ್ಯ, ಹಾಡುಗಳು ಗ್ರಾಮೀಣ ಜನರಲ್ಲಿ ಇವೆಯಾದರು ವಿರಳವಾಗುತ್ತಿವೆ. ನಮ್ಮ ಸಂಸ್ಕೃತಿ ಉಳಿಯಬೇಕಾದರೆ ಕಲೆಗಳಿಗೆ ಪ್ರೋತ್ಸಾಹ ಅಗತ್ಯ. ಯುವ ಜನಾಂಗ ಇತ್ತಕಡೆ ಮನಸ್ಸು ಮಾಡಬೇಕು ಅಂದಾಗ ನಮ್ಮ ಕಲೆ ಸಂಸ್ಕೃತಿ ಉಳಿಯುತ್ತದೆ. ಬಂಕೇಶ್ವರ ಗೆಳೆಯರ ಬಳಗ ಹೊಸೂರಿನ ಸದಸ್ಯರು ಕಲೆ ಸಂಸ್ಕೃತಿ ಉಳಿಸುವತ್ತ ಹೆಜ್ಜೆ ಇಟ್ಟಿರುವುದು ಶ್ಲಾಘನೀಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶನೇಶ್ವರ ಮಡಿವಾಳ ಮಾತನಾಡಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಅವಿಭಾಜ್ಯ ಅಂಗಗಳು, ಮನಸ್ಸಿಗೆ ನೆಮ್ಮದಿ, ಶಾಂತಿ ನೀಡುತ್ತವೆ. ಇಂದಿನ ಕಾಲಮಾನಕ್ಕೆ ಅವಶ್ಯಕ ಕೂಡ ಎಂದರು.
ವೇದಿಕೆಯಲ್ಲಿ ರಿಯಾಜ,ಸುರೇಶ ನಾಯ್ಕ, ಗೋವಿಂದ ಮಡಿವಾಳ,ಈಶ್ವರ ಕಲಾ ಸಂಘದ ಸುರೇಶ ಮಡಿವಾಳ ಉಪಸ್ಥಿತರಿದ್ದರು. ಕಾರ್ಯದರ್ಶಿ ಚೈತನ್ಯ ಹೊಸುರ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.
20 ಸದಸ್ಯರನ್ನೋಳಗೊಂಡ ಈಶ್ವರ ಕಲಾ ಸಂಘ (ರಿ) ಕಡಕೇರಿ ಸದಸ್ಯರು ವೀರಗಾಸೆ ನೃತ್ಯ, ಜಾನಪದ ನೃತ್ಯ, ಗೀಗೀ ಪದ, ಜಾನಪದ ಹಾಡುಗಳು, ನೃತ್ಯ ರೂಪಕಗಳು,ಕಿರು ನಾಟಕಗಳು, ಜನಜಾಗೃತಿ ಗೀತೆಗಳ ಮೂಲಕ ಜನರನ್ನು ರಂಜಿಸಿದರು.

loading...