ಸರಕಾರಿ ಕಾರ್ಯಕ್ರಮದಲ್ಲಿ ತೇಷಮಯ ವಾತಾವರಣ 

0
68
ಕನ್ನಡಮ್ಮ ಸುದ್ದಿ
ಬೆಳಗಾವಿ  : ಸರಕಾರಿ ಕಾರ್ಯಕ್ರಮಗಳ ಉದ್ಘಾಟನೆ ಸಂದರ್ಭದಲ್ಲಿ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು ಪಕ್ಷದ ಧ್ವಜವನ್ನು ಹಿಡಿದು ಘೋಷಣೆಗಳೊಂದಿಗೆ ಹಾರಾಟ ಚಿರಾಟ ನಡೆಸಿದ ಘಟನೆ ರವಿವಾರ ನಡೆಯಿತು.
ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದ ಹೊರವಲಯದಲ್ಲಿ ಸಿದ್ದನಬಾವಿ ಕೆರೆ ಹತ್ತಿರ ಕರೆಗೆ ನೀರು ತುಂಬುವ ಯೋಜನೆಗೆ ಪೂಜೆ ಸಲ್ಲಿಸಲು ಆಗಮಿಸಿದ ಸಚಿವರ ಮುಂದೆ ಎರಡು ಪಕ್ಷಗಳ ಕಾರ್ಯಕರ್ತರು ಘೋಷಣೆ ಕೋಗಿ ಪೂಜೆಗೆ ಅಡ್ಡಿಪಡಿಸಿದ ಘಟನೆ ನಡೆಯಿತು.
ಬಿಜೆಪಿ ಕಾರ್ಯಕರ್ತರು ಮೋದಿ,ಮೋದಿ ಎಂದರೆ ಕಾಂಗ್ರೆಸ್ ಕಾರ್ಯಕರ್ತರು ರಾಹುಲ, ರಾಹುಲ ಎಂದು ಘೋಷಣೆ ಕೂಗಲಾರಂಭಿಸಿದ್ದರಿಂದ ಕೆಲ ಸಮಯ ಸ್ಥಳದಲ್ಲಿ ಕೆಲ ಸಮಯ ತೇಷಮಯ ವಾತಾವರಣದಿಂದ ಆತಂಕದ ಪರಿಸ್ಥಿತಿ ನಿರ್ಮಾಣವಾಯಿತು. ಪೊಲೀಸರು ಮಧ್ಯೆ ಪ್ರವೇಶಿಸಿ ಕಾರ್ಯಕರ್ತರನ್ನು ಪೂಜಾ ಸ್ಥಳದಿಂದ ದೂರ ಸರಿಸಿದ ಪ್ರಸಂಗ ಎದುರಾಯಿತು.
ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತರ ಹಾರಾಟ ಚಿರಾಟದ ನಡುವೆ ಸಚಿವರು ಕೆರೆ ತುಂಬುವ ಯೋಜನೆಗೆ ಪೂಜೆ ಸಲ್ಲಿಸಿದರು.
loading...