ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಪಣತೊಡಬೇಕು: ಚೈತ್ರಾ

0
87

ಕನ್ನಡಮ್ಮ ಸುದ್ದಿ-ದಾಂಡೇಲಿ: ಜಗತ್ತಿನಲ್ಲೆ ಅತ್ಯಂತ ವೈವಿಧ್ಯಮಯ ಮತ್ತು ವಿಶಿಷ್ಟತೆಯನ್ನು ಹೊಂದಿರುವ ಹಿಂದೂ ಧರ್ಮ ಸರ್ವಶ್ರೇಷ್ಟವಾದ ಧರ್ಮವಾಗಿದ್ದು, ಈ ಧರ್ಮದಲ್ಲಿ ಹುಟ್ಟಿದ ಪ್ರತಿಯೊಬ್ಬರು ಭಾಗ್ಯವಂತರು. ಜಗತ್ತಿಗೆ ಸರ್ವಕಾಲಿಕ ಸಂದೇಶವನ್ನು ಪಸರಿಸಿದ ಸ್ವಾಮಿ ವಿವೇಕಾನಂದರ ಆಶಯದಂತೆ ಹಿಂದೂ ಧರ್ಮವನ್ನು ಸದೃಢಗೊಳಿಸಬೇಕಾಗಿದೆ. ಆ ನಿಟ್ಟಿನಲ್ಲಿ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಪ್ರತಿಯೊಬ್ಬರು ಪಣತೊಡಬೇಕೆಂದು ಯುವ ವಾಗ್ನಿ, ಚಿಂತಕಿ ಚೈತ್ರಾ ಕುಂದಾಪುರ ಅವರು ಕರೆ ನೀಡಿದರು.
ಅವರು ಭಾನುವಾರ ವಿಶ್ವ ಹಿಂದೂ ಪರಿಷತ್‌, ಬಜರಂಗ ದಳ ದಾಂಡೇಲಿ ಘಟಕ ಹಾಗೂ ಸ್ವಾಮಿ ವಿವೇಕಾನಂದ ಉತ್ಸವ ಸಮಿತಿಯ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದ ಜಯಂತಿಯ ಪ್ರಯುಕ್ತ ಕಾಗದ ಕಾರ್ಖಾನೆಯ ಡಿಲಕ್ಸ್‌ ಮೈದಾನದಲ್ಲಿ ನಡೆದ ಹಿಂದೂ ಸಮಾಜೋತ್ಸವವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಕಾಲ ಬದಲಾಗಿದೆ, ನಮ್ಮ ಉಡುಗೆ ತೊಡುಗೆ ಬದಲಾಗಿದೆ. ಆದರೆ ಹಿಂದೂ ಧರ್ಮ ಬದಲಾಗಲಿಲ್ಲ. ತನ್ನ ಮೂಲ ನೆಲಗಟ್ಟಿನ ಆಶಯದಂತೆ ಹಿಂದೂ ಧರ್ಮ ತನ್ನದೇ ಆದ ಸಂಸ್ಕಾರ, ಸಂಸ್ಕೃತಿಯಿಂದ ಗಮನ ಸೆಳೆದಿದೆ. ಈ ರಾಷ್ಟ್ರ ಹಿಂದೂ ರಾಷ್ಟ್ರವಾಗಿದ್ದರೂ, ಹಿಂದೂ ಧರ್ಮ ಅನೇಕತೆಯಲ್ಲಿ ಏಕತೆಯನ್ನು ಸಾರುತ್ತಾ ಬಂದಿರುವುದೆ ವಿಶೇಷ. ಹಿಂದೂ ಧರ್ಮಿಯರನ್ನು ವಿವಿಧ ಆಶೆ, ಆಮೀಷಗಳನ್ನು ತೋರಿಸಿ ಮತಾಂತರ ಮಾಡಲಾಗುತ್ತಿರುವುದು ಖಂಡನೀಯ.  ವೇದಿಕೆಯಲ್ಲಿ ವಿಶ್ವ ಹಿಂದೂ ಪರಿಷತ್‌ ದಾಂಡೇಲಿ ಘÀಟಕದ ಸಂಚಾಲಕ ಶಂಕರ ಗಣಾಚಾರಿ, ಸ್ವಾಮಿ ವಿವೇಕಾನಂದ ಉತ್ಸವ ಸಮಿತಿಯ ಜಿಲ್ಲಾ ಸಂಚಾಲಕ ಪ್ರಶಾಂತ ಬಸೂರ್ತೆಕರ, ಬಜರಂಗ ದಳದ ಹಳಿಯಾಳ/ಜೊಯಿಡಾ ತಾಲೂಕು ಘಟಕದ ಸಂಚಾಲಕ ಚಂದ್ರು ಮಾಳಿ, ಬಜರಂಗ ದಳದ ನಗರ ಘಟಕದ ಸಂಚಾಲಕ ಗೋಪಾಲ ಜಾಧವ, ಪ್ರಮುಖರುಗಳಾದ ನಾಗರಾಜ ಅನಂತಪುರ, ರವಿ ಚೌವ್ವಾಣ್‌, ಲಿಂಗಯ್ಯ ಪೂಜಾರ, ವಿನಯ್‌ ದಳವಾಯಿ, ಪ್ರಕಾಶ ಗುರವ, ರಾಜೇಶ ಗಿರಿ, ಮಂಜು ಶಿಂಧೆ, ಚಂದ್ರು ಇಂಗಳೆ, ಭಾಗು ಕಾತ್ರೋಟ್‌, ಭಜರಂಗಿ ಚೌಧರಿ, ಲಾಲ್‌ ಸಿಂಗ್‌, ಸಂಜಯ್‌ ಶಿವಾಜಿ ನಾಯ್ಕ, ಜ್ಞಾನೇಶ್ವರ ಸಾವಂತ, ಮಂಜುನಾಥ ಬಂಡಿವಡ್ಡರ, ವೇಣು ನಾಯರ್‌, ಕೃಷ್ಣ ಪಾಟೀಲ, ಸಂಜು ಮಾದರ, ರಾಜು ಬೆಂಚೆಕರ, ಶಂಕರಯ್ಯ ಹಿರೇಮಠ ಶಿಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಚೈತ್ರಾ ಕುಂದಾಪುರ ಮತ್ತು ರಾಜಶೇಖರ ಅವರುಗಳನ್ನು ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ನಗರದ ಹಳೆ ನಗರ ಸಭೆಯಿಂದ ಪ್ರಾರಂಭಗೊಂಡ ಬೈಕ್‌ ರ್ಯಾಲಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಕೊನೆಯಲ್ಲಿ ಸಭಾ ಕಾರ್ಯಕ್ರಮ ಹಮ್ಮಿಕೊಂಡಿದ್ದ ಡಿಲಕ್ಸ್‌ ಮೈದಾನದಲ್ಲಿ ಸಂಪನ್ನಗೊಂಡಿತು. ತುಕರಾಮ ಬಡಿಗೇರ ಪ್ರಾರ್ಥನೆ ಹಾಡಿದರು. ಚಂದ್ರು ಮಾಳಿ ಸ್ವಾಗತಿಸಿದ ಕಾರ್ಯಕ್ರಮಕ್ಕೆ ಗೋಪಾಲ ಜಾಧವ ವಂದಿಸಿದರು. ಸಂದೇಶ್‌,ಎಸ್‌.ಜೈನ್‌ ಕಾರ್ಯಕ್ರಮ ನಿರೂಪಿಸಿದರು.

loading...