ಜನಜಾಗೃತಿ, ಕಾನೂನು ಅರಿವು ಕಾರ್ಯಕ್ರಮ

0
71

ಕನ್ನಡಮ್ಮ ಸುದ್ದಿ-ಸಿದ್ದಾಪುರ: ಪೋಲಿಸರು, ವಕೀಲರು, ಅಧಿಕಾರಿಗಳು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ. ಜನ ಸಾಮಾನ್ಯರಿಗೆ ಮಾಧರಿಯಾಗಿ ಕಾನೂನು ಪಾಲನೆ ಮಾಡೋಣ ಎಂದು ಸಿವಲ್ ನ್ಯಾಯಧೀಶರು, ತಾಲೂಕಾ ಕಾನೂನು ಸೇವಾ ಸಮೀತಿ ಸದಸ್ಯ ಕಾರ್ಯದರ್ಶಿ ಹನುಮಂತ ಜಿ.ಎಚ್. ಕರೆ ನೀಡಿದರು.
ಅವರು ತಾಲೂಕಾ ಕಾನೂನು ಸೇವಾ ಸಮೀತಿ,ವಕೀಲರ ಸಂಘ, ಅಭಿಯೋಜನಾ ಇಲಾಖೆ,ಕಂದಾಯ ಇಲಾಖೆ, ತಾಲೂಕ ಪಂಚಾಯತ, ಮತ್ತು ಪೋಲಿಸ್ ಇಲಾಖೆ ಸಹಯೋಗದಲ್ಲಿ ನಡೆದ ಉತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸುವ ಬಗ್ಗೆ ಜನಜಾಗೃತಿ ಮತ್ತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಮಾಜ ನಿಮ್ಮಿಂದ ಬಹಳಷ್ಟು ನಿರೀಕ್ಷಿಸುತ್ತಿದೆ. ಕಾನೂನನ್ನು ನೀವು ಪಾಲಿಸಿದರೆ, ಕಾನೂನು ನಿಮ್ಮನ್ನು ರಕ್ಷಿಸುತ್ತದೆ. ಕೂದಲು ಹಾಳಾಗುತ್ತದೆ ಎನ್ನುವ ಸಣ್ಣಪುಟ್ಟ ಕಾರಣ ಬೇಡ, ಜೀವ ಉಳಿಸುವುದಕ್ಕಾಗಿ ಹೆಲ್ಮೆಟ್ ಹಾಕಿ, ಗಲಾಟೆ,ಗಲಭೆಗಳು ಕಡಿಮೆ ಇರುವನಮ್ಮ ತಾಲೂಕಿನಲ್ಲಿ ಹೆಲ್ಮಟ್ ಹಾಕದೆ ಆಗಿರುವ ಅಪಘಾತದ ಪ್ರಕರಣಗಳೇ ಜಾಸ್ತಿ, ಅಪಘಾತಗಳಲ್ಲಿ ಶೇ:97 ರಷ್ಟು ಸಾವು ಹೆಲ್ಮೆಟ್ ಧರಿಸದೆ ಇದ್ದುದರಿಂದ ಸಂಭವಿಸುತ್ತದೆ. ಮನೆಯವರು ನಮ್ಮನ್ನೆ ನಂಬಿರುತ್ತಾರೆ, ಹಾಗಾದರೆ ಹೆಲ್ಮೆಟ್ ಯಾಕೆ ಹಾಕಬೇಕು? ಎಂದು ನಾವೇ ಪ್ರಶ್ನೆ ಮಾಡಿಕೊಳ್ಳಬೇಕು.ಆದ್ದರಿಂದ ಉತ್ತಮ ಗುಣಮಟ್ಟದ ಆಯ್.ಎಸ್,ಆಯ್. ಮಾರ್ಕ ಹೊಂದಿರುವ ಹೆಲ್ಮೆಟ್ ಧರಿಸಿರಿ ಎಂದರು.
ಸಹಾಯಕ ಸರ್ಕಾರಿ ಅಭಿಯೋಜಕ ಚಂದ್ರಶೇಖರ ಎಚ್.ಎಸ್. ಮಾತನಾಡಿ ಆಯ್.ಎಸ್,ಆಯ್. ಮಾರ್ಕ ಹೊಂದಿರದ ಹೆಲ್ಮೆಟ್ ಧರಿಸಿ ಅಪಘಾತ ಸಂಭವಿಸಿದರೆ ಎಲ್.ಆಯ್,ಸಿ ಯವರಿಂದಲೂ ಇನಸ್ಯೂರೇನ್ಸ್ ಕ್ಲೇಮ್ ಆಗಲ್ಲಾ, ಬ್ರಾಂಡೆಡ್ ಬಟ್ಟೆ,ಚಪ್ಪಲಿ ಧರಿಸುತೇವೆ, ಆದರೆ ಪ್ರಾಣಕ್ಕೆ ಯಾಕೆ ನಿರ್ಲಕ್ಷ? ಉತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸುವ ಮೂಲಕ ಕಾನೂನು ಪಾಲನೆ ಜೊತೆಗೆ ಜೀವವನ್ನು ರಕ್ಷಿಸಿಕೊಳ್ಳಿ ಎಂದರು.
ವಕೀಲರ ಸಂಘದ ಅಧ್ಯಕ್ಷ ಡಾ;ರವಿ ಹೆಗಡೆ ಹೂವಿನಮನೆ ಅಧ್ಯಕ್ಷತೆ ವಹಿಸಿದ್ದರು.ಆರ್,ಟ,ಓ.ವಿಜಯಕುಮಾರ ಉಪನ್ಯಾಸ ನೀಡಿದರು.
ಪೋಲಿಸ್ ನಿರೀಕ್ಷಕ ಜಯಂತ ಎಂ ಉಪಸ್ಥಿತರಿದ್ದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಶ್ರೀಧರ ಭಟ್ಟ ಸ್ವಾಗತಿಸಿದರು, ಗಂಗಾಧರ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು.

loading...