ದಾಂಡೇಲಿ ತಾಲೂಕಿಗೆ ಮೌಳಂಗಿ-ಕೊಂಡಪ ಗ್ರಾಮ ಸೇರಿಸಬೇಕೆಂದು ಮನವಿ

0
68

ಕನ್ನಡಮ್ಮ ಸುದ್ದಿ-ದಾಂಡೇಲಿ: ನೂತನವಾಗಿ ಅಸ್ತಿತ್ವಕ್ಕೆ ಬರಲಿರುವ ದಾಂಡೇಲಿ ತಾಲೂಕಿನಲ್ಲಿ ದಾಂಡೇಲಿ ಸಮೀಪದ ಹಳೆ ಕೊಂಡಪಾ, ಹೊಸ ಕೊಂಡಪಾ ಹಾಗೂ ಮೌಳಂಗಿ ಗ್ರಾಮದ ಗ್ರಾಮಸ್ಥರು ತಮ್ಮ ಗ್ರಾಮಗಳನ್ನು ಸೇರ್ಪಡೆಗೊಳಿಸಬೇಕೆಂದು ಆಗ್ರಹಿಸಿ ಮುಖ್ಯ ಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ನಗರದ ವಿಶೇಷ ತಹಶೀಲ್ದಾರ ಕಚೇರಿಯ ಸಿಬ್ಬಂದಿ ಗೌಡಪ್ಪ ಹಿರಪ್ಪ ಬನಾಕದಿನ್ನಿ ಮುಖಾಂತರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೊಂಡಪಾದ ಜೋತಿಬಾ ಬಾಲಪ್ಪ ಚವ್ಹಾನ, ದಾಂಡೇಲಿ ಈ ಗ್ರಾಮದ ಜನರಿಗೆ ಅತಿ ಹತ್ತಿರವಾಗಿದ್ದು, ಎಲ್ಲ ಆರ್ಥಿಕ, ಶೈಕ್ಷಣಿಕ ಹಾಗೂ ಆಸ್ಪತ್ರೆಯ ಕೆಲಸಗಳಿಗಾಗಿ ದಾಂಡೇಲಿಯನ್ನು ಅವಲಂಬಿಸಿರುವ ನಾವು ನಮ್ಮ ಗ್ರಾಮಗಳು ದಾಂಡೇಲಿ ತಾಲೂಕಿನಲ್ಲಿ ಸೇರ್ಪಡೆಯಾಗಬೇಕೆಂಬುವದು ಸಮಸ್ತ ಗ್ರಾಮಸ್ಥರ ಇಚ್ಛೆಯಾಗಿದೆ ಮಾಜಿ ನಗರಸಭಾ ಸದಸ್ಯ ಹಾಗೂ ಕೊಂಡಪದ ರೈತ ರಾಜಾಸಾಬ ಮೌಲಾಲಿ ಮಾತನಾಡಿ ಈ ಕುರಿತು ಇಗಾಗಲೇ ಅವೆಡಾ ಗ್ರಾಮ ಪಂಚಾಯಿತಿಯ 7 ಗ್ರಾಮಗಳ ಗ್ರಾಮಸ್ಥರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ(22.02.2017 ರಂದು) ಮನವಿ ಸಲ್ಲಿಸಿದ್ದಾರೆ ಸಮಸ್ತ ಗ್ರಾಮಸ್ಥರ ಬೇಡಿಕೆಗೆ ಸರ್ಕಾರ ಸ್ಪಂದಿಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮೌಳಂಗಿಯ ವಿಲಾಸ್ ಶಿವಪ್ಪ ಕಾಂಬಳೆ, ಗುರುರಾಜ ಅಪ್ಪಾಸಾಬ ತೊರಾವತ್, ಯಲ್ಲಪ್ಪ ಫಕೀರಪ್ಪ ಬನ್ನಿಗೊಳ, ಕೊಂಡಪಾದ ದತ್ತು ಮಾಲಗೆ, ಉಜ್ವಲಾ ಕೇದಾರಿ, ಬಸವರಾಜ ಕೇದಾರ, ಸುನಿಲ ಸಾತೊಬಾ ಕಾಂಬಳೆ, ವಿಮಲಾ ಬಾಲು ಕಾಂಬಳೆ, ಸುರೇಖಾ ಕೇದಾರ, ಮಹಾದೇವ ದುಂಡಪ್ಪ, ಗಣಪತಿ ದುಂಡು ಕಾಲಕುಂದರಿ ಇತರರು ಉಪಸ್ಥಿತರಿದ್ದರು.

loading...