`ಪ್ರತಿಯೊಬ್ಬರು ಸತ್ಯ ಧರ್ಮದ ಮಾರ್ಗದಲ್ಲಿ ನಡೆಯಬೇಕು’

0
73

ಕನ್ನಡಮ್ಮ ಸುದ್ದಿ-ಬ

 

ಸವನಬಾಗೇವಾಡಿ: ಸ್ಥಳೀಯ ಅಗರವಾಲ ಪರಿವಾರ ಹಮ್ಮಿಕೊಂಡಿರುವ ಭಾಗವತ ಕಥಾ ಕಾರ್ಯಕ್ರಮಕ್ಕೆ ಬುಧುವಾರ ಸಂಭ್ರಮದ ಚಾಲನೆ ದೊರೆಯಿತು, ಕಳಸ ಹೊತ್ತ ಅಗರವಾಲ ಪರಿವಾರದ ಸುಮಂಗಲೇಯರು, ಸಾರೋಟದಲ್ಲಿ ಮಥುರಾದ ಭಗವತ ಭೂಷಣ ಕುಂಜಬಿಹಾರಿ ಶಾಸ್ತ್ರೀಜಿ ಅವರನ್ನು ಪಟ್ಟಣದ ಹನುಮಾನ ಮಂದಿರದಿಂದ ಅಗಸಿ ಮಾರ್ಗವಾಗಿ ದ್ಯಾಮವ್ವನ ದೇವಸ್ಥಾನ, ಮಹಾರಾಜರ ಮಠ, ಬಸವಜನ್ಮ ಸ್ಮಾರಕ, ವಿಠ್ಠಲ ಮಂದಿರ ಮಾರ್ಗವಾಗಿ ವಿಜಯಪುರ ರಸ್ತೆ ಮಾರ್ಗವಾಗಿ ಅಗರವಾಲ ಮನೆ ಸಮೀಪದ ಕಾರ್ಯಕ್ರಮ ವೇದಿಕೆಗೆ ಕರತರಲಾಯಿತ್ತು.
ಈ ಸಂದರ್ಭದಲ್ಲಿ ಭಾಗವತ ಕಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಭಗವತ ಭೂಷಣ ಕುಂಜಬಿಹಾರಿ ಶಾಸ್ತ್ರೀಜಿ, ಮನುಷ್ಯ ಸತ್ಯ ಮಾರ್ಗದಲ್ಲಿ ನಡೆದಾಗ ಮಾತ್ರ ಸುಂದರ ಪ್ರಕಾಶ ಮಾರ್ಗ ತನ್ನಿಂದ ತಾನೇ ತರೆಯುವುದು ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಸತ್ಯ ಧರ್ಮ ಮಾರ್ಗದಲ್ಲಿ ನಡೆಯಬೇಕು ಎಂದು ಹೇಳಿದರು.

ಭಾಗವತ ಎಂಬುದು ಬೇರೆ ಪುಸ್ತಕವಲ್ಲ ಕೃಷ್ಣದೇವರಾಯನ ಒಂದು ಅಂಗ ಇದನ್ನು ಕೇಳುವರು ಓದುವವರು ಸೌಭಾಗ್ಯವಂತರ ಭಾಗವತ ಕಥಾ ಕಾರ್ಯಕ್ರಮ ಮಾಡಲು ಭಗವಂತನ ಕೃಪೆಬೇಕು ಎಂದು ಹೇಳಿದರು. ಕಳಸದ ಮೆರವಣೆಗೆಯಲ್ಲಿ ಈರಣ್ಣ ಪಟ್ಟಣಶೆಟ್ಟಿ, ಲೋಕನಾಥ ಅಗರವಾಲ, ರಮೇಶ ಯಳಮೇಲಿ, ಗೋಪಾಲ ಅಗರವಾಲ, ಧರ್ಮೇಂದ್ರ ಅಗರವಾಲ, ಸತ್ಯನಾರಾಯಣ ಅಗರವಾಲ, ಬ್ರೇಜ್‍ಮೋಹನ ಅಗರವಾಲ, ಅಶೋಕ ಅಗರವಾಲ, ಹರೀಶ ಅಗರವಾಲ, ಎಸ್.ಎಂ.ಸಿಂದಗಿ, ಅಶೋಕ ಕಲ್ಲೂರ, ವಿಶ್ವನಾಥ ಕಲ್ಲೂರ, ಜಗದೀಶ ಕೊಟ್ರಶೆಟ್ಟಿ, ಬಸವರಾಜ ತುಂಬಗಿ, ಭರತ ಅಗರವಾಲ, ಮೋದಿ, ನಿಸಾರ ಚೌಧರಿ ಸೇರಿದಂತೆ ಇತರರು ಇದ್ದರು.

loading...