ಗುಡಿಸಲು ಮುಕ್ತ ರಾಜ್ಯವನ್ನಾಗಿ ಮಾಡಲು ಸರ್ಕಾರ ಬದ್ಧ: ಸಚಿವ ಕಾಗೋಡು

0
62
????????????????????????????????????

ಜಮಖಂಡಿ: ಗ್ರಾಮೀಣ ಭಾಗದಲ್ಲಿ ಆಗಲಿ ನಗರ ಪ್ರದೇಶದಲ್ಲಿ ಆಗಲ್ಲಿ ಎಲ್ಲ ಗುಡಿಸಲು ನಿವಾಸಿಗಳು, ಅಲೆಮಾರಿ ಜನಾಂಗದ ವಸ್ತಿ ಇರಲಿ ಅವರೆಲ್ಲರಿಗೂ ಹಾಗೂ ಸ್ವಂತ ಸೂರು ಇಲ್ಲದೆ ಬಯಲು ಪ್ರದೇಶದಲ್ಲಿ ವಾಸಿಸುವವರನ್ನು ಗುರುತಿಸಿ ಸೂರು ಕಲ್ಪಿಸಬೇಕು ಎಂದು ಸಚಿವ ಕಾಗೋಡು ತಿಮ್ಮಪ್ಪ ಇಂದಿಲ್ಲಿ ಹೇಳಿದರು.
ಅವರು ನಗರದ ಕುಡಚಿ ರಸ್ತೆಯ ಪಕ್ಕದಲ್ಲಿ (ಕಡಪಟ್ಟಿ ಕ್ರಾಸ್) ಸಂಸದ್ ಭವನದ ಮಾದರಿಯಲ್ಲಿ 15 ಕೋಟಿರೂ ವೆಚ್ಚದಲ್ಲಿ ನಿರ್ಮಿಸಿದ ಬೃಹತ್ ಮಿನಿ ವಿಧಾನಸೌದ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾಧಿಕಾರಿ ಹಾಗೂ ಜಿಪಂ ಆಡಳಿತಾಧಿಕಾರಿಗಳನ್ನು ಉದ್ಧೇಶಿಸಿ ಆಯಾ ಗ್ರಾಮಗಳಲ್ಲಿ ಸರ್ಕಾರಿ ಜಮೀನು ಇದ್ದರೆ ಅಲ್ಲಿ ಅಥವಾ ಸರ್ಕಾರಿ ಜಮೀನು ಇಲ್ಲದಿದ್ದಲ್ಲಿ ಖಾಸಗಿ ಅವರಿಂದ ಖರಿದಿಸಿ ಅವರಿಗೆ ಮನೆ ನಿರ್ಮಿಸಿಕೊಡಬೇಕು ಎಂದು ಆಜ್ಞೆ ಮಾಡಿದರು. ಕರ್ನಾಟಕವನ್ನು ಗುಡಿಸಲು ಮುಕ್ತ ರಾಜ್ಯ ಮಾಡಲು ಸರ್ಕಾರ ಆದೇಶಿಸಿದೆ ಎಂಬುದನ್ನು ಅಧಿಕಾರಿಗಳು ಮರೆಯಬಾರದು ಎಂದು ಸಚಿವರು ಅಧಿಕಾರದ ವಾಣಿಯಲ್ಲಿ ಹೇಳಿದರು. ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತಾರಕ ಮಂತ್ರವಾಗಿರುವ ಸ್ವಚ್ಚ ಹಾಗೂ ಪಾರದರ್ಶಕ ಆಡಳಿತ ನೀಡಬೇಕು ಎಂಬುದು ನೆನಪಿಸಿದ ಅವರು ನಮ್ಮ ಮನೆಯಲ್ಲಿ ಸ್ವಚ್ಛ ಹಾಗೂ ಪಾರದರ್ಶಕ ಇದ್ದರೆ ಸಾಲದು ಸರ್ಕಾರಿ ಯಂತ್ರದಲ್ಲಿ ಬರಬೇಕು ಯಾರೊಬ್ಬರು ಲಂಚದ ಹಣಕ್ಕಾಗಿ ಕೈಒಡ್ಡಬಾರದು ಈ ನೀತಿ ಜಾರಿಗೆ ಬರಬೇಕು ಅಂದಾಗ ಈ ಮಿನಿವಿಧಾನಸೌಧಕ್ಕೆ ಶೋಭೆ ಬರುತ್ತದೆ ಎಂದು ಅವರು ಹೇಳಿದರು. ಮನುಷ್ಯ ಜನ್ಮ ಬಹಳ ದೊಡ್ಡದ್ದು ಮನುಷ್ಯ ಎಂದು ಕರೆಸಿಕೊಳ್ಳುವವರು ಸಮಾಜದ ಖಾಳಜಿ ಇಲ್ಲದೆ ಹೊದರೆ ಯಾತಕೆ ಈ ಮನುಷ್ಯ ಜನ್ಮ ಎಂದು ಅವರು ಕುಟುಕಿದರು.

ಅ.ಕ ರವೀಂದ್ರ ಕರಲಿಂಗನ್ನವರ ವಂದಿಸಿದರು. ವೇದಿಕೆಯ ಮೇಲೆ ಜಿಲ್ಲಾಧಿಕಾರಿ ಶಾಂತಾರಾಮ ಕೆ ಜಿ, ಜಿಪಂ ಆಡಳಿತಾಧಿಕಾರಿ ವಿಕಾಸ ಸುರಳೇಕರ, ತಹಶೀಲ್ದಾರ ಪ್ರಶಾಂರ ಚನಗೊಂಡ, ಸಹಕಾರಿ ಧುರೀಣ ಉದ್ಯಮಿ ಜಗದೀಶ ಗುಡಗುಂಟಿ, ಅರುಣಕುಮಾರ ಶಹಾ, ಫಕೀರಸಾಬ ಬಾಗವಾನ, ಜಮಖಂಡಿ ಬ್ಲಾಕ್ ಕಾಂಗ್ರೇಸ ಅಧ್ಯಕ್ಷ ವರ್ಧಮಾನ ನ್ಯಾಮಗೌಡ, ಸಾವಳಗಿ ಬ್ಲಾಕ್ ಕಾಂಗ್ರೇಸ ಅಧ್ಯಕ್ಷ ಕಲ್ಲಪ್ಪ ಗಿರಡ್ಡಿ, ಜಿಪಂ ಮಾಜಿ ಸದಸ್ಯ ಅರ್ಜುನ ದಳವಾಯಿ, ತಾಪಂ ಅಧ್ಯಕ್ಷೆ ಶ್ರೀಮತಿ ಸುನಂದಾ ಮುಗಳಖೋಡ, ಪ್ರಕಾಶ ಕಣಬೂರ, ಮಹೇಶ ಕೋಳಿ, ಆನಂದ ನ್ಯಾಮಗೌಡ, ರೇಷ್ಮಾ ಖಾದ್ರಿ ಮುಂತಾದವರು ಉಪಸ್ಥಿತರಿದ್ದರು.

loading...