ಸಾಮೂಹಿಕ ವಿವಾಹ ಬಡವರ ಸಂಜೀವಿನಿ

0
44

ಕನ್ನಡಮ್ಮ ಸುದ್ದಿ-ನರೇಗಲ್ಲ : ಸಮೀಪದ ಕೋಡಿಕೊಪ್ಪದ ಹಠಯೋಗಿ ಶ್ರೀ ವೀರಪ್ಪಜ್ಜನವರ ಜಾತ್ರೋತ್ಸವದ ಅಂಗವಾಗಿ ಶುಕ್ರವಾರ ಐದು ಜೋಡಿ ಸಾಮೂಹಿಕ ವಿವಾಹ ಜರುಗಿದವು.
ಸಾನ್ನಿಧ್ಯ ವಹಿಸಿ ಮಾತನಾಡಿದ ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಆಡಂಬರದ ಬದುಕು ವ್ಯಕ್ತಿಗತವಾಗಿ ಹಿತವೆನಿಸಬಹುದು ಮತ್ತು ನೆಮ್ಮದಿ ನೀಡಬಹುದು, ಆದರೆ ಸಮಾನತೆ ಮತ್ತು ಸರಳತೆಯ ಬದುಕು ಇಡೀ ವ್ಯವಸ್ಥೆಯಲ್ಲಿ ನೆಮ್ಮದಿ ಮೂಡಿಸುತ್ತದೆ. ಆಡಂಬರ, ಡೊಂಬಚಾರಕ್ಕೆ ಕಡಿವಾಣ ಹಾಕಿ, ಸಮಾಜದಲ್ಲಿ ಸಾಮರಸ್ಯದ ವಾತಾವರಣಕ್ಕೆ ಪೂರಕವಾಗಿ ನಡೆದುಕೊಳ್ಳಬೇಕಿದೆ. ಜಾತಿ ಮತ ಧರ್ಮ ಮೀರಿದ ಕಾರ್ಯಕ್ರಮಗಳು ಇಂದಿನ ಅಗತ್ಯವಾಗಿದೆ. ಇಂದು ಸಮಾಜದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ದೇಶದ ಅಭಿವೃದ್ಧಿಗೆ ಮಾರಕ ಮಾತ್ರವಲ್ಲ ಪರಸ್ಪರ ನಂಬಿಕೆ, ವಿಶ್ವಾಸ, ಪ್ರೀತಿಯನ್ನು ಕಿತ್ತುಕೊಳ್ಳುತ್ತಿವೆ ಎಂದು ಹೇಳಿದರು.
ಸಾಮೂಹಿಕ ವಿವಾಹದಂತಹ ಕಾರ್ಯಕ್ರಮ ಹೆಚ್ಚು ಮೌಲ್ಯ ಹೊಂದಿದೆ. ಗ್ರಾಮೀಣ ಪ್ರದೇಶದಲ್ಲಿ ಇಂತಹ ಕಾರ್ಯಕ್ರಮ ಮಾಡಿ ಯಶಸ್ಸುಗೊಳಿಸುವುದು ಕಷ್ಟ ಸಾಧ್ಯ. ಗ್ರಾಮೀಣ ಭಾಗಗಳಲ್ಲಿ ಇಂದು ಕೂಡ ಅತಿಯಾದ ಸಂಪ್ರದಾಯ, ರೀತಿ ರಿವಾಜು ಇದೆ. ಅದನ್ನು ಮೀರಿ ಸಾಮೂಹಿಕ ವಿವಾಹವನ್ನು ಯಶಸ್ವಿಗೊಳಿಸಿದ ಶ್ರೀ ಹಠಯೋಗಿ ಶ್ರೀ ವೀರಪ್ಪಜ್ಜನವರ ಕಮೀಟಿಯವರ ಕಾರ್ಯವನ್ನು ಶ್ಲಾಘನೀಯ ಎಂದರು.
ಶ್ರೀ ವೀರಪ್ಪಜ್ಜನವರ ಟ್ರಸ್ಟ ಕಮೀಟಿ ಚೇರಮನ್‌ ಡಾ. ಮಲ್ಲಯ್ಯ ಚಪ್ಪನ್ಮಠ ಮಾತನಾಡಿದರು.
ಸದಸದ್ಯರಾದ ಸಿದ್ದಪ್ಪ ರಾಗಿ, ಸೋಮನಾಥ ಸಂಗನಾಳಮಠ, ಅಣ್ಣಪ್ಪ ಜೋಳದ, ಸೀಪಣ್ಣ ಜೋಶಿ, ಮಲ್ಲನಗೌಡ ಮಾಸ್ತರ, ಬಸನಗೌಡ ಬಿಷ್ಟನಗೌಡ್ರ, ಶೇಖಪ್ಪ ಜುಟ್ಲ, ಅಮೃತ ಅಣ್ಣಿಗೇರಿಮಠ, ಸೋಮಣ್ಣ ಸಂಗನಾಳ ಸೇರಿದಂತೆ ಮಜರೇ ಗ್ರಾಮಗಳ ನೂರಾರು ಭಕ್ತರು ಉಪಸ್ಥಿತರಿದ್ದರು.

loading...