ಪೋಲಿಯೋ ನಿರ್ಮೂಲನೆಗೆ ಪಣ: ಸಚಿವ ತಿಮ್ಮಾಪೂರ

0
82

ಕನ್ನಡಮ್ಮ ಸುದ್ದಿ-ಬಾಗಲಕೋಟ:ಮಹಾಮಾರಿಯಾಗಿದ್ದ ಪೋಲಿಯೋ ನಿರ್ಮೂಲನೆಗೆ ಪ್ರತಿಯೊಬ್ಬರೂ ಪಣ ತೊಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ ತಿಮ್ಮಾಪೂರ ಹೇಳಿದರು.
ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯೋಜಿಸಿದ್ದ ರಾಷ್ಟ್ರೀಯ ಪಲ್ಸ್‌ ಪೋಲಿಯೋ ಕಾರ್ಯಕ್ರಮವನ್ನು ಉದ್ಘಾಟಿಸಿ ಮಕ್ಕಳಿಗೆ ಪೋಲಿಯೋ ಹನಿ ಹಾಕಿ ಮಾತನಾಡುತ್ತಾ
ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಪೋಲಿಯೋ ನಿರ್ಮಲನೆಯಾಗಿದ್ದು ಕೆಲ ರಾಜ್ಯಗಳಲ್ಲಿ ಬೆರಳೆನಿಕೆಯಷ್ಟು ಪ್ರಕರಣಗಳು ಕಂಡು ಬಂದಿದ್ದರಿಂದ ಮುನ್ನೆಚರಿಕೆ ಕ್ರಮವಾಗಿ ರಾಜ್ಯದಲ್ಲಿ ಪೋಲಿಯೋ ಸಂಪೂರ್ಣ ನಿರ್ಮೂಲನೆ ಮಾಡುವ ಗುರಿ ಹೊಂದಲಾಗಿದೆ ಎಂದರು.
ಪೋಲಿಯೋ ಶಾಪವಲ್ಲ ಬದಲಾಗಿ ತಾಯಿಯ ಗರ್ಭದಿಂದ ಜಗಕ್ಕೆ ಬಂದ ಮಗುವಿಗೆ ತಗುಲಿ ಯಾವ ತಪ್ಪು ಮಾಡದ ಶಿಸುಗಳು ಜೀವನ ಪರ್ಯಂತ ನರಕ ಜೀವನ ಸಾಗಿಸುವದು ಆ ಶಿಕ್ಷೆಯನ್ನು ಪಾಲಕರು ಅನುಭವಿಸುತ್ತಿದ್ದು ಇದನ್ನು ಮನಗಂಡ ಸರ್ಕಾರ ಪೋಲಿಯೋ ನಿರ್ಮೂಲನೆಗಾಗಿ ಮನೆ-ಮನೆಗಳಿಗೆ ತೆರಳಿ ಮಕ್ಕಳಿಗೆ ಲಸಿಕಾ ಹಾಕುವ ಮೂಲಕ ಮೂಲಕ ಪೋಲಿಯೋ ನಿರ್ಮೂಲನೆ ಕಾರ್ಯ ಮಾಡುತ್ತಿದೆ. ಮೊದಲು ಚುಚ್ಚುಮದ್ದು ರೂಪದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅದರಿಂದ ಮಕ್ಕಳ ಯಾತನೆ ಕಂಡು ಅದರಿಂದ ಹೊರಬಂದು ಈಗ ಕೇವಲ 2ಹನಿ ಔಷದಿ ನೀಡಲಾಗುವದು ಎಂದರು. ಪ್ರತಿವರ್ಷ ಈ ಕಾರ್ಯಕ್ರಮ ಹಾಕಿಕೊಳ್ಳಲಾಗಿದ್ದು 28/01/2018 ರಿಂದ 31/01/2018ರ ವೆರೆಗೆ ಜಿಲ್ಲೆಯಾದ್ಯಂತ 5 ವರ್ಷದೊಳಗಿನ ಮಕ್ಕಳಿಗೆ 2 ಪೋಲಿಯೋ ಹನಿ ಹಾಕಲಾಗುತ್ತಿದ್ದು ಜಿಲ್ಲೆಯಲ್ಲಿ 229618 ಮಕ್ಕಳಿಗೆ ಲಸಿಕೆ ಹಾಕಲಾಗುತ್ತಿದ್ದು ಇದಕ್ಕಾಗಿ 1338 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ. ಮೊದಲು 2 ದಿನ ಕೇಂದ್ರಗಳಲ್ಲಿ ಲಸಿಕೆ ಹಾಕಲಾಗುತ್ತಿದ್ದು ಮುಂದಿನ 2 ದಿನ ಮನೆ-ಮನೆಗಳಿಗೆ ತೆರಳಿ ಉಳಿದಿರುವ ಮಕ್ಕಳಿಗೆ ಲಸಿಕೆ ಹಾಕಲಾಗುವುದು ಎಂದರು.
ಜಿಲ್ಲೆಯಲ್ಲಿ 2611 ಲಸಿಕೆ ಹಾಕುವ ಸಿಬ್ಬಂದಿಗಳಿದ್ದು 265 ಮೇಲ್ವಿಚಾರಕರು ಇರುತ್ತಾರೆ. ಇವರು ನಗರ ಪ್ರದೇಶದ ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ತೋಟದ ಮನೆಗಳಿಗೆ ತೆರಳಿ ಲಸಿಕೆ ಹಾಕುತ್ತಾರೆ. ಇದಕ್ಕಾಗಿ ಸಾರ್ವಜನಿಕರು ಈ ಸೌಲಬ್ಯ ಉಪಯೋಗಿಸಿಕೊಂಡು ಮಕ್ಕಳನ್ನು ಪೋಲಿಯೋದಿಂದ ಮುಕ್ತಗೊಳಿಸಿಬೇಕು ಎಂದರು. ಕಾರ್ಯಕ್ರಮದಲ್ಲಿ ಶಾಸಕ ಎಚ್‌ ವಾಯ್‌ ಮೇಟಿ ಜಿಲ್ಲಾಧಿಕಾರಿ ಶಾಂತಾರಾಮ ಕೆ. ಈ ಜಿಲ್ಲಾ ಪಂಚಾಯತ ಸಿ.ಇ.ಓ ವಿಕಾಸ ಸುರಳಕರ ತಾ.ಪಂ ಅಧ್ಯಕ್ಷ ಚನ್ನನಗೌಡ ಪರನಗೌಡರ ಜಿ.ಪಂ ಸದಸ್ಯೆ ಸುಜಾತಾ ಶಿಂಗಾಡೆ ನಗರ ಸಭೆ ಉಪಾದ್ಯಕ್ಷೆ ಭಾರತಿ ಕೂಡಗಿ ಡಿ.ಎಚ್‌.ಓ ಎ ಎನ್‌ ದೇಸಾಯಿ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳಾದ ಡಾ. ದಿಲೀಪ್‌ ಗಂಜಾಳ, ಡಾ.ಶ್ರೀಕಾಂತ ತೇಲಸಂಗ, ಡಾ.ಜಯಶ್ರೀ ಎಮ್ಮಿ, ಡಾ.ಪರಶುರಾಮ ಹಿಟ್ನಳ್ಳಿ, ಡಾ.ಪ್ರಮೋದ, ಡಾ.ಬಿ ಜಿ ಹುಬ್ಬಳ್ಳಿ ಮತ್ತಿತರರಿದ್ದರು.

loading...