ಅಪರಾಧಗಳು ಕಡಿಮೆ ಆಗಬೇಕು: ಶಾಸಕ ವಿಶ್ವೇಶ್ವರ

0
61

ಕನ್ನಡಮ್ಮ ಸುದ್ದಿ-ಸಿದ್ದಾಪುರ: ದೇಶದಲ್ಲಿ ಸುಶಿಕ್ಷಿತರ ಸಂಖ್ಯೆ ಹೆಚ್ಚಾದಂತೆ ಅಪರಾಧಗಳು ಕಡಿಮೆ ಆಗಬೇಕು, ಒಳ್ಳೆಯ ಆಹಾರ ಪದ್ದತಿ ನಮ್ಮದಾಗಬೇಕು. ಶಾಂತಿಯುತ ಜೀವನ ನಡೆಯಬೇಕು. ಆದರೆ ಪೋಲಿಸ್‌ ಠಾಣೆಗಳಲ್ಲಿ ಅಪರಾಧಗಳ ಸಂಖ್ಯೆ ಜಾಸ್ತಿಯಾಗಿದೆ. ರೋಗಗಳು ಜಾಸ್ತಿ ಆಗಿವೆ. ಸಮಾಜದಲ್ಲಿ ಸಾಮರಸ್ಯ ಇಲ್ಲದಾಗಿದೆ. ಶಿಕ್ಷಣ ಪದ್ದತಿಯಲ್ಲಿ ಬದಲಾವಣೆಯಾಗಿ ಸಂಸ್ಕಾರಯುತ ಶಿಕ್ಷಣದ ಅವಶ್ಯಕತೆ ಇದೆ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯ ಪಟ್ಟರು.
ಅವರು ತಾಲೂಕಿನ ಹಿತ್ಲಕೊಪ್ಪದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸುವರ್ಣ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಶಿಕ್ಷಣವಂತರಾದ ನಾವು ಸ್ವಾಭಿಮಾನ, ರಾಷ್ಟ್ರಾಭಿಮಾನ ಬೆಳಸಿಕೊಂಡು ದೇಶಕ್ಕಾಗಿ ದುಡಿಯಬೇಕು. ಅಂದಿನ ಕಾಲದಲ್ಲಿ ಮಾದರಿ ಶಾಲೆಯಾಗಿದ್ದ ಈ ಶಾಲೆಯ ಕಾರ್ಯಕ್ರಮವನ್ನು ಜನೋತ್ಸಾಹದ ಹಬ್ಬದಂತೆ ಆಚರಿಸುತ್ತಿದ್ದಿರಿ, ಕೆಲವು ಶಾಲೆಗಳಲ್ಲಿ 50,75 ವರ್ಷಗಳಾದರು ಮರೆತ್ತಿದ್ದಾರೆ. ಶಾಲೆ ಶಿಸ್ತುನಿಂದ,ಆಕರ್ಷಣೆಯಿಂದ ಕೂಡಿದೆ. ಅಪರೂಪದ ಗಾಂಧಿ ಸ್ಮಾರಕ ಚಿತ್ರಪಟಗಳು ನಿಮ್ಮಲ್ಲಿವೆ. ಅವುಗಳನ್ನು ರಕ್ಷಿಸಿದ್ದಿರಿ. ಶಾಲೆಗೆ ಬೇಕಾಗಿರುವ ಕಂಪ್ಯೂಟರ್‌ ಕೊಡಿಸುವ ವ್ಯವಸ್ಥೆ ಮಾಡುತ್ತೆನೆ. ಸರಕಾರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಪರೀಕ್ಷೆ ಹತ್ತಿರವಿರುವ ಈ ಸಮಯದಲ್ಲಿ ಶಿಕ್ಷಕರ ವರ್ಗಾವಣೆ ಸರಿಯಾದ ಕ್ರಮವಲ್ಲ. ಅಭಿವೃದ್ದಿ ಯಾವತ್ತು ಇರಬೇಕು. ಕೇವಲ ಶಿಕ್ಷಣ ಪಡೆದರೆ ಸಾಲದು ಜೊತೆಗೆ ಒಳ್ಳೆಯ ಸಂಸ್ಕಾರವನ್ನು ಪಡೆಯಬೇಕು ಎಂದರು.
ಸಾಹಿತಿ ಸುಬ್ರಾಯ ಹೆಗಡೆ ಮತ್ತಿಹಳ್ಳಿ, ರಾಷ್ಟ್ರ ಪ್ರಶಸ್ತಿ ಶಿಕ್ಷಕ ಜಿ,ಜಿ,ಹೆಗಡೆ ಬಾಳಗೋಡ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು
ವೇದಿಕಯಲ್ಲಿ ತಾಪಂ.ಅಧ್ಯಕ್ಷ ಸುಧೀರ ಗೌಡರ್‌, ಉಪಾಧ್ಯಕ್ಷೆ ದಾಕ್ಷಾಯಣಿ ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ,
ಗ್ರಾಪಂ,ಅಧ್ಯಕ್ಷೆ ಲಲಿತಾ ಕಟ್ಟೆಮನೆ,ಸದಸ್ಯರಾದ ವೀಣಾ ಗೌಡ, ಗೋಪಾಲ ನಾಯ್ಕ, ಎಸ್‌,ಡಿ,ಎಂಸಿ,ಅಧ್ಯಕ್ಷ ವೆಂಕಟ್ರಮಣ ಆಚೆದಿಂಬ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಹಾಲಿಂಗ ಆಡೇಮನೆ ಉಪಸ್ಥಿತರಿದ್ದರು. ಸುವರ್ಣೋತ್ಸವ ಸಮಿತಿ ಗೌರವಾಧ್ಯಕ್ಷ ಮೋಹನ ಮಡಿವಾಳ ಪ್ರಾಸ್ಥಾವಕ ಮಾತನಾಡಿದರು. ಮುಖ್ಯೋಧ್ಯಾಪಕ ಆರ್‌,ಪಿ.ಶಾಸ್ತ್ರಿ ವರದಿ ವಾಚಿಸಿದರು. ಶಾಲಾ ವಿದ್ಯಾರ್ಥಿಗಳು. ಸುವರ್ಣೋತ್ಸವ ಸಮಿತಿ ಅಧ್ಯಕ್ಷ ರಾಜು ಕಟ್ಟಮನೆ ಸ್ವಾಗತಿಸಿದರು. ಪ್ರಾರ್ಥಿಸಿದರು. ಹಳೇ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಡಾ.ಉದಯ ಆಡೇಮನೆ ನಿರೂಪಿಸಿದರು.

loading...