ಅಜ್ಞಾನ ಮೂಢನಂಬಿಕೆ ಅಳಿಸುವದೇ ಶರಣ ಸಂಸ್ಕೃತಿಯ ಉದ್ದೇಶ: ಶಿವಬಸವ ಸ್ವಾಮೀಜಿ

0
61

 

ಅಥಣಿ 07: ಸಮಾಜದಲ್ಲಿಯ ಅಜ್ಞಾನ ಮೂಡನಂಬಿಕೆ ಅಳಿಸಿ, ಶರಣ ಪರಂಪರೆ ತತ್ವಾದರ್ಶಗಳಾದ ಕಾಯಕ, ಜ್ಞಾನದಾಸೋಹ, ಅಣ್ಣ ದಾಸೋಹ, ಸಂಸ್ಕಾರ ಮತ್ತು ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳಿಸುವುದೇ ನಮ್ಮ ಗಚ್ಚಿನ ಮಠದ ಪರಂಪರೆಯಾಗಿದೆ ಎಂದು ಗಚ್ಚಿಮಠದ ಪೂಜ್ಯ ಶಿವಬಸವ ಮಹಾಸ್ವಾಮಿಗಳು ಹೇಳಿದರು.

ಶ್ರೀಮಠದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಫೆ.8 ರಿಂದ 15 ವರೆಗೆ ಮಹಾತಪಸ್ವಿ ಶ್ರೀ ಮುರುಘೇಂದ್ರ ಶಿವಯೋಗಿಗಳ ಸುಕ್ಷೇತ್ರ ಚಿತ್ರದುರ್ಗ ಮುರಾಘಮಠದ ಶಾಖಾ ಮಠ ಶ್ರೀ ಗಚ್ಚಿನಮಠ ಅಥಣಿಯಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಶರಣ ಸಂಸ್ಕೃತಿ ಉತ್ಸವದ ಪೂರ್ವಭಾವಿ ಸುದ್ದಿಮಾದ್ಯಮದವರ ಸಭೇಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ದಿ 8 ರಂದು ದಾನಮ್ಮಾದೇವಿ ಪಾದಾಯಾತ್ರಾ ಕಮಿಟಿ ಹಾಗೂ ಶ್ರೀ ಗಚ್ಚಿನಮಠದ ಸಹಯೋಗದಲ್ಲಿ ಸಹಸ್ರ ಸಹಸ್ರ ಮುತ್ತೈದೆಯರ ಉಡಿ ತುಂಬುವ ಕಾರ್ಯಕ್ರಮ, 13 ಮತ್ತು 14 ರಂದು ಸಹಜ ಶಿವಯೋಗ 9 ಮತ್ತು 11 ರಂದು ಪ್ರವಚನ ಮಂಗಲ, ಜಮುರಾ ನಾಟಕೋತ್ಸವ, ಹಾಗೂ ಸೈನಿಕ ಕೃಷಿಕ, ಶಿಕ್ಷಕರ ಸಮಾವೇಶ 10 ರಂದು ಜಮುರಾ ನಾಟಕೋತ್ಸವ ಸ್ಥಳ ವಿದ್ಯಾಪೀಠದ ಆವರಣ, 12 ರಂದು ಸಂಜೆ 6 ಕ್ಕೆ ಶರಣ ಸಂಸ್ಕೃತಿ ಉದ್ಘಾಟನೆ, ಸ್ವಾತ್ರಾಂತ್ಯ ಸಂಗ್ರಾಮ ತಿಲಕರು ಮತ್ತು ಶಿವಯೋಗಿಗಳ ಸಮಾಗಮ ಶತಮಾನೋತ್ಸವ ಸಂಭ್ರಮ.

ಅಧ್ಯಕ್ಷತೆ ಡಾ.ಶಿವಮೂರ್ತಿ ಮುರುಘಾ ಶರಣರು, ಸುಗಮ ಸಂಗೀತ ಝೀ ಟಿವಿಯ ಸರಿಗಮಪ ಚಿಣ್ಣರು ಭಾಗವಹಿಸಲಿದ್ದಾರೆ. ದಿ 13 ರಂದು ಬೆಳಿಗ್ಗೆ 7.30ಕ್ಕೆ ಸಹಜಶಿವಯೋಗ ಸ್ಥಳ ಶ್ರೀಮಠದ ಆವರಣದಲ್ಲಿ. ಬೆಳಿಗ್ಗೆ 9 ಕ್ಕೆ ಬಸವ ಧರ್ಮ ಧ್ವಜಾರೋಹಣ,ಪಲ್ಲಕ್ಕಿ ಉತ್ಸವ ಹಾಗೂ ವಾಸನತೋಳ ಮೆರವಣಿಗೆ ಮದ್ಯಾನ 12 ಕ್ಕೆ ಮಹಾಶಿವರಾತ್ರಿ ಶಿವಯೋಗ ಹಾಗೂ ಮಹಾದಾಸೋಹ, ಸಂಜೆ 6 ಕ್ಕೆ ಚಿಂತನ ಗೋಷ್ಠಿ, ರಾತ್ರಿ 9 ಕ್ಕೆ ಮಹಾ ಶಿವರಾತ್ರಿ ಸಂಗೀತ ಉತ್ಸವ ನಡೆಯುವದೆಂದರು. ಈ ಸುದ್ದಿ ಗೋಷ್ಠಿಯಲ್ಲಿ ದಾನಮ್ಮಾದೇವಿ ಪಾದಾಯಾತ್ರಾ ಕಮಿಟಿಯ ಅಧ್ಯಕ್ಷರಾದ ಶಿವಾನಂದ ದಿವಾನಮಳ, ಹನುಮಂತ ಕಾಲುವೆ, ರಾಮಣ್ಣ ಗೌಡಾ ಪಾಟೀಲ, (ಶಿವನೂರಗೌಡರು)ಬಸವರಾಜ ಕೋಟಿ, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು. ಇದೇ ಸಮಯದಲ್ಲಿ ವiಹಾ ಶಿವರಾತ್ರಿ ನಿಮಿತ್ತ ಶರಣ ಸಂಸ್ಕೃತಿ ಉತ್ಸವದ ಹಾಗೂ ಪ್ರಚಾರ ಪತ್ರಿಕೆಯ ಬಿಡುಗಡೆ ಸಮಾರಂಭ ನಡೆಯಿತು.

loading...