ಮೀನುಗಾರರ ಸಂಘಗಳನ್ನು ಬಲಪಡಿಸಲು ಕ್ರಮ ವಹಿಸಬೇಕೆಂದು ಮನವಿ

0
86

ಕನ್ನಡಮ್ಮ ಸುದ್ದಿ-ಅಂಕೋಲಾ: 4-2-2018ರಂದು ರವಿವಾರ ಬೆಳ್ಳಿಗ್ಗೆ 11 ಗಂಟೆಗೆ ಅಂಕೋಲಾ ತಾಲೂಕಿನ ಹಿಲ್ಲೂರು ಮೀನುಗಾರರ ಸಹಕಾರಿ ಸಂಘ (ರಿ) ಹಿಲ್ಲೂರು ಸಂಘದ ಸಭೆ ಸಂಸ್ಥಾಪಕ ಅಧ್ಯಕ್ಷ ಹರಿಹರ ವಿ. ಹರಿಕಾಂತ ಹಿಲ್ಲೂರು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತಾಡಿದ ಅವರು, ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ಉತ್ತರ ಕನ್ನಡದಲ್ಲಿರುವ ಮೀನುಗಾರರ ಸಹಕಾರಿ ಸಂಘಗಳನ್ನು ಬಲಪಡಿಸಲು ಕ್ರಮ ವಹಿಸಬೇಕೆಂದು ನಿಯೋಗವೊಂದು ಅವರನ್ನು ಭೇಟಿ ಮಾಡಿ ಮನವಿ ನೀಡಲಾಗಿದೆ. ಈ ದಿಸೆಯಲ್ಲಿ ಮೀನುಗಾರರ ಸಹಕಾರಿ ಸಂಘಗಳನ್ನು ಬಲಪಡಿಸಲು ಅವರು ಕ್ರಮ ತೆಗೆದುಕೊಳ್ಳುತ್ತಾರೆ ಎಂಬ ಆಶಾಭಾವನೆ ಇದೆ ಎಂದು ಅವರು ನುಡಿದರು.
ಈ ಸಂದರ್ಭದಲ್ಲಿ ಸಂಘದ ಗುರುತಿನ ಚೀಟಿಗಳನ್ನು ಬಿಡುಗಡೆಗೊಳಿಸಿದರು. ಈ ಸಭೆಯಲ್ಲಿ ಉಪಾಧ್ಯಕ್ಷ ಮಂಜುನಾಥ ಹರಿಕಾಂತ, ಅಧ್ಯಕ್ಷರುಗಳಾದ ಬೀರಪ್ಪ ಹರಿಕಾಂತ, ಈಶ್ವರ ಹರಿಕಾಂತ, ವಿಠ್ಠಲ ಹರಿಕಾಂತ, ಶಾರದಾ ಹರಿಕಾಂತ, ನಾಗಪ್ಪ ಹರಿಕಾಂತ ಮೊದಲಾದವರು ಉಪಸ್ಥಿತರಿದ್ದರು.

loading...